ರಿಪ್ಪನ್ ಪೇಟೆ ಸರ್ಕಾರಿ ಪ್ರೌಡಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ವಿಜ್ಞಾನದ ಕುರಿತು ವಿಶೇಷ ತರಬೇತಿ ಕಾರ್ಯಾಗಾರ
ರಿಪ್ಪನ್‌ಪೇಟೆ;- ಇಂದಿನ ಆಧುನಿಕ ಯುಗದಲ್ಲಿ ವಿಜ್ಞಾನವು ಭಾನೆತ್ತರಕ್ಕೆ ಬೆಳದಿದೆ ಎಂಬುವುದು ಎಲ್ಲರಿಗೂ ಗೊತ್ತಿರುವ ವಿಷಯವಾಗಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆ ಬೆಳಸುವಲ್ಲಿ ಐ.ಐ.ಎಸ್.ಸಿ.ಖುದಾಪುರ ತಂಡ ಬಹಳ ಮಹತ್ವದ ಪಾತ್ರ ವಹಿಸಿದೆ ಎಂದು ಇಂಡಿಯನ್ ಇನ್‌ಸ್ಟಿಟ್ಯೂಟ್ ಸೈನ್ಸ್ ಮುಖ್ಯಸ್ಥ ಪ್ರೋ.ಡಿ.ಎನ್.ರಾವ್.ಹೇಳಿದರು.
ರಿಪ್ಪನ್‌ಪೇಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಚಳ್ಳಕೆರೆ ಖುದಾಪುರ ಐ.ಐ.ಎಸ್.ಸಿ. ಶಾಖೆಯವರು ಕಳೆದ ಮೂರು ವರ್ಷದ ಹಿಂದೆ 1.50 ಲಕ್ಷ ರೂ ವೆಚ್ಚದ ವಿಜ್ಞಾನ ಬೋಧನೋಪಕರಣಗಳನ್ನು ಕೊಡುಗೆಯಾಗಿ ನೀಡಲಾಗಿದ್ದು ಈ ಉಪಕರಣಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡಿರುವುದರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ ಅವರು ಗ್ರಾಮಾಂತರದ ಶಾಲೆಗಳಲ್ಲಿನ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರಗತಿಗೆ ಪೂರಕವಾಗಿದೆ ಎಂದರು.
ಚಳ್ಳಕೆರೆ ಖುದಾಪುರ ಐ.ಐ.ಎಸ್.ಸಿ. ಶಾಖೆಯ ಭೌತಶಾಸ್ತç ವಿಭಾಗದ ಹಾಲೇಶ್,ಐ.ಎ.ಇ ಡಾ.ಅನೂಷ ಬೇಬಿ,ಜೀವಶಾಸ್ತç ವಿಭಾಗದ ಡಾ.ರಾಘವೇಂದ್ರ,ಪ್ರಶನ್ನ,ರಸಾಯನಶಾಸ್ತç ವಿಭಾಗದ ದಿವ್ಯ ಸೆಹರಾ ಸಾಹು,ಗಣಿತಶಾಸ್ತ ವಿಭಾಗದ ಆಭೀಷ್ಟಾ ಇವರುಗಳು ಎಸ್.ಎಸ್.ಎಲ್.ಸಿ.ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ಕಾರ್ಯಾಗಾರವನ್ನು ನಡೆಸಿದರು.
ಪ್ರೌಢಶಾಲೆಯ ಉಪಪ್ರಾಚಾರ್ಯ ಕೆ.ಎನ್.ರತ್ನಾಕರ್,ವಿಜ್ಞಾನ ಶಿಕ್ಷಕ ರಾಮಕೃಷ್ಣ,ಸೈಯದ್‌ನೂರ್‌ಅಹ್ಮದ,ಚಂದ್ರಕಾಂತ್,ಗಣಿತ ಶಿಕ್ಷಕರಾದ ಹೆಚ್.ಎಸ್, ಕಲಾವತಿ,ಸಿ.ಕೆ.ಚಂದ್ರಪ್ಪ,ಸುಧಾಹೆಗಡೆ ಇನ್ನಿತರರು ಹಾಜರಿದ್ದರು.