Headlines

ರಿಪ್ಪನ್‌ಪೇಟೆ ಕೃಷಿ ಪತ್ತಿನ ಸಹಕಾರ ಸಂಘ ಆಡಳಿತ ಮಂಡಳಿ ಚುನಾವಣೆ – ಎಂ ಎಂ ಪರಮೇಶ್ ತಂಡಕ್ಕೆ ಭರ್ಜರಿ ಜಯ|Rpet news

ರಿಪ್ಪನ್‌ಪೇಟೆ  ಕೃಷಿ ಪತ್ತಿನ ಸಹಕಾರ ಸಂಘ ಆಡಳಿತ ಮಂಡಳಿ ಚುನಾವಣೆ – ಎಂ ಎಂ ಪರಮೇಶ್ ತಂಡಕ್ಕೆ ಭರ್ಜರಿ ಜಯ.  ರಿಪ್ಪನ್ ಪೇಟೆ: ಪಟ್ಟಣದ ಕೃಷಿ ಪತ್ತಿನ ಸಹಕಾರ ಸಂಘ ಆಡಳಿತ   ಮಂಡಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಹಾಗೂ ಶಿವಮೊಗ್ಗ ಜಿಲ್ಲಾ ಸಹಕಾರ ಬ್ಯಾಂಕಿನ ನಿರ್ದೇಶಕ ಎಂಎಂ ಪರಮೇಶ್ ತಂಡಕ್ಕೆ ಭರ್ಜರಿ ಜಯ ಲಭಿಸಿದೆ. ಪಟ್ಟಣದ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 12 ಜನ ಸದಸ್ಯರ ಆಡಳಿತ ಮಂಡಳಿ ಇದ್ದು, ಇದರಲ್ಲಿ ಏಳು ಜನ ಸದಸ್ಯರುಗಳು…

Read Full News

ಶಾಲೆ ಸಮಯಕ್ಕೆ ಬಸ್ ಬಿಡಿಸಿ ಸರ್: ಸಚಿವ ಮಧು ಬಂಗಾರಪ್ಪ ಬಳಿ ಮಕ್ಕಳ ಮನವಿ|madhu bangarappa

ಶಾಲೆ ಸಮಯಕ್ಕೆ ಬಸ್ ಬಿಡಿಸಿ ಸರ್: ಸಚಿವ ಮಧು ಬಂಗಾರಪ್ಪ ಬಳಿ ಮಕ್ಕಳ ಮನವಿ ಸೊರಬ: ಶಾಲಾ ಅವಧಿಗೆ ಸರಿಯಾರಿ ತಲುಪಲು ಬಸ್ ವ್ಯವಸ್ಥೆ ಕಲ್ಪಿಸುವಂತೆ ವಿದ್ಯಾರ್ಥಿನಿಯರು ಶಿಕ್ಷಣ ಹಾಗೂ ಜಿಲ್ಲಾ ಉಸ್ತವಾರಿ ಸಚಿವ ಎಸ್. ಮಧು ಬಂಗಾರಪ್ಪ ಅವರಿಗೆ ಮನವಿ ಸಲ್ಲಿಸಿದರು.  ತಾಲೂಕಿನ ತಲಗಡ್ಡೆ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಕಾರ್ಯಕ್ರಮಕ್ಕೆ ಸಚಿವರು ಆಗಮಿಸಿದ ವೇಳೆ ವಿದ್ಯಾರ್ಥಿನಿಯರು ಮನವಿ ಸಲ್ಲಿಸಿದರು.  ತಲಗಡ್ಡೆ ಗ್ರಾಮದಿಂದ ಜಡೆ ಗ್ರಾಮಕ್ಕೆ ಶಾಲಾ ಅವಧಿಗೆ ತೆರಳು ಬಸ್ ವ್ಯವಸ್ಥೆ ಇಲ್ಲದೇ ಇಲ್ಲದೇ…

Read Full News

ಸರ್ವೇ ಇಲಾಖೆಗೆ ದಿಢೀರ್ ಭೇಟಿ ನೀಡಿದ ಶಾಸಕ ಆರಗ ಜ್ಞಾನೇಂದ್ರ|araga

ತೀರ್ಥಹಳ್ಳಿ ತಾಲೂಕಿನಲ್ಲಿ ಇತ್ತೀಚೆಗೆ ನಿರಂತರವಾಗಿ ರೈತರು ಮತ್ತು ಸಾರ್ವಜನಿಕರಿಂದ ತೀರ್ಥಹಳ್ಳಿಯ ಸರ್ವೇ ಅಧಿಕಾರಿಗಳ ಕರ್ತವ್ಯ ಲೋಪದ ವಿರುದ್ಧ ಅನೇಕ ಬಾರಿ ದೂರುಗಳು ಕೇಳಿ ಬಂದ ಮೇರೆಗೆ ಶನಿವಾರ ಸಂಜೆ ಸರ್ವೇ ಇಲಾಖೆಗೆ ಭೇಟಿ ನೀಡಿದ ಶಾಸಕರಾದ ಆರಗ ಜ್ಞಾನೇಂದ್ರ ರೈತರು ಮತ್ತು ಸಾರ್ವಜನಿಕರ ಅಹವಾಲು ಸ್ವೀಕರಿಸಿದರು. ಈ ವೇಳೆ ಅಕ್ರಮ ಭೂ ಮಂಜೂರಾತಿಗೆ ಸರ್ವೇ ಕಚೇರಿಯಲ್ಲಿ ಸಹಕರಿಸಿದ್ದಾರೆ ಎನ್ನುವ ದೂರು ಸ್ಥಳದಲ್ಲಿ ಕೇಳಿ ಬಂದ ಮೇರೆಗೆ ದಾಖಲೆಗಳೊಂದಿಗೆ ಸರ್ವೇ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಸರ್ವೇ ಇಲಾಖೆಯ ಕಮಿಷನ್…

Read Full News

ರಿಪ್ಪನ್‌ಪೇಟೆ : ಜುಮ್ಮಾ ಮಸೀದಿ‌ ಮುಂಭಾಗದಲ್ಲಿ ಬಾರ್ ತೆರೆಯಲು ಯತ್ನ – ಸ್ಥಳದಲ್ಲಿ ಪ್ರಕ್ಷ್ಯುಬ್ದ ವಾತಾವರಣ|Ripponpet news

ರಿಪ್ಪನ್‌ಪೇಟೆ : ಜುಮ್ಮಾ ಮಸೀದಿ‌ ಮುಂಭಾಗದಲ್ಲಿ ಬಾರ್ ತೆರೆಯಲು ಯತ್ನ – ಸ್ಥಳದಲ್ಲಿ ಪ್ರಕ್ಷ್ಯುಬ್ದ ವಾತಾವರಣ ರಿಪ್ಪನ್‌ಪೇಟೆ : ಇಲ್ಲಿನ ಹೊಸನಗರ ರಸ್ತೆಯ ಮೊಹಿಯುದ್ದೀನ್ ಜುಮ್ಮಾ ಮಸೀದಿ ಮುಂಭಾಗದ ಖಾಸಗಿ ಲಾಡ್ಜ್ ವೊಂದರಲ್ಲಿ ವಿರೋಧದ ನಡುವೆಯೂ ಬಾರ ತೆರೆಯಲು ಹೊರಟಿರುವ ಮಧ್ಯದ ಅಂಗಡಿಗೆ ಸಾರ್ವಜನಿಕರಿಂದ ಬಾರಿ ವಿರೋಧ ವ್ಯಕ್ತವಾಗಿದೆ.ಸ್ಥಳದಲ್ಲಿ ಪ್ರಕ್ಷ್ಯುಬ್ದ ವಾತವರಣ ನಿರ್ಮಾಣವಾಗಿದೆ. ಪಟ್ಟಣದ ಜುಮ್ಮಾ ಮಸೀದಿ ಮುಂಭಾಗದ ಖಾಸಗಿ ಕಟ್ಟಡ ಒಂದರಲ್ಲಿ ನೂತನವಾಗಿ ಸಿ ಎಲ್ 7 ಮದ್ಯದ ಅಂಗಡಿ ತೆರೆಯುವ ಹಿನ್ನೆಲೆಯಲ್ಲಿ ಶನಿವಾರ ಸಂಜೆ…

Read Full News

ಗಾಯಗೊಂಡಿದ್ದ 12 ಅಡಿ ಉದ್ದದ ಕಾಳಿಂಗ ಸರ್ಪಕ್ಕೆ ಶಸ್ತ್ರ ಚಿಕಿತ್ಸೆ

ತೀರ್ಥಹಳ್ಳಿ : ಪ್ರಾಣಿ, ಪಕ್ಷಿಗಳಿಗೆ ಶಸ್ತ್ರಚಿಕಿತ್ಸೆ ಮಾಡುವುದು ತುಂಬಾ ಕಷ್ಟಕರವಾದ ಕೆಲಸ. ಆದರೆ ತೀರ್ಥಹಳ್ಳಿಯ ಕಾಳಿಂಗ ಫೌಂಡೇಷನ್ ಸದಸ್ಯರು ಗಾಯಗೊಂಡಿದ್ದ 12 ಅಡಿ ಉದ್ದದ ಕಾಳಿಂಗ ಸರ್ಪವನ್ನು ರಕ್ಷಿಸಿ ಆಪರೇಷನ್ ನಡೆಸಿ ಆರೋಗ್ಯ ಸುಧಾರಿಸಿದ ಮೇಲೆ ಕಾಡಿಗೆ ಬಿಟ್ಟಿದ್ದಾರೆ. ತೀರ್ಥಹಳ್ಳಿಯ ಕಮ್ಮರಡಿಯ ಮನೆಯೊಂದರ ಬಳಿ ಕಾಳಿಂಗ ಸರ್ಪ ಕಾಣಿಸಿಕೊಂಡಿತ್ತು. ಮಾಹಿತಿ ತಿಳಿಯುತ್ತಿದಂತೆ ಕಾಳಿಂಗ ಫೌಂಡೇಶನ್ ಸದಸ್ಯರು ಭೇಟಿ ನೀಡಿದ್ದರು. ಆಗ ಕಾಳಿಂಗ ಸರ್ಪ ಗಾಯಗೊಂಡಿರುವ ವಿಚಾರ ಗೊತ್ತಾಗಿದೆ. ನಂತರ ಹಾವನ್ನು ಹಿಡಿದು ಮೇಗರವಳ್ಳಿ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿ…

Read Full News

ಮಲ್ಲಿಕಾರ್ಜುನ ಖರ್ಗೆಯವರನ್ನು ಕೀಳು ಮಟ್ಟದಿಂದ ನೋಡುವ ರಾಜಕಾರಣಿ ನಾನಲ್ಲ – ಆರಗ ಜ್ಞಾನೇಂದ್ರ |araga

ಮಲ್ಲಿಕಾರ್ಜುನ ಖರ್ಗೆಯವರನ್ನು ಕೀಳು ಮಟ್ಟದಿಂದ ನೋಡುವ ರಾಜಕಾರಣಿ ನಾನಲ್ಲ – ಆರಗ ಜ್ಞಾನೇಂದ್ರ  ತೀರ್ಥಹಳ್ಳಿ : ಅರಣ್ಯ ಸಚಿವರ ಹೇಳಿಕೆ ವಿರುದ್ಧ ಪ್ರತಿಭಟನೆ ಮಾಡುವ ಸಂದರ್ಭದಲ್ಲಿ ಆಡಿದಂತಹ ಕೆಲವು ಮಾತುಗಳನ್ನು ಆಡದೇ ಇರುವ ಮಾತುಗಳನ್ನು ಸೇರಿಸಿ ರಾಜಕಾರಣಕ್ಕೆ ಬಳಸಿ ರಾಜ್ಯಾದ್ಯಂತ ಸುದ್ದಿಯಾಗಿದೆ. ಅದರ ಬಗ್ಗೆ ಯಾರಿಗಾದರೂ ಮನಸ್ಸಿಗೆ ಕಸಿವಿಸಿ ಆಗಿದ್ದರೆ ವಿಶೇಷವಾಗಿ ಮಲ್ಲಿಕಾರ್ಜುನ ಖರ್ಗೆಯವರಿಗೆ ಕ್ಷಮೆಯಾಚನೆ ಮಾಡುತ್ತೇನೆ ಎಂದು ಶಾಸಕ, ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ ವಿಷಾದ ವ್ಯಕ್ತಪಡಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನೆಡೆಸಿ…

Read Full News

ಧರ್ಮಸ್ಥಳದ ಹೆಗ್ಗಡೆಯವರ ತೇಜೋವಧೆ ಖಂಡನೀಯ – ಹೊಂಬುಜ ಶ್ರೀ|hombuja

  ಧರ್ಮಸ್ಥಳದ ಹೆಗ್ಗಡೆಯವರ ತೇಜೋವಧೆ ಖಂಡನೀಯ ಹೊಂಬುಜ : 2012ರಲ್ಲಿ ನಡೆದ ಸೌಜನ್ಯ ಕೊಲೆ ಪ್ರಕರಣವನ್ನು ಮುಂದಿಟ್ಟುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಕೆಲವರು ಬಹಿರಂಗವಾಗಿ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ತೇಜೋವಧೆ ಮಾಡುತ್ತಿರುವುದು ಖಂಡನೀಯ ಎಂದು ಹೊಂಬುಜ ಜೈನ ಮಠದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ತಿಳಿಸಿದ್ದಾರೆ. ಕಾನೂನಿನ ಮೂಲಕ ನ್ಯಾಯಕ್ಕಾಗಿ ಸರ್ಕಾರವನ್ನು ಆಗ್ರಹಿಸಿರುವ ಸಂತ್ರಸ್ಥರು ಕಾನೂನಿನ ಮೇಲೆ ನಂಬಿಕೆಯಿಟ್ಟು ತೀರ್ಮಾನ ಬರುವವರೆಗೆ ತಾಳ್ಮೆಯಿಂದ ಇರಬೇಕು. ಸಂತ್ರಸ್ಥರು ನ್ಯಾಯಾಂಗ ತನಿಖೆಗೆ…

Read Full News

ಆರಗ ಜ್ಞಾನೇಂದ್ರ ರವರ ಮೇಲೆ ಪೊಲೀಸರು ಸುಮೋಟೋ ಕೇಸ್ ದಾಖಲಿಸಲಿ – ಆರ್ ಎಂ ಮಂಜುನಾಥ್ ಗೌಡ|RMM

ಆರಗ ಜ್ಞಾನೇಂದ್ರ ರವರ ಮೇಲೆ ಪೊಲೀಸರು ಸುಮೋಟೋ ಕೇಸ್ ದಾಖಲಿಸಲಿ – ಆರ್ ಎಂ ಮಂಜುನಾಥ್ ಗೌಡ ತೀರ್ಥಹಳ್ಳಿ : ಶಾಸಕರಾಗಿ ಅಥವಾ ಸಚಿವರಾದ ನಂತರ ಸಂವಿಧಾನದ ವಿಧಿ ವಿಧಾನಗಳಿಗೆ ಬದ್ಧವಾಗಿ ನಡೆದುಕೊಳ್ಳುತ್ತೇವೆ ಎಂದು ಪ್ರಮಾಣ ಮಾಡುತ್ತೇವೆ. ಆದರೆ ಇವರು ಸಂವಿಧಾನದ ವಿರುದ್ಧವಾಗಿ ಮಾತನಾಡಿದ್ದಾರೆ. ಎಲ್ಲವನ್ನು ಗೃಹ ಸಚಿವರಾದ ನಂತರ ಪ್ರಾರಂಭ ಮಾಡಿದ್ದರು. ಗೃಹ ಸಚಿವರಾದ ಸ್ವಲ್ಪ ದಿನದಲ್ಲೇ ಮೈಸೂರಿನ ಮಹಿಳೆಯೊಬ್ಬರ ಬಗ್ಗೆ ಮಾತನಾಡಿದ್ದರು. ಈಗ ರಾಷ್ಟ್ರ ಕಂಡಂತಹ ಎತ್ತರದ ಮನುಷ್ಯನ ಬಗ್ಗೆ  ವೈಯಕ್ತಿಕವಾಗಿ ನಿಂದನೆ ಮಾಡಿದ್ದಾರೆ…

Read Full News

ಓವರ್ ಟೇಕ್ ಮಾಡುವಾಗ KSRTC ಬಸ್ ಗೆ ಖಾಸಗಿ ಬಸ್ ಡಿಕ್ಕಿ

ಓವರ್ ಟೇಕ್ ಮಾಡುವಾಗ KSRTC ಬಸ್ ಗೆ ಖಾಸಗಿ ಬಸ್ ಡಿಕ್ಕಿ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಗಿಳಾಲಗುಂಡಿ ಸಮೀಪ ಖಾಸಗಿ ಬಸ್ಸೊಂದು ಕೆಎಸ್​ಆರ್​ಟಿಸಿ ಬಸ್​ಗೆ ಸೈಡ್​ನಿಂದ ಡಿಕ್ಕಿಹೊಡೆದ ಘಟನೆ ಸಂಭವಿಸಿದೆ.  ಸಾಗರ-ಶಿವಮೂಗ್ಗ ರೂಟ್​ನಲ್ಲಿ KSRTC  ಹಾಗೂ ಖಾಸಗಿ ಬಸ್​ ಸಂಚರಿಸುತ್ತಿತ್ತು. ಈ ವೇಳೆ ಸೀಟ್​ ಹಾಕುವ ವಿಚಾರಕ್ಕೆ ಖಾಸಗಿ ಬಸ್, ಕೆಎಸ್​ಆರ್​ಟಿಸಿ ಬಸ್​ನ್ನ ಓವರ್​ ಟೇಕ್​ ಮಾಡಲು ಮುಂದಾಗಿದ್ದು, ಈ ವೇಳೆ ಬಸ್​ನ ಹಿಂಬದಿ ಕೆಎಸ್​ಆರ್​ಟಿಸಿ ಬಸ್​ಗೆ ಡಿಕ್ಕಿಯಾಗಿದೆ.  ಒಂದೇ ರೂಟ್​ನಲ್ಲಿ, ಹೆಚ್ಚು ಕಮ್ಮಿ ಒಂದೇ…

Read Full News

ವಿದ್ಯುತ್ ಕಂಬಕ್ಕೆ ಬಸ್ ಡಿಕ್ಕಿ – ಬಸ್ ಗೆ ವಿದ್ಯುತ್ ಪ್ರವಹಿಸಿ 35 ಪ್ರಯಾಣಿಕರು ಆಸ್ಪತ್ರೆಗೆ ದಾಖಲು – ಇಬ್ಬರು ವಿದ್ಯಾರ್ಥಿಗಳು ಮೆಗ್ಗಾನ್ ಗೆ..!!!

ಖಾಸಗಿ ಬಸ್ ವಿದ್ಯುತ್ ಕಂಬಕ್ಕೆ ಡಿಕ್ಕಿ – 35 ಪ್ರಯಾಣಿಕರು ಆಸ್ಪತ್ರೆಗೆ ದಾಖಲು ಸಾಗರ :  ಸಿಗಂದೂರು ಹೊಳೆಬಾಗಿಲಿನಿಂದ ಸಾಗರಕ್ಕೆ ಬರುತ್ತಿದ್ದ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಗೆಣಸಿಕುಣಿ ಸಮೀಪ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ. ವಿದ್ಯುತ್ ಕಂಬಕ್ಕೆ ಗುದ್ದಿದ ಪರಿಣಾಮ ವಿದ್ಯುತ್ ವೈರ್ ಬಸ್ ಗೆ ತಾಗಿ ಒಟ್ಟು 45 ಪ್ರಯಾಣಿಕರಲ್ಲಿ 35 ಪ್ರಯಾಣಿಕರಿಗೆ ವಿದ್ಯುತ್ ಶಾಕ್ ಹೊಡೆದಿದೆ. ಈ ಬಸ್ ನಲ್ಲಿ ಒಟ್ಟು 45 ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದರು,…

Read Full News

ಹೊಸನಗರ ಸಿಪಿಐ ಬಿ ಸಿ ಗಿರೀಶ್ ಸೇರಿದಂತೆ ಜಿಲ್ಲೆಯ ಏಳು ಪೊಲೀಸ್ ಇನ್ಸ್ ಪೆಕ್ಟರ್ ಗಳ ವರ್ಗಾವಣೆ :|transfer

ಹೊಸನಗರ ಸಿಪಿಐ ಬಿ ಸಿ ಗಿರೀಶ್ ಸೇರಿದಂತೆ ಜಿಲ್ಲೆಯ ಏಳು ಪಿ ಐ ಗಳ ವರ್ಗಾವಣೆ : ಹೊಸನಗರ ಸರ್ಕಲ್ ಇನ್ಸ್ ಪೆಕ್ಟರ್ ಗಿರೀಶ್ ಬಿ ಸಿ ಸೇರಿದಂತೆ ಜಿಲ್ಲೆಯ  ಏಳು ಪೊಲೀಸ್ ಇನ್ಸ್ ಪೆಕ್ಟರ್ ಗಳ ವರ್ಗಾವಣೆ ಮಾಡಲಾಗಿದೆ. ಸಿಪಿಐ ಗಿರೀಶ್ ರವರು ತುಮಕೂರು ಜಿಲ್ಲೆ ಪಾವಗಡ ಗ್ರಾಮಾಂತರ ಠಾಣೆಗೆ ವರ್ಗಾವಣೆಗೊಂಡಿದ್ದಾರೆ. ಹೊಸನಗರದಲ್ಲಿ ಈ ಹಿಂದೆ ಕಾರ್ಯ ನಿರ್ವಹಿಸಿದ್ದ ಗುರಣ್ಣ ಎಸ್ ಹೆಬ್ಬಾಳ್ ನೂತನ ಸಿಪಿಐ ಆಗಿ ವರ್ಗಾವಣೆಯಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯಿಂದ ವರ್ಗಾವಣೆಯಾದವರು ; ಗಿರೀಶ್‌…

Read Full News

ಹೊಸನಗರ : ಹುಲ್ಲಿನ ಬಣವೆಗೆ ತಗುಲಿದ ಬೆಂಕಿ – ನಷ್ಟ..!!|fire

ಹೊಸನಗರ : ಹುಲ್ಲಿನ ಬಣವೆಗೆ ತಗುಲಿದ ಬೆಂಕಿ – ನಷ್ಟ..!! ಹೊಸನಗರ ತಾಲ್ಲೂಕಿನ ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೆಳ್ಳಂಡ ಗ್ರಾಮದ ಹಾಲಪ್ಪ ಗೌಡ ಬಿನ್ ರುದ್ರಪ್ಪ ಗೌಡರಿಗೆ ಸೇರಿದ ಒಣ ಹುಲ್ಲಿನ ಬಣವೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಪಕ್ಕದಲ್ಲಿದ್ದ ಕೊಟ್ಟಿಗೆಗೂ ಬೆಂಕಿ ಹೊತ್ತಿದ ಘಟನೆ ಇಂದು ಮಧ್ಯಾಹ್ನ ಸಂಭವಿಸಿದ್ದು ಸುಮಾರು ಅಂದಾಜು 50 ಸಾವಿರ ರೂಪಾಯಿಯಷ್ಟು ನಷ್ಟವಾಗಿದೆ. ಆಗ್ನಿ ಶಾಮಕ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ತಕ್ಷಣ ಆಗಮಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದರಿಂದ…

Read Full News

ಕಸ್ತೂರಿ ರಂಗನ್ ವರದಿ ಜಾರಿಗೆ ತಂದ್ರೆ ಕರ್ನಾಟಕದಲ್ಲಿ ರಕ್ತ ಕ್ರಾಂತಿ ಆಗಲಿದೆ – ಆರಗ ಜ್ಞಾನೇಂದ್ರ|araga

ಕಸ್ತೂರಿ ರಂಗನ್ ವರದಿ ಜಾರಿಗೆ ತಂದ್ರೆ ಕರ್ನಾಟಕದಲ್ಲಿ ರಕ್ತ ಕ್ರಾಂತಿ ಆಗಲಿದೆ – ಆರಗ ಜ್ಞಾನೇಂದ್ರ  ತೀರ್ಥಹಳ್ಳಿ : ಬಿ ಎಸ್ ಯಡಿಯೂರಪ್ಪನವರ ಸರ್ಕಾರ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಕಸ್ತೂರಿ ರಂಗನ್ ವರದಿ ಜಾರಿಯನ್ನು ಒಪ್ಪುವುದಿಲ್ಲ ಎಂದು ಹೇಳಿತ್ತು. ಈಗ ಹೈಕೋರ್ಟ್ ನಾ ಗ್ರೀನ್ ಬೆಂಚ್ ಗೆ ಹೋಗಿ ಇಲ್ಲಿನ ಜನರ ಕುತ್ತಿಗೆಗೆ ಹಗ್ಗ ಹಾಕುವ ಕೆಲಸ ನೆಡೆಯುತ್ತಿದೆ ಎಂದು ಆರಗ ಜ್ಞಾನೇಂದ್ರ ಹೇಳಿದರು. ಮಂಗಳವಾರ ತಾಲೂಕು ಕಚೇರಿ ಎದುರು ಕಸ್ತೂರಿ ರಂಗನ್ ವರದಿ ಜಾರಿಯ…

Read Full News

ಡಿ ದರ್ಜೆ ನೌಕರನ ನಿವೃತ್ತಿಗೆ ಸ್ಪೆಷಲ್ ಗಿಫ಼್ಟ್ – ಉಪವಿಭಾಗಧಿಕಾರಿ ಕಾರಿನಲ್ಲಿ‌ ಮನೆಗೆ ಬೀಳ್ಕೊಡುಗೆ|Sagara news

ಡಿ ದರ್ಜೆ ನೌಕರನ ನಿವೃತ್ತಿಗೆ ಸ್ಪೆಷಲ್ ಗಿಫ಼್ಟ್ – ಉಪವಿಭಾಗಧಿಕಾರಿ ಕಾರಿನಲ್ಲಿ‌ ಮನೆಗೆ ಬೀಳ್ಕೊಡುಗೆ ಸಾಗರ : ತಮ್ಮ ಕಚೇರಿಯ ನೌಕರ ನಿವೃತ್ತಿಯಾದ ಹಿನ್ನೆಲೆಯಲ್ಲಿ ಸಾಗರ ಉಪವಿಭಾಗಾಧಿಕಾರಿ ವಿಶೇಷ ಗೌರವದೊಂದಿಗೆ ಆತನಿಗೆ ಬೀಳ್ಕೊಡಿಗೆ ಕೊಟ್ಟಿದ್ದಾರೆ.  ಉಪವಿಭಾಗಾಧಿಕಾರಿ ಪಲ್ಲವಿ ಸಾತೇನಹಳ್ಳಿ ಅವರು ನಿವೃತ್ತಿಯಾದ ನೌಕರ ಕೃಷ್ಣಪ್ಪ ಅವರನ್ನ ತಮ್ಮ ಸರ್ಕಾರಿ ವಾಹನದಲ್ಲಿ ಕೂರಿಸಿಕೊಂಡು ಹೋಗಿ ಮನೆಗೆ ಡ್ರಾಪ್‌ ಮಾಡುವ ಮೂಲಕ ಹೃದಯಸ್ಪರ್ಶಿ ಬೀಳ್ಕೊಡಿಗೆ ನೀಡಿದ್ದಾರೆ. ಸಾಗರ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಸುಮಾರು ವರ್ಷಗಳಿಂದ ಕರ್ತವ್ಯ ನಿರ್ವಹಿಸಿದ ಕೃಷ್ಣಪ್ಪ ಅವರು ಸೋಮವಾರದಂದು…

Read Full News

ರಿಪ್ಪನ್‌ಪೇಟೆ : ಯುವ ಜನತೆಗೆ ನೇತ್ರದಾನದ ಅರಿವು ಮೂಡಿಸಬೇಕಿದೆ – ಡಾ|| ಬೃಂದಾ ನಾಯ್ಕ್|137 ವಿದ್ಯಾರ್ಥಿಗಳಿಂದ ನೇತ್ರದಾನಕ್ಕೆ ನೋಂದಣಿ

ರಿಪ್ಪನ್‌ಪೇಟೆ : ಯುವ ಜನತೆಗೆ ನೇತ್ರದಾನದ ಅರಿವು ಮೂಡಿಸಬೇಕಿದೆ – ಡಾ|| ಬೃಂದಾ ನಾಯ್ಕ್|137 ವಿದ್ಯಾರ್ಥಿಗಳಿಂದ ನೇತ್ರದಾನಕ್ಕೆ ನೋಂದಣಿ ರಿಪ್ಪನ್‌ಪೇಟೆ : ವ್ಯಕ್ತಿಯ ಮರಣಾನಂತರ ಆರೋಗ್ಯಯುತ ಕಣ್ಣುಗಳು ಇಬ್ಬರು ಅಂಧರ ಪಾಲಿಗೆ ಬೆಳಕಾಗುತ್ತವೆ. ಪ್ರಾಣಬಿಟ್ಟು ಆರು ಗಂಟೆಗಳೊಳಗಾಗಿ  ನೇತ್ರಗಳನ್ನು ಸುರಕ್ಷಿತವಾಗಿ ಶೇಖರಿಸಲು ಸಾಧ್ಯವಾದಲ್ಲಿ ನೇತ್ರ ಚಿಕಿತ್ಸೆಯ ಮೂಲಕ ಅಂಧರಿಗೆ ದೃಷ್ಟಿಭಾಗ್ಯ ಲಭಿಸುತ್ತದೆ. ಅದಕ್ಕಾಗಿ ನೇತ್ರದಾನದ ಅರಿವನ್ನು ವಿಶೇಷವಾಗಿ ಯುವಜನತೆಗೆ ಮೂಡಿಸುವ ಅಗತ್ಯವಿದೆ ಎಂದು ಶಿವಮೊಗ್ಗದ ಹರಕೆರೆ ಶಂಕರ ಕಣ್ಣಿನ ಆಸ್ಪತ್ರೆಯ ನೇತ್ರತಜ್ಞರಾದ ಡಾ|| ಬೃಂದಾ ನಾಯ್ಕ್ ಅವರು…

Read Full News

ತಾಲೂಕ್ ಕಛೇರಿಗೆ ದಿಡೀರ್ ಭೇಟಿ ನೀಡಿದ ಆರಗ ಜ್ಞಾನೇಂದ್ರ – ಖಾಲಿ ಕುರ್ಚಿ ಕಂಡು ಆಕ್ರೋಶ|araga

ತೀರ್ಥಹಳ್ಳಿ : ಮಾಜಿ ಸಚಿವ ಆರಗ ಜ್ಞಾನೇಂದ್ರ ಇವತ್ತು ತೀರ್ಥಹಳ್ಳಿ ತಾಲೂಕು ಕಚೇರಿಗೆ ದಿಢೀರ್‌ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಅಧಿಕಾರಿಗಳ ಕುರ್ಚಿಗಳು ಖಾಲಿ ಇದ್ದಿದ್ದನ್ನು ಕಂಡು ಆಕ್ರೋಶಗೊಂಡರು. ಸೋಮವಾರ ಸಂಜೆ 4.30ರ ಹೊತ್ತಿಗೆ ತಾಲೂಕು ಕಚೇರಿಗೆ ಶಾಸಕ ಆರಗ ಜ್ಞಾನೇಂದ್ರ ಹಠಾತ್‌ ಭೇಟಿ ನೀಡಿದರು. ಈ ವೇಳೆ ವಿವಿಧ ಸೆಕ್ಷನ್‌ಗಳಲ್ಲಿ ಅಧಿಕಾರಿಗಳು, ಸಿಬ್ಬಂದಿ ಇಲ್ಲದಿರುವುದನ್ನು ಕಂಡು ಸಿಟ್ಟಾದರು. ಕೂಡಲೆ ರಿಜಿಸ್ಟರ್‌ ತರಿಸಿಕೊಂಡು ಪರಿಶೀಲನೆ ನಡೆಸಿದರು. ಇನ್ನು, ಪರಿಶೀಲನೆ ವೇಳೆ ತೀರ್ಥಹಳ್ಳಿ ತಾಲೂಕು ಕಚೇರಿಯಲ್ಲಿ ಶೇ.50ಕ್ಕಿಂತಲು…

Read Full News

ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ಪತ್ರಕರ್ತರ ಪಾತ್ರ ಅತಿಮುಖ್ಯ – ಸಂಸದ ಬಿ ವೈ ರಾಘವೇಂದ್ರ|press day

ಶಿವಮೊಗ್ಗ : ಪತ್ರಿಕಾ ಮಾಧ್ಯಮ ಯಾವತ್ತೂ ವಿರೋಧ ಪಕ್ಷದಂತೆ ಕೆಲಸ ಮಾಡಬೇಕು. ಹೀಗಾದಲ್ಲಿ ಆಳುವ ಸರಕಾರ ಮತ್ತು ಸಾರ್ವಜನಿಕ ಕ್ಷೇತ್ರದಲ್ಲಿರುವವರಿಗೆ ಜವಾಬ್ದಾರಿ ಹೆಚ್ಚಿರುತ್ತದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.  ಪ್ರೆಸ್ ಟ್ರಸ್ಟ್ ಹಾಗೂ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ಅಭಿನಂದನೆ  ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.  ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ಪತ್ರಕರ್ತರ ಪಾತ್ರ ಅತಿಮುಖ್ಯವಾಗಿರುತ್ತದೆ. ನಕಾರಾತ್ಮಕ ವರದಿಗಾರಿಕೆ ಮಾಡುವವರನ್ನು ಸಮಾಜ ಒಪ್ಪುವುದಿಲ್ಲ. ಸಮಾಜಮುಖಿಯಾದ ಸಕಾರಾತ್ಮಕ ಪತ್ರಿಕೋದ್ಯಮಕ್ಕೆ…

Read Full News

ವಿಟಿಯು ಇಂಜಿನಿಯರಿಂಗ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ಹಾಗೂ 9ನೇ ರ‌್ಯಾಂಕ್ ಪಡೆದ JNNC ವಿದ್ಯಾರ್ಥಿನಿಯರು

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ನಡೆಸಿದ 2020-23 ನೇ ಸಾಲಿನ ವಿವಿಧ ಎಂಜಿನಿಯರಿಂಗ್ ವಿಭಾಗಗಳ ಪರೀಕ್ಷೆಗಳಲ್ಲಿ ಶಿವಮೊಗ್ಗ ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿನಿ ಪಾರ್ವತಿ ಸಲೇರಾ ರಾಜ್ಯಕ್ಕೆ ಪ್ರಥಮ ರ‌್ಯಾಂಕ್ ಪಡೆದಿದ್ದಾರೆ. ಎಲೆಕ್ಟ್ರಾನಿಕ್ಸ್ ಅಂಡ್ ಟೆಲಿಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿನಿ ಸ್ಮೃತಿ.ಕೆ.ವಂತಕರ್ ರಾಜ್ಯಕ್ಕೆ ಒಂಬತ್ತನೆ ರ‌್ಯಾಂಕ್ ಪಡೆದಿದ್ದಾರೆ. ವಿದ್ಯಾರ್ಥಿಗಳ ಈ ಅಮೋಘ ಸಾಧನೆಗೆ ರಾಷ್ಟ್ರೀಯ ಶಿಕ್ಷಣ ಸಮಿತಿ ಆಡಳಿತ ಮಂಡಳಿ ಸದಸ್ಯರು ಹಾಗೂ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗ ಅಭಿನಂದನೆ…

Read Full News

ಕುಲಸಚಿವರಾಗಿ ಪ್ರೊ.ಪಿ.ಕಣ್ಣನ್ ಅಧಿಕಾರ ಸ್ವೀಕಾರ|kuvempu university

ಕುಲಸಚಿವರಾಗಿ ಪ್ರೊ.ಪಿ.ಕಣ್ಣನ್ ಅಧಿಕಾರ ಸ್ವೀಕಾರ ಕುವೆಂಪು ವಿಶ್ವವಿದ್ಯಾಲಯದ ನೂತನ ಕುಲಸಚಿವರಾಗಿ ಪ್ರೊ.ಪಿ.ಕಣ್ಣನ್ ನೇಮಕಗೊಂಡಿದ್ದಾರೆ. ಈ ಹಿಂದೆ ಕುಲಸಚಿವರಾಗಿದ್ದ ಅನುರಾಧ ಅವರ ಸ್ಥಾನಕ್ಕೆ ಈಗ ಅಧಿಕೃತ ನೇಮಕಗೊಳಿಸಿ ಸರ್ಕಾರ ಆದೇಶಿಸಿದೆ. 8 ತಿಂಗಳ ಹಿಂದೆ ಕುಲಸಚಿವರಾಗಿದ್ದ ಅನುರಾಧರವರು ವರ್ಗಾವಣೆಗೊಂಡು ಹೋದ ನಂತರ ಪ್ರಭಾರ ಕುಲಸಚಿವರನ್ನಾಗಿ ಸಿ ಗೀತಾರನ್ನ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. 8 ತಿಂಗಳ ಕಾಲ ಪ್ರಭಾರರನ್ನ ನೇಮಿಸಿದ್ದ ಸರ್ಕಾರ ಈಗ ಅವರ ಸ್ಥಾನಕ್ಕೆ ಅಧಿಕೃತವಾಗಿ ಪ್ರೊ.ಪಿ.ಕಣ್ಣನ್ ರನ್ನ ನೇಮಿಸಿ ಆದೇಶಿಸಿದೆ. ಕುವೆಂಪು ವಿಶ್ವವಿದ್ಯಾಲಯದ ನೂತನ…

Read Full News

ರಿಪ್ಪನ್‌ಪೇಟೆ : ಮಸೀದಿ ಮುಂಭಾಗದಲ್ಲಿ ಮದ್ಯದಂಗಡಿ ಅರಂಭಿಸುವುದನ್ನು ವಿರೋಧಿಸಿ ಮೌನ ಪ್ರತಿಭಟನೆಗೆ ಸಿದ್ದತೆ|ಮದ್ಯದಂಗಡಿ ಪ್ರಾರಂಭದ ಹುನ್ನಾರದಲ್ಲಿ ಪ್ರತಿಷ್ಠಿತ ಧರ್ಮದರ್ಶಿಯೊಬ್ಬರ ಹೆಸರು ದುರ್ಬಳಕೆ.???

“ಮಸೀದಿ ಬಳಿ ಮಧ್ಯದಂಗಡಿ ಅರಂಭಿಸುವುದನ್ನು ವಿರೋಧಿಸಿ ಮೌನ ಪ್ರತಿಭನೆಗೆ ಸಿದ್ದತೆ” ರಿಪ್ಪನ್‌ಪೇಟೆ;-ಸರ್ಕಾರದ ಅಬಕಾರಿ ನಿಯಮದಂತೆ ಮಸೀದಿ ಚರ್ಚ್ ದೇವಸ್ಥಾನ ಹಾಗೂ ಶಾಲೆ ಅಸ್ಪತ್ರೆಗೆ 100 ಮೀಟರ್ ಸುತ್ತಳಲೆತೆಯಲ್ಲಿ ಮಧ್ಯದಂಗಡಿ ತೆರೆಯಬಾರದೆಂಬ ನಿಯಮ ಜಾರಿಯಲ್ಲಿದ್ದರೂ ಕೂಡಾ ಇಲ್ಲಿನ ಹೊಸನಗರ ರಸ್ತೆಯ ಜುಮ್ಮಾಮಸೀದಿಯಿಂದ ಕೆಲವೇ ಅಂತರದಲ್ಲಿರುವ ರಾಯಲ್ ಕಂಪರ್ಟ್ ಕಟ್ಟಡದಲ್ಲಿ ಸಿ.ಎಲ್.ನಂ 7 ಬಾರ್ ಅಂಡ್ ರೆಸ್ಟೊರೆಂಟ್‌ಯನ್ನು ಆರಂಭಿಸುವ ಎಲ್ಲ ಸಿದ್ದತೆ ನಡೆದಿದ್ದು ಈ ಬಗ್ಗೆ ಇಂದು ಮುಸ್ಲಿಂ ಸಮುದಾಯದವರು ಶುಕ್ರವಾರದ ನಮಾಜ್ (ಪ್ರಾರ್ಥನೆ) ಮುಗಿಸಿ ಠಾಣೆಗೆ ತೆರಳಿ ಮಸೀದಿ ಬಳಿ…

Read Full News

ಆರ್ ಎಂ ಮಂಜುನಾಥ್ ಗೌಡ ಹಿಡಿತಕ್ಕೆ ಡಿಸಿಸಿ ಬ್ಯಾಂಕ್ – ಉಪಾಧ್ಯಕ್ಷರಾಗಿದ್ದ ಷಡಾಕ್ಷರಿ ಪ್ರಭಾರ ಅಧ್ಯಕ್ಷರಾಗಿ ಆಯ್ಕೆ..!!!|DCC

ಶಿವಮೊಗ್ಗ: ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆ ಆಗಿದ್ದು, 9 ನಿರ್ದೇಶಕರ ಬೆಂಬಲದೊಂದಿಗೆ ಮತ್ತೆ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ ಡಾ. ಆರ್.ಎಂ. ಮಂಜುನಾಥ ಗೌಡ ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದಾರೆ. ಶಿವಮೊಗ್ಗ ಜಿಲ್ಲಾ ಬ್ಯಾಂಕ್ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಪರವಾಗಿ 9 ಮತಗಳೊಂದಿಗೆ, ಅವಿಶ್ವಾಸ ನಿರ್ಣಯಕ್ಕೆ ಜಯ ಸಿಕ್ಕಿದೆ. ಉಪಾಧ್ಯಕ್ಷರಾಗಿದ್ದ ಷಡಕ್ಷರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. 13 ಸದಸ್ಯರಿದ್ದು ಈಗ ಗೌಡರ ಪಾಳಯ ಅಧಿಕಾರ ಹಿಡಿದಿದೆ. ಚುನಾವಣೆ ಅಧಿಕಾರಿಯಾಗಿ ಜೆಸಿ ವೆಂಕಟಾಚಲಪತಿ ನೇತೃತ್ವದಲ್ಲಿ ಗೌಪ್ಯ…

Read Full News

ಶಿವಮೊಗ್ಗ – ಬೆಂಗಳೂರು ವಿಮಾನದ ಟಿಕೆಟ್‌ ಬುಕಿಂಗ್‌ ಆರಂಭ, ಎಷ್ಟಿದೆ ದರ? ಬುಕ್‌ ಮಾಡುವುದು ಹೇಗೆ?|Airport

ಬೆಂಗಳೂರು – ಶಿವಮೊಗ್ಗ ನಡುವೆ ವಿಮಾನದ ಟಿಕೆಟ್‌ ಬುಕಿಂಗ್‌ ಆರಂಭವಾಗಿದೆ. ಇಂಡಿಗೋ ಸಂಸ್ಥೆ ತನ್ನ ವೆಬ್‌ಸೈಟ್‌ನಲ್ಲಿ ಸೀಟ್‌ ಕಾಯ್ದಿರಿಸುವ ಅವಕಾಶ ಕಲ್ಪಿಸಿದೆ. ಆ.31ರಿಂದ ಶಿವಮೊಗ್ಗದಿಂದ ವಿಮಾನ ಹಾರಾಟ ಆರಂಭವಾಗಲಿದೆ. ಇಂಡಿಗೋ ವೆಬ್‌ಸೈಟ್‌ನಲ್ಲಿ ಇವತ್ತು ಸಂಜೆಯಿಂದ ಬುಕಿಂಗ್‌ ಆರಂಭವಾಗಿದೆ. ಆ.31ರಂದು ಬೆಳಗ್ಗೆ 9.50ಕ್ಕೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಯಾಣ ಆರಂಭವಾಗಲಿದೆ. ಬೆಳಗ್ಗೆ 11.05ಕ್ಕೆ ವಿಮಾನ ಶಿವಮೊಗ್ಗ ತಲುಪಲಿದೆ. 1 ಗಂಟೆ 15 ನಿಮಿಷದ ನಾನ್‌ ಸ್ಟಾಪ್‌ ಫ್ಲೈಟ್‌ ಇರಲಿದೆ ಎಂದು ಪ್ರಕಟಿಸಲಾಗಿದೆ. ಎರಡು ಬಗೆಯ ಟಿಕೆಟ್‌ ಮಾದರಿ…

Read Full News

ಕ್ಯಾಂಟೀನ್ ಮಾಲೀಕನಿಗೆ ಬೋಂಡಾ ತಯಾರಿಕೆಯ ಬಗ್ಗೆ ತರಬೇತಿ ನೀಡಿದ ಶಾಸಕ ಬೇಳೂರು ಗೋಪಾಲಕೃಷ್ಣ|beluru

ಕ್ಯಾಂಟೀನ್ ಮಾಲೀಕನಿಗೆ ಬೋಂಡಾ ತಯಾರಿಕೆಯ ಬಗ್ಗೆ ತರಬೇತಿ ನೀಡಿದ  ಶಾಸಕ ಬೇಳೂರು ಗೋಪಾಲಕೃಷ್ಣ. ರಿಪ್ಪನ್ ಪೇಟೆ : ಸರಳ ಸಜ್ಜನಿಕೆಯ ಮೂಲಕ ಜನಸಾಮಾನ್ಯರ ಶಾಸಕರಾಗಿ ಆಯ್ಕೆಯಾದ  ಸಾಗರ ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಬೋಂಡಾ ತಯಾರಿಕೆಯ ಬಗ್ಗೆ ತರಬೇತಿ ನೀಡಿದ  ಘಟನೆ ಇಂದು ರಿಪ್ಪನ್ ಪೇಟೆ ಪಟ್ಟಣದಲ್ಲಿ ನಡೆದಿದೆ.  ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪರ ಅತಿವೃಷ್ಟಿ ಸಮಾಲೋಚನಾ ಸಭೆಯಲ್ಲಿ ಭಾಗವಹಿಸುವುದರ ಸಲುವಾಗಿ ಸಚಿವರು ಬರುವುದಕ್ಕಿಂತ ಮುಂಚಿತವಾಗಿ ರಿಪ್ಪನ್ ಪೇಟೆ ಗ್ರಾಮ ಪಂಚಾಯಿತಿಗೆ ಆಗಮಿಸಿದ್ದರು.ಈ…

Read Full News

ಆಗುಂಬೆ ಘಾಟಿಯಲ್ಲಿ ಸೆ.15 ರವರೆಗೆ ಭಾರಿ ವಾಹನಗಳ ನಿಷೇಧ

ಭಾರಿ ಮಳೆಯ ಕಾರಣಕ್ಕೆ ಆಗುಂಬೆ ಘಾಟಿ ಪ್ರದೇಶದಲ್ಲಿ ಘನವಾಹನಗಳ ಸಂಚಾರವನ್ನು ಉಡುಪಿ ಜಿಲ್ಲಾಡಳಿತ ನಿರ್ಬಂಧಿಸಿದೆ. ಸೆಪ್ಟೆಂಬರ್ 15ರವರೆಗೆ ಆಗುಂಬೆ ಘಾಟಿ ರಸ್ತೆಯಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧ ಮಾಡಲಾಗಿದೆ. ಭಾರಿ ಮಳೆ ಮತ್ತು ಭಾರಿ ವಾಹನ ಸಂಚಾರದಿಂದ ರಾಷ್ಟ್ರೀಯ ಹೆದ್ದಾರಿ 169 ಎಯಲ್ಲಿ ಆಗುಂಬೆ ಘಾಟೆಯ 6,7 ಮತ್ತು 11ರಲ್ಲಿ ಬಿರುಕುಗಳು ಕಾಣಿಸಿಕೊಳ್ಳುತ್ತಿದ್ದು ರಸ್ತೆ ಕುಸಿಯುವ ಭೀತಿ ಉಂಟಾಗಿದೆ. ಆದ್ದರಿಂದ ಜುಲೈ 27 ರಿಂದ ಸೆಪ್ಟೆಂಬರ್ 15 ರವರೆಗೆ ಭಾರಿ ವಾಹನ ನಿಷೇಧಿಸಲಾಗಿದೆ. ಈ ಸಂದರ್ಭದಲ್ಲಿ ತೀರ್ಥಹಳ್ಳಿ…

Read Full News

ರಿಪ್ಪನ್ ಪೇಟೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆ ಮಳೆ ಹಾನಿಯ ಬಗ್ಗೆ ಸಮಾಲೋಚನಾ ಸಭೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ|Madhu bangarappa

ರಿಪ್ಪನ್ ಪೇಟೆಯಲ್ಲಿ ಜಿಲ್ಲಾ ಮಟ್ಟದ  ಅಧಿಕಾರಿಗಳ ಜೊತೆ ಮಳೆ ಹಾನಿಯ ಬಗ್ಗೆ  ಸಮಾಲೋಚನಾ ಸಭೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ.   ರಿಪ್ಪನ್‌ಪೇಟೆ;- ಹೊಸನಗರ ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ಎಡಬಿಡದೆ  ಸುರಿಯುತ್ತಿರುವ  ಮಳೆ- ಗಾಳಿಯಿಂದ  ಕೆರೆಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ  ಹಾನಿಗೊಳಗಾದ ನಷ್ಟದ ಕುರಿತು  ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಕಂದಾಯ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದರು.  ಪಟ್ಟಣದ ಗ್ರಾಮ ಪಂಚಾಯತಿ ಯ ಕುವೆಂಪುಸಭಾಭವನದಲ್ಲಿ ಇಂದು  ಆಯೋಜಿಸಿದ್ದ  ಸಭೆಯಲ್ಲಿ  ಅವರು ಮಾತನಾಡಿ, ಮಳೆಯಿಂದ…

Read Full News

ಸಚಿವ ಮಧುಬಂಗಾರಪ್ಪ ವಿರುದ್ದ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರಿಂದ ಕಪ್ಪು ಪಟ್ಟಿ ಪ್ರದರ್ಶನ|protest

ಶಿವಮೊಗ್ಗ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಳೆ ಹಾನಿ ಸಂಬಂಧ ನಡೆಯುತ್ತಿದ್ದ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪರವರಿಗೆ ಕಪ್ಪು ಪಟ್ಟಿ ಪ್ರದರ್ಶನ ಮಾಡಿದ ಘಟನೆ ನಡೆದಿದೆ.  ಜಿಲ್ಲಾ ಪಂಚಾಯತ್​ನಲ್ಲಿ ಸಭೆ ಆರಂಭವಾಗುತ್ತಲೇ , ಶಿಕ್ಷಣ ಸಚಿವ ಮಧು ಬಂಗಾರಪ್ಪರನವರ ವಿರುದ್ಧ ಘೋಷಣೆಗಳನ್ನು ಕೂಗುತ್ತ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಸಭಾಂಗಣದ ಒಳಗೆ ಪ್ರವೇಶ ಮಾಡಿದರು, ವೇದಿಕೆಯ ಸಮೀಪದವರೆಗೂ ಘೋಷಣೆಗಳನ್ನು ಕೂಗುತ್ತಾ ಬಂದ ಪ್ರತಿಭಟನಾಕಾರರು, ಸಭೆಯಲ್ಲಿ ,ಕರಪತ್ರಗಳನ್ನು ಎಸೆದರು. ಅಲ್ಲದೆ ಕಪ್ಪು ಪಟ್ಟಿಗಳನ್ನು ಪ್ರದರ್ಶನ ಮಾಡಿ,…

Read Full News

ರಿಪ್ಪನ್‌ಪೇಟೆ ಗ್ರಾಪಂ ಪಿಡಿಓ ಚಂದ್ರಶೇಖರ್ ವರ್ಗಾವಣೆ|ನೂತನ ಪಿಡಿಓ ಯಾರು ಗೊತ್ತಾ…???PDO

ರಿಪ್ಪನ್‌ಪೇಟೆ : ಪಟ್ಟಣದ ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ಕಳೆದ ಹತ್ತು ವರ್ಷಗಳಿಂದ ಕಾರ್ಯ ನಿರ್ವಹಿಸಿದ್ದ ಚಂದ್ರಶೇಖರ್ ವರ್ಗಾವಣೆಯಾಗಿದ್ದು ಅವರ ಸ್ಥಾನಕ್ಕೆ ಶಿಕಾರಿಪುರ ತಾಲೂಕಿನ ತಾಳಗುಂದ ಗ್ರಾಪಂ ನಲ್ಲಿ ಪಿಡಿಓ ಆಗಿ ಕಾರ್ಯ ನಿರ್ವಹಿಸುತ್ತಿರುವ ಮಧುಸೂಧನ್ ಎನ್ ನೇಮಕವಾಗಿದ್ದಾರೆ.   ರಿಪ್ಪನ್‌ಪೇಟೆ ಗ್ರಾಪಂ ಗೆ ನೂತನವಾಗಿ ವರ್ಗಾವಣೆಗೊಂಡಿರುವ ಮಧುಸೂಧನ್ ಎನ್ ಮೂಲತಃ ರಿಪ್ಪನ್‌ಪೇಟೆ ಶಬರೀಶ ನಗರದವರಾಗಿದ್ದು ಈ ಹಿಂದೆ ಪಟ್ಟಣದ ಗ್ರಾಮ ಪಂಚಾಯಿತಿಯಲ್ಲಿ ಹಲವಾರು ವರ್ಷಗಳ ಸೇವೆ ಸಲ್ಲಿಸಿದ್ದರು.ವರ್ಗಾವಣೆಗೊಂಡಿರುವ ಪಿಡಿಓ ಚಂದ್ರಶೇಖರ್ ರವರಿಗೆ ಸದ್ಯಕ್ಕೆ ಯಾವುದೇ ಸ್ಥಳ ನಿಯೋಜನೆಯಾಗಿರುವುದಿಲ್ಲ….

Read Full News

ಭಾರಿ ಗಾಳಿ ಮಳೆಗೆ ಮನೆಯ ಗೋಡೆ ಮೇಲ್ಚಾವಣಿ ಕುಸಿತ | ರಿಪ್ಪನ್‌ಪೇಟೆಯ ಹೂವಿನ ವ್ಯಾಪಾರಿ ಪುಷ್ಪಾ ನಿಧನ|Rpet

ರಿಪ್ಪನ್‌ಪೇಟೆ : ಮಲೆನಾಡಿನಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ಇದರ ಪರಿಣಾಮ ಕೆಂಚನಾಲ ಗ್ರಾಪಂ ವ್ಯಾಪ್ತಿಯ ಆಲುವಳ್ಳಿ ಗ್ರಾಮದ ಕಲ್ಯಾಣಪುರದಲ್ಲಿ ಮನೆಯೊಂದರ ಗೋಡೆ ಹಾಗೂ ಮೇಲ್ಚಾವಣಿ ಕುಸಿತವಾಗಿರುವ ಘಟನೆ ನಡೆದಿದೆ. ಇಂದು ಸುರಿದ ಭಾರಿ ಮಳೆಗೆ ಕಲ್ಯಾಣಪುರ ಗ್ರಾಮದ ಕೃಷ್ಣ ಹೆಗಡೆ  ಎಂಬುವವರ ಮನೆಯ ಹಿಂಬದಿಯ ಗೋಡೆ ಹಾಗೂ‌ ಮೇಲ್ಚಾವಣಿ ಕುಸಿದಿದ್ದು ಯಾವುದೇ ಪ್ರಾಣಹಾನಿ ಆಗಿಲ್ಲ. ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಮುಂದಿನ ಕ್ರಮಕೈಗೊಂಡಿದ್ದಾರೆ. ರಿಪ್ಪನ್‌ಪೇಟೆಯ ಹೂವಿನ ವ್ಯಾಪಾರಿ ಪುಷ್ಪಾ ನಿಧನ…

Read Full News

ರಿಪ್ಪನ್‌ಪೇಟೆಯಲ್ಲಿ ಇನ್ನು ಮುಂದೆ ಪ್ರತಿವರ್ಷ ಅದ್ದೂರಿ ಜಾತ್ರಾ ಮಹೋತ್ಸವ – ರಥ ನಿರ್ಮಾಣಕ್ಕೆ ಸಿದ್ದಿವಿನಾಯಕ ದೇವಸ್ಥಾನ ಸಮಿತಿಯಿಂದ ಮುಂಗಡ ಸಮರ್ಪಣೆ|Rpet

ರಿಪ್ಪನ್‌ಪೇಟೆಯಲ್ಲಿ ಇನ್ನೂ ಪ್ರತಿವರ್ಷ ಅದ್ದೂರಿ ಜಾತ್ರಾ ಮಹೋತ್ಸವ – ರಥ ನಿರ್ಮಾಣಕ್ಕೆ ಸಿದ್ದಿವಿನಾಯಕ ದೇವಸ್ಥಾನ ಸಮಿತಿಯಿಂದ ಮುಂಗಡ ಸಮರ್ಪಣೆ’’ ರಿಪ್ಪನ್‌ಪೇಟೆ : ಪಟ್ಟಣದ ಇತಿಹಾಸ ಪ್ರಸಿದ್ದ ಶ್ರೀಸಿದ್ದಿವಿನಾಯಕ ದೇವಸ್ಥಾನದಲ್ಲಿ ರಥೋತ್ಸವ ಮತ್ತು ಜಾತ್ರಾ ಮಹೋತ್ಸವ ನೆರವೇರಿಸುವ ಹಿನ್ನಲೆಯಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ವತಿಯಿಂದ ಸುಮಾರು 31 ಲಕ್ಷ ರೂ ವೆಚ್ಚದ ರಥ ನಿರ್ಮಾಣಕ್ಕೆ ಮುಂಗಡ ಹಣ ನೀಡಲಾಯಿತು. ಪಟ್ಟಣದ ಶ್ರೀ ಸಿದ್ದಿವಿನಾಯಕ ವ್ಯವಸ್ಥಾಪನಾ ಸಮಿತಿ ಹಾಗೂ ಸಿದ್ದಿವಿನಾಯಕ ಸೇವಾ ಸಂಸ್ಥೆ ಭಕ್ತಾಧಿಗಳ ಬಹು ದಿನಗಳ ಬೇಡಿಕೆಯಂತೆ ಈ…

Read Full News

ಗ್ರಾಮೀಣ ಪ್ರದೇಶದ ಅಭಿವೃದ್ದಿಗೆ ನನ್ನ ಮೊದಲ ಆದ್ಯತೆ – ಬೇಳೂರು ಗೋಪಾಲಕೃಷ್ಣ |beluru

ಗ್ರಾಮೀಣ ಪ್ರದೇಶದ ಅಭಿವೃದ್ದಿಗೆ ನನ್ನ ಮೊದಲ ಆದ್ಯತೆ – ಬೇಳೂರು ಗೋಪಾಲಕೃಷ್ಣ    ಹರತಾಳುವಿನಲ್ಲಿ ಗ್ರಾಮಸ್ಥರ ಬಹುವರ್ಷದ ಬೇಡಿಕೆಯನ್ನು ಈಡೇರಿಸಿದ ಬೇಳೂರು ಗೋಪಾಲಕೃಷ್ಣ ರಿಪ್ಪನ್‌ಪೇಟೆ : ಗ್ರಾಮೀಣ ಪ್ರದೇಶದ ಅಭಿವೃದ್ಧಿಯೇ ನನ್ನ ಮೊದಲ ಆದ್ಯತೆ ಆ ನಿಟ್ಟಿನಲ್ಲಿ ಬಟ್ಟೆಮಲ್ಲಪ್ಪ – ರಿಪ್ಪನ್‌ಪೇಟೆ ಗೆ ಕೆ ಎಸ್ ಆರ್ ಟಿಸಿ ಬಸ್ ಸೌಲಭ್ಯ ಕಲ್ಪಿಸಿದ್ದೇನೆ ಎಂದು  ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು. ಮಾಜಿ ಸಚಿವ ಹರತಾಳು ಹಾಲಪ್ಪನವರ ಸ್ವಗ್ರಾಮದ ಗ್ರಾಮಸ್ಥರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ  ದೂರದ ರಿಪ್ಪನ್‌ಪೇಟೆ ಆನಂದಪುರ…

Read Full News