ರಿಪ್ಪನ್ ಪೇಟೆ: ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷದಿಂದ ಗವಟೂರು ಗ್ರಾಮದ ಹಳಿಯೂರು (ಮತ್ತಿಮನೆ, ಸಂಪಳ್ಳಿ ಸಂಪರ್ಕ)ಭಾಗದ ಜನರು ಕಳೆದ 60 ವರ್ಷಗಳಿಂದ ಸೇತುವೆ ಇಲ್ಲದೆ ಮಳೆಗಾಲದ ಸಂದರ್ಭದಲ್ಲಿ ನರಕಯಾತನೆ ಅನುಭವಿಸುತ್ತಿದ್ದಾರೆ.
ದಿನ ನಿತ್ಯದ ವಸ್ತುಗಳನ್ನು ಖರೀದಿಸುವರು, ಶಾಲೆಗೆ ಹೋಗುವ ಮಕ್ಕಳು, ತುರ್ತು ಸಂದರ್ಭದಲ್ಲಿ ಆಸ್ಪತ್ರೆಗೆ ಹೋಗೋಕೆ ಆಗದೇ ಪರದಾಡುತ್ತಿರುವ ಊರಿನ ಜನರು, ಕೃಷಿ ಚಟುವಟಿಕೆಗಳಿಗೆ ಬೇಕಾಗುವ ಗೊಬ್ಬರ ಇತ್ಯಾದಿ ಮೂಲಭೂತ ಸೌಕರ್ಯಗಳ ಸಮಯಕ್ಕೆ ಸರಿಯಾಗಿ ಪಡೆಯಲು ಕೃಷಿಕರು ಸೇತುವೆ ಇಲ್ಲದೆ ಸಂಕಟಪಡುತ್ತಿದ್ದಾರೆ.
ಗ್ರಾಮಸ್ಥರು ಸೇತುವೆ ರಸ್ತೆ ಇಲ್ಲದೆ ಬೇಸತ್ತು ಹೋಗಿದ್ದಾರೆ ಸ್ವತಃ ರೈತರೆ ಸಾವಿರಾರು ರೂಪಾಯಿ ಖರ್ಚು ಮಾಡಿ ಓಡಾಡಿದರು ಯಾವೊಬ್ಬ ಅಧಿಕಾರಿ, ರಾಜಕಾರಣಿಗಳ ಸೂಕ್ತ ಸ್ಪಂದನೆ ಇಲ್ಲ, ರಾಜಕಾರಣಿಗಳು ಚುನಾವಣೆ ಸಂದರ್ಭದಲ್ಲಿ ಮಾತ್ರ ಬಂದು ಆಶ್ವಾಸನೆ ನೀಡಿಹೋಗುತ್ತಾರೆ ವಿನಃ ಕಾರ್ಯರೂಪಕ್ಕೆ ಬಂದಿಲ್ಲ.
ರಾಜಕಾರಣಿ ಗಳ ಪೊಳ್ಳು ಭರವಸೆ ಇಂದ ಮುಂದಿನ ಚುನಾವಣೆಯಲ್ಲಿ ಹಳಿಯೂರು ಸುತ್ತಮುತ್ತ ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರ ಮಾಡಲಾಗುವುದು ಎಂದು ಗ್ರಾಮಸ್ಥ ಕಶ್ಯಪ್ ಆಚಾರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೇತುವೆ ಇಲ್ಲದೆ ಸಂಪಳ್ಳಿ,ಮತ್ತಿಮನೆ,ಜಂಬಲ್ಲಿ, ಕೊಳವಳ್ಳಿ, ಕಲ್ಕೊಪ್ಪ, ಹಳ್ಳಿಗಳಿಗೆ ಸಂಪರ್ಕ ಕಳೆದು ಕೊಂಡಿದೆ ಇಲ್ಲಿನ ಸುತ್ತ ಮುತ್ತಲಿನ ಜನರು ಇಲ್ಲಿಗೊಂದು ಸೇತುವೆ ಮಾಡಿ ಕೊಡಿ ಮಕ್ಕಳಿಗೆ ಶಾಲೆಗೆ ಹೋಗಲು ಆಸ್ಪತ್ರೆ ಹೋಗಲು ದಾಟಲು ಆಗುತ್ತಿಲ್ಲ ಎಂದು ಮನವಿ ಮಾಡಿದ್ದರು ಯಾರು ಗಮನ ಹರಿಸಿಲ್ಲ.
ದಯವಿಟ್ಟು ಇನ್ನಾದರೂ ಜಿಲ್ಲಾಡಳಿತ ಹಾಗು ಶಾಸಕರು ರೈತರ ನೆರವಿಗೆ ದಾವಿಸಿ ಅಲ್ಲಿ ಒಂದು ಸೇತುವೆ ನಿರ್ಮಾಣ ಮಾಡಬೇಕು, ಹಳ್ಳಿಗರ ನಿರ್ಲಕ್ಷ ಬೇಡ ನಮಗೆ ಮೂಲ ಭೂತ ಸೌಕರ್ಯ ಕೊಡಿ ಇಲ್ಲವಾದರೆ ಮುಂದೆ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡುತ್ತೇವೆ ಎಂದು ಗ್ರಾಮಸ್ಥರು ಎಚ್ಚರಿಕೆ ಕೊಟ್ಟಿದ್ದಾರೆ.
ವರದಿ: ರಾಮನಾಥ್
ಪೋಸ್ಟ್ ಮ್ಯಾನ್ ನ್ಯೂಸ್ ನ ಎಲ್ಲಾ ಸುದ್ದಿಗಳ ಅಪ್ ಡೇಟ್ ಪಡೆಯಲು ಈ ಕೆಳಗಿನ ವಾಟ್ಸಾಪ್ ಲಿಂಕ್ ಬಳಸಿ..