ಗುಳಿಗುಳಿ ಶಂಕರೇಶ್ವರ ದೇವಸ್ಥಾನದಲ್ಲಿ ಕಳವು – ದೇವಸ್ಥಾನದ ಸಿಸಿ ಟಿವಿಯನ್ನು ಪುಷ್ಕರಣಿಗೆ ಎಸೆದ ಭೂಪರು
ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಗುಳುಗುಳಿ ಶಂಕರ ಗ್ರಾಮದ ಇತಿಹಾಸ ಪ್ರಸಿದ್ದ ಶಂಕರೇಶ್ವರ ದೇವಸ್ಥಾನದಲ್ಲಿ ಕಳ್ಳತನ ನಡೆದಿರುವ ಘಟನೆ ನಡೆದಿದೆ.
ಕಿಟಕಿಯ ರಾಡ್ ತುಂಡರಿಸಿ ದೇವಸ್ಥಾನದ ಒಳಹೊಕ್ಕಿರುವ ಖತರ್ ನಾಕ್ ಕಳ್ಳರು ಹುಂಡಿಯನ್ನು ಒಡೆದು ಹಣವನ್ನು ಕದ್ದಿದ್ದಾರೆ.
ಕಳ್ಳತನದ ಬಳಿಕ ದೇವಸ್ಥಾನದಲ್ಲಿ ಭದ್ರತೆ ಹಿನ್ನಲೆಯಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾ ಹಾಗೂ ಡಿವಿಆರ್ ನ್ನು ಕಿತ್ತು ಅಲ್ಲೆ ಸಮೀಪದಲ್ಲಿರುವ ಪುಷ್ಕರಣಿಗೆ ಎಸೆದು ಹೋಗಿದ್ದಾರೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು ಮುಂದಿನ ತನಿಖೆ ಕೈಗೊಂಡಿದ್ದಾರೆ.
ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.