Headlines

ರಿಪ್ಪನ್‌ಪೇಟೆ ಕಟ್ಟಡ ಕಾರ್ಮಿಕ ಸಂಘದಿಂದ ಮೇಲಿನ ಸಂಪಳ್ಳಿಯ ಬಡ ಮಹಿಳೆಗೆ ಆರ್ಥಿಕ ನೆರವು|rpet news

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮಾರುತಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಡ ಮಹಿಳೆಯ ಕುಟುಂಬಕ್ಕೆ ರಿಪ್ಪನ್‌ಪೇಟೆಯ ಕಟ್ಟಡ ಕಾರ್ಮಿಕ ಸಂಘದವರು ಆರ್ಥಿಕ ನೆರವು ನೀಡಿದ್ದಾರೆ.
ಗೃಹಲಕ್ಷ್ಮಿಯರ ರಾಜ್ಯದಲ್ಲೊಬ್ಬಳು ನತದೃಷ್ಟ ಲಕ್ಷ್ಮಿ ಎಂಬ ಅಡಿಬರಹದಲ್ಲಿ ಪೋಸ್ಟ್ ಮ್ಯಾನ್ ನ್ಯೂಸ್ ನಲ್ಲಿ ಇತ್ತೀಚೆಗೆ ವಿಸ್ಕೃತವಾದ ವರದಿ ಮಾಡಲಾಗಿತ್ತಿ

ಈ ವರದಿಯನ್ನು ಗಮನಿಸಿದ ರಿಪ್ಪನ್‌ಪೇಟೆಯ ಕಟ್ಟಡ ಕಾರ್ಮಿಕ ಸಂಘದವರು ಮಹಿಳೆಯನ್ನು ಸಂಪರ್ಕಿಸಿ ನೆರವು ನೀಡಿದ್ದಾರೆ. ನಗದು ಪರಿಹಾರವನ್ನು ನೀಡುವುದರ ಜತೆಗೆ ದಿನಸಿ ವಸ್ತುಗಳ ಕಿಟ್ ಸಹ ನೀಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ

ಮಾರುತಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇಲಿನಸಂಪಳ್ಳಿ ಗ್ರಾಮದ ಶಶಿಕಲಾ ಎಂಬ ಮಹಿಳೆ ಕೆಲ ವರ್ಷಗಳ ಹಿಂದೆ ತಮ್ಮ ಪತಿಯನ್ನು ಕಳೆದುಕೊಂಡಿದ್ದರು. ಅವರಿಗೆ ಇರುವ ಏಕೈಕ ಮಗಳಾದ ಪೂಜಾ ಬುದ್ಧಿಮಾಂದ್ಯ ಹಾಗೂ ವಿಕಲಚೇತನಳಾಗಿದ್ದು, ತಾಯಿ ಶಶಿಕಲಾ ಅವರಿಗೂ ಕಿವಿ ಸರಿಯಾಗಿ ಕೇಳಿಸದು. ಜೋಪಡಿಯಂತಿದ್ದ ಮನೆ ಕೆಲ ವರ್ಷಗಳ ಹಿಂದೆ ಸಂಪೂರ್ಣ ಶಿಥಿಲಗೊಂಡು ಗ್ರಾಮದ ಸಮುದಾಯ ಭವನದಲ್ಲೇ ತಾಯಿ ಮಗಳು ವಾಸ ಮಾಡುತ್ತಿದ್ದಾರೆ. ಆದರೆ ಈ ಕುಟುಂಬಕ್ಕೆ ಸರ್ಕಾರದ ಯಾವ ಯೋಜನೆಗಳೂ ಸಹ ಇದುವರೆಗೆ ಸಿಕ್ಕಿಲ್ಲ.

ಈ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ಮೊಹಮ್ಮದ್ ಹುಸೇನ್, ಗೌರವ ಅಧ್ಯಕ್ಷ ರಮೇಶ್ ಬಿ. ಆರ್. ಹಾಗೂ ಪದಾಧಿಕಾರಿಗಳಾದ ಗಣೇಶ್ ಎ. ಆರ್., ಮಂಜುನಾಥ್ ಆಚಾರ್, ಸೀನ ಆಚಾರ್, ರಾಘು ಬಿ. ಎನ್. ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *