ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆ ನಡೆಸುವುದರಿಂದ ಮಕ್ಕಳ ಕೌಶಲ್ಯ ವೃದ್ದಿ – ಬೇಳೂರು
ರಿಪ್ಪನ್‌ಪೇಟೆ : ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಯನ್ನು ಮಕ್ಕಳಲ್ಲಿ ಬೆಳಸುವುರಿಂದಾಗಿ ಮಕ್ಕಳ ಮನೋಸ್ಥರ್ಯ ವೃದ್ದಿಯಾಗುವುದು ಮತ್ತು ಮೊಬೈಲ್ ಬಳಕೆಯಿಂದಾಗಿ ಮಕ್ಕಳಲ್ಲಿ ಕ್ರೀಡಾ ಚಟುವಟಿಕೆ ಕ್ಷೀಣಿಸುವಂತಾಗಿರುವುದರ ಬಗ್ಗೆ ಪೋಷಕರು ಮತ್ತು ಶಿಕ್ಷಕರು ಜಾಗೃತರಾಗಿ ಮೊಬೈಲ್‌ನಿಂದ ಅದಷ್ಟು ದೂರವಿಡುವಂತಾಗಬೇಕು ಎಂದು ಸಾಗರ ವಿಧಾನ ಸಭಾಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಕಿವಿಮಾತು ಹೇಳಿದರು.
ರಿಪ್ಪನ್‌ಪೇಟೆಯ ಸರ್ಕಾರಿ ಪದವಿಪೂರ್ವ ಕಾಲೇಜ್‌ನ ಚಿನ್ನೇಗೌಡ ಕ್ರೀಡಾಂಗಣದಲ್ಲಿ ಶಾರದಾ ಶ್ರೀರಾಮಕೃಷ್ಣ ವಸತಿ ವಿದ್ಯಾಲಯ ಮತ್ತು ಕ್ಷೇತ್ರ ಶಿಕ್ಷಣಾ ಇಲಾಖೆ ಗ್ರಾಮ ಪಂಚಾಯ್ತಿ ರಿಪ್ಪನ್‌ಪೇಟೆ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ 14 ವರ್ಷದೊಳಗಿನ ಪ್ರಾಥಮಿಕ ಶಾಲಾ ಬಾಲಕ ಬಾಲಕಿಯರ ತಾಲ್ಲೂಕ್ ಮಟ್ಟದ 2023-24 ನೇ ಸಾಲಿನ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ ಕ್ರೀಡೆಯಿಂದ ಮಕ್ಕಳ ದೈಹಿಕ ಸಾಮರ್ಥ್ಯದೊಂದಿಗೆ ಜ್ಞಾಪನಾ ಶಕ್ತಿ ವೃದ್ದಿಯಾಗುವುದೆಂದು ಹೇಳಿ ಅದಷ್ಟು ಮಕ್ಕಳು ಮೊಬೈಲ್ ಬಳಕೆಯಿಂದ ದೂರವಿದ್ದು ಹೆಚ್ಚಾಗಿ ಕ್ರೀಡೆಯಲ್ಲಿ ಭಾಗವಹಿಸುವಂತೆ ಮಾಡಿ ಎಂದರು.
ಗ್ರಾಮ ಪಂಚಾಯ್ತಿ ಆಧ್ಯಕ್ಷೆ ಧನಲಕ್ಷಿö್ಮ ಗಂಗಾಧರ ಕ್ರೀಡಾಜ್ಯೋತಿ ಸ್ವಿಕರಿಸಿದರು.ಶ್ರೀರಾಮಕೃಷ್ಣ ಸಮೂಹ ಸಂಸ್ಥೆಗಳ ಸಂಸ್ಥಾಪಕ ಡಿ.ಎಂ.ದೇವರಾಜ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಗ್ರಾ.ಪಂ.ಉಪಾಧ್ಯಕ್ಷ ಸುದೀಂದ್ರಪೂಜಾರಿ,ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಅರ್.ಕೃಷ್ಣಮೂರ್ತಿ, ಸಮನ್ವಯಾಧಿಕಾರಿ ಎಂ.ರಂಗನಾಥ,ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಎಸ್.ಪಿ.ನಾಗರಾಜ್,ತಾಲ್ಲೂಕ್ ದೈಹಿಕ ಪರಿವೀಕ್ಷಕ ಕೆ.ಬಾಲಚಂದ್ರ ರಾವ್,ಕರ್ನಾಟಕ ರಾಜ್ಯ ಶಿಕ್ಷಕ ನೌಕರರ ಸಂಘದ ತಾಲ್ಲೂಕ್ ಅಧ್ಯಕ್ಷ ಎಂ.ಬಸವಣ್ಣಪ್ಪ,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕ್ ಅಧ್ಯಕ್ಷ ಹೆಚ್.ಆರ್.ಸುರೇಶ್,ಗ್ರಾಪಂ ಸದಸ್ಯರಾದ ಮಧುಸೂಧನ್ ,ಆಸೀಫ಼್ ಭಾಷಾ ,ಎನ್ ಚಂದ್ರೇಶ್ ,ಗಣಪತಿ,ಅಶ್ವಿನಿ ರವಿಶಂಕರ್,ದೀಪಾ ಸುಧೀಂದ್ರ ಹಾಗೂಕೆ.ಆರ್.ರಮೇಶ್, ಬಿ.ಎಂ.ರಾಜುಶೆಟ್ಟಿ, ಸಿ.ಆರ್.ಪಿ.ಎನ್.ಮಂಜುನಾಥ, ಜಗದೀಶ್ ಕಾಗಿನಲಿ ಹಾಗೂ ಇನ್ನಿತರರಿದ್ದರು.