ಜಿಲ್ಲಾ ಸುದ್ದಿ:
RIPPONPETE | ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಪ್ರಯುಕ್ತ ಪೊಲೀಸ್ ಇಲಾಖೆಯಿಂದ ರೂಟ್ ಮಾರ್ಚ್
RIPPONPETE | ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಪ್ರಯುಕ್ತ ಪೊಲೀಸ್ ಇಲಾಖೆಯಿಂದ ರೂಟ್ ಮಾರ್ಚ್ ರಿಪ್ಪನ್ ಪೇಟೆ ಪಟ್ಟಣದಲ್ಲಿ ಬರುವ ಗಣೇಶ ಚತುರ್ಥಿ ಮತ್ತು ಈದ್ ಮಿಲಾದ್ ಹಬ್ಬಗಳ ಹಿನ್ನೆಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸರು ರೂಟ್ ಮಾರ್ಚ್ ನಡೆಸಿದರು. ಪಿಎಸ್‌ಐ ರಾಜುರೆಡ್ಡಿ ನೇತೃತ್ವದಲ್ಲಿ ಪ್ರಮುಖ ರಸ್ತೆಗಳಲ್ಲಿ ಭದ್ರತಾ ದೃಷ್ಟಿಯಿಂದ ರೂಟ್ ಮಾರ್ಚ್ ನಡೆಯಿತು. ಮೆರವಣಿಗೆಗಳ ಸಮಯದಲ್ಲಿ ಯಾವುದೇ ಅನಿರೀಕ್ಷಿತ ಘಟನೆಗಳು ಸಂಭವಿಸದಂತೆ ಮುಂಗಡ ಕ್ರಮವಾಗಿ ಗಣಪತಿ ವಿಸರ್ಜನೆ ಹಾಗೂ ಈದ್ ಮಿಲಾದ್ ಮೆರವಣಿಗೆ…
ರಿಪ್ಪನ್ ಪೇಟೆ ಜೆಸಿಐ ನಿಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರ ಹಾಗೂ ಛತ್ರಿ ವಿತರಣೆ
ರಿಪ್ಪನ್ ಪೇಟೆ ಜೆಸಿಐ ನಿಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರ ಹಾಗೂ ಛತ್ರಿ ವಿತರಣೆ ರಿಪ್ಪನ್ ಪೇಟೆ: ಪಟ್ಟಣದ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ ಅರಸಾಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರಗಳು ಮತ್ತು ಛತ್ರಿಗಳನ್ನು ವಿತರಿಸುವ ಮೂಲಕ ಶಿಕ್ಷಣೋತ್ಸಾಹಕ್ಕೆ ಪ್ರೇರಣೆಯಾದರು ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದ ತೀರ್ಥಹಳ್ಳಿ ಸೀನಿಯರ್ ಚೇಂಬರ್ ಜೆಸಿಐ ನಿಕಟಪೂರ್ವ ಅಧ್ಯಕ್ಷ ಹೆಚ್ ಎನ್. ಸೂರ್ಯನಾರಾಯಣ್ ಶಿಕ್ಷಣದ ಮಹತ್ವವನ್ನು ಒತ್ತಿ ಹೇಳಿ, ವಿದ್ಯಾರ್ಥಿಗಳು ಕಲಿಕೆಯಲ್ಲಿ ತೊಡಗಿಸಿಕೊಂಡು ಭವಿಷ್ಯ ನಿರ್ಮಾಣಕ್ಕೆ ಪ್ರಾಮುಖ್ಯತೆ ನೀಡಬೇಕೆಂದು ಹೇಳಿದರು….
ಹೂವಿನಕೋಣೆ ಶಾಲೆಯ ತೊಟ್ಟಿಗೆ ವಿಶಪ್ರಾಶಣ ಪ್ರಕರಣ: ತನಿಖೆಗೆ 3 ತಂಡ, 18 ಪೊಲೀಸ್ ಸಿಬ್ಬಂದಿ ನೇಮಕ
ಹೂವಿನಕೋಣೆ ಶಾಲೆಯ ತೊಟ್ಟಿಗೆ ವಿಶಪ್ರಾಶಣ ಪ್ರಕರಣ: ತನಿಖೆಗೆ 3 ತಂಡ, 18 ಪೊಲೀಸ್ ಸಿಬ್ಬಂದಿ ನೇಮಕ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹೂವಿನಕೋಣೆ ಸರ್ಕಾರಿ ಶಾಲೆಯ ನೀರಿನ ತೊಟ್ಟಿಗೆ ವಿಷ ಬೆರೆಸಿದ ಹೇಯ ಘಟನೆಯ ಬಳಿಕ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತೀವ್ರ ಗಂಭೀರತೆಯಿಂದ ಪ್ರಕರಣದ ತನಿಖೆ ವೇಗ ಪಡೆದುಕೊಂಡಿದೆ. ಘಟನೆಯ ಹಿನ್ನೆಲೆಯಲ್ಲಿ ಪೊಲೀಸರು ತಕ್ಷಣ ಕಾರ್ಯನಿರ್ವಹಣೆ ಆರಂಭಿಸಿದ್ದು, ತನಿಖೆಗೆ ಹಲವು ಆಯಾಮಗಳಲ್ಲಿ ಚುರುಕಿನ ಕಾರ್ಯಾಚರಣೆ ನಡೆಯುತ್ತಿದೆ. ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕ ಜಿ ಕೆ ಮಿಥುನ್ ಕುಮಾರ್…
ಅಡಿಕೆ ಸಸಿಗಳನ್ನು ನಾಶಗೊಳಿಸಿದ ಅರಣ್ಯಾಧಿಕಾರಿಗಳು ,ರೈತರ ಆಕ್ರೋಶ – ಸ್ಥಳಕ್ಕೆ ಆರಗ ಜ್ಞಾನೇಂದ್ರ ಭೇಟಿ
ಹೆದ್ದಾರಿಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೊಳವಳ್ಳಿ ಗ್ರಾಮದ ಸ.ನಂ. 30 ರಲ್ಲಿನ ಆರಣ್ಯ ಪ್ರದೇಶದಲ್ಲಿ ಸುಮಾರು 50-60 ವರ್ಷಗಳಿಂದ ಸ್ವಾದೀನಾನುಭವದಲ್ಲಿ ಜಮೀನು ಸಾಗುವಳಿ ಮಾಡುತ್ತಿರುವ ರೈತರ ಜಮೀನಿನಲ್ಲಿ ಅಡಿಕೆ ಸಸಿಗಳನ್ನು ತಿಳಿವಳಿಕೆ ನೀಡದೆ ಏಕಾಏಕಿ ನಾಶಗೊಳಿಸುವ ಮೂಲಕ ಅರಣ್ಯ ಇಲಾಖೆ ಅಧಿಕಾರಿಗಳು ಒಕ್ಕಲೆಬ್ಬಿಸುವ ಹುನ್ನಾರ ನಡೆಸಿದ್ದಾರೆಂದು ಶಾಸಕ ಅರಗ ಜ್ಞಾನೇಂದ್ರ ಆರೋಪಿಸಿದರು. ಹೆದ್ದಾರಿಪುರ ಗ್ರಾಪಂ ವ್ಯಾಪ್ತಿಯ ಕೊಳವಳ್ಳಿ ಗ್ರಾಮದ ಸರ್ವೇ ನಂ 30 ರಲ್ಲಿ ಅರಣ್ಯ ಇಲಾಖೆಯವರು ಅಡಿಕೆ ಸಸಿಗಳನ್ನು ಕಿತ್ತು, ಕಡಿದು ಹಾಕಿದ ಸ್ಥಳಕ್ಕೆ ಭೇಟಿ…
ಶಾಲೆಯ ಕುಡಿಯುವ ನೀರಿನ ಟ್ಯಾಂಕ್ ಗೆ ಕಳೆನಾಶಕ ಹಾಕಿದ ಕ್ರೂರ ಕೃತ್ಯ: ಸಿಎಂ ಸಿದ್ದರಾಮಯ್ಯ ಖಂಡನೆ
ಶಾಲೆಯ ಕುಡಿಯುವ ನೀರಿನ ಟ್ಯಾಂಕ್ ಗೆ ಕಳೆನಾಶಕ ಹಾಕಿದ ಕ್ರೂರ ಕೃತ್ಯ: ಸಿಎಂ ಸಿದ್ದರಾಮಯ್ಯ ಖಂಡನೆ ಹೊಸನಗರ ತಾಲ್ಲೂಕಿನ ಹೂವಿನಕೋಣೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕ್ರೂರ ಘಟನೆ ರಾಜ್ಯಾದ್ಯಾಂತ ಆತಂಕ ಉಂಟುಮಾಡಿದೆ. ಶಾಲೆಯ ನೀರಿನ ಟ್ಯಾಂಕ್‌ಗೆ ಅಪರಿಚಿತ ಕಿಡಿಗೇಡಿಗಳು ಕಳೆನಾಶಕ ಹಾಕಿರುವ ಘಟನೆನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಖಂಡಿಸಿದ್ದಾರೆ. ಸಿದ್ದರಾಮಯ್ಯ ಪೋಸ್ಟ್ ನಲ್ಲೇನಿದೆ..!?? ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಹೂವಿನಕೋಣೆಯ ಸರ್ಕಾರಿ ಪ್ರಾಥಮಿಕ ಶಾಲೆಯ ಕುಡಿಯುವ ನೀರಿನ ಟ್ಯಾಂಕಿಗೆ ಕಿಡಿಗೇಡಿಗಳು ಕೀಟನಾಶಕ ಬೆರೆಸಿರುವ ಪ್ರಕರಣವನ್ನು…
ಶಾಲೆಯ ನೀರಿನ ಟ್ಯಾಂಕ್‌ಗೆ ಕಳೆನಾಶಕ ಮಿಶ್ರಣ, ನಾಲ್ವರು ಮಕ್ಕಳು ಆಸ್ಪತ್ರೆಗೆ -ಹೂವಿನಕೋಣೆಯಲ್ಲಿ ಕಿಡಿಗೇಡಿಗಳ ಹೇಯ ಕೃತ್ಯ
ಶಾಲೆಯ ನೀರಿನ ಟ್ಯಾಂಕ್‌ಗೆ ಕಳೆನಾಶಕ ಮಿಶ್ರಣ, ನಾಲ್ವರು ಮಕ್ಕಳು ಆಸ್ಪತ್ರೆಗೆ -ಹೂವಿನಕೋಣೆಯಲ್ಲಿ ಕಿಡಿಗೇಡಿಗಳ ಹೇಯ ಕೃತ್ಯ ಹೊಸನಗರ ತಾಲೂಕಿನ ಹೂವಿನಕೋಣೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಿಡಿಗೇಡಿಗಳು ಹಾಕಿದ ಕ್ರೂರ ಕೃತ್ಯದಿಂದಾಗಿ ಮಕ್ಕಳ ಜೀವ ಅಪಾಯಕ್ಕೆ ಸಿಲುಕಿಸಿದೆ. ಶಾಲೆಯ ನೀರಿನ ಟ್ಯಾಂಕ್‌ಗೆ ಅಪರಿಚಿತ ವ್ಯಕ್ತಿಗಳು ಕಳೆನಾಶಕವನ್ನು ಹಾಕಿರುವ ಘಟನೆ ಮಂಗಳವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಶಾಲೆಯಲ್ಲಿ ಎರಡು ನೀರಿನ ಟ್ಯಾಂಕ್ ಇದ್ದು ಎರಡಕ್ಕೂ ಕಿಡಿಗೇಡಿಗಳು ಕಳೆನಾಶಕ ಮಿಶ್ರಣ ಮಾಡಿದ್ದಾರೆ ಒಂದರಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಕಳೆ…
ಗೌರಿ ಗಣೇಶ ಹಬ್ಬ | ಪೊಲೀಸರ ಜೊತೆ ಸ್ವಯಂ ಸೇವಕರಾಗಬೇಕೇ? ಇಲ್ಲಿದೆ ಸುವರ್ಣಾವಕಾಶ
ಗೌರಿ ಗಣೇಶ ಹಬ್ಬ | ಪೊಲೀಸರ ಜೊತೆ ಸ್ವಯಂ ಸೇವಕರಾಗಬೇಕೇ? ಇಲ್ಲಿದೆ ಸುವರ್ಣಾವಕಾಶ ಶಿವಮೊಗ್ಗ: ಮುಂಬರುವ ಗೌರಿ ಗಣೇಶ ಮತ್ತು ಈದ್ ಮಿಲಾದ್ ಹಬ್ಬಗಳ ಬಂದೋಬಸ್ತ್ ಸಂದರ್ಭಗಳಲ್ಲಿ ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸ್ವಯಂ ಸೇವಕರಾಗಿ ಕರ್ತವ್ಯ ನಿರ್ವಹಿಸಬಹುದಾಗಿದೆ. ಈ ಹಿನ್ನೆಲೆಯಲ್ಲಿ ಅಪರಾಧಿಕ ಹಿನ್ನೆಲೆ ಇಲ್ಲದಂತಹ ಇಚ್ಚೆಯುಳ್ಳ ಸಾರ್ವಜನಿಕರು ದಿನಾಂಕಃ 01-08-2025 ರಿಂದ 15-08-2025 ರ ವರೆಗೆ ತಮ್ಮ ವಿವರಗಳನ್ನು ಸಂಬಂಧಪಟ್ಟ ಪೊಲೀಸ್ ಉಪಾಧೀಕ್ಷಕರುಗಳ ಕಛೇರಿಗೆ ಸಲ್ಲಿಸಿ ನೋಂದಾಯಿಸಿಕೊಳ್ಳ ಬಹುದು. ಶಿವಮೊಗ್ಗ ನಗರ ಮತ್ತು ಶಿವಮೊಗ್ಗ ತಾಲ್ಲೂಕು ವ್ಯಾಪ್ತಿಗೆ…
ಶಬರೀಶನಗರದ ನಾಗ ದೇವಸ್ಥಾನದಲ್ಲಿ ನಾಗರ ಪಂಚಮಿ ಹಬ್ಬ ಸಂಭ್ರಮ
ಶಬರೀಶನಗರದ ನಾಗ ದೇವಸ್ಥಾನದಲ್ಲಿ ನಾಗರ ಪಂಚಮಿ ಹಬ್ಬ ಸಂಭ್ರಮ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಪಟ್ಟಣದ ಶಬರೀಶನಗರದ ನಾಗರ ದೇವಸ್ಥಾನದಲ್ಲಿ ನಾಗರ ಪಂಚಮಿ ಹಬ್ಬವನ್ನು ಭಕ್ತಿ ಭಾವನೆ ಮತ್ತು ಶ್ರದ್ಧೆಯಿಂದ ಆಚರಿಸಲಾಯಿತು. ಹಬ್ಬದ ಅಂಗವಾಗಿ ದೇವಾಲಯದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆಯಿತು. ನಾಗೇಂದ್ರಸ್ವಾಮಿಗೆ ವಿಶೇಷ ಅಭಿಷೇಕ, ಪಂಚಾಮೃತ ಸ್ನಾನ, ನಾಗಬಲಿ, ಅಷ್ಟನಾಗಾರ್ಚನೆ, ಸೇರಿದಂತೆ ಶ್ರದ್ಧಾ ಪೂರ್ವಕವಾದ ಸೇವೆಗಳು ಜರುಗಿದವು. ಈ ಸಂದರ್ಭದಲ್ಲಿ ನೂರಾರು ಭಕ್ತಾಧಿಗಳು ಶ್ರದ್ದೆಯಿಂದ ಪೂಜೆ ಸಲ್ಲಿಸಿ ದೇವರ ಕೃಪೆಗೆ ಪಾತ್ರರಾದರು. ಹೊಂಬುಜ…
ಅಮ್ಮನಘಟ್ಟ ದೇವಸ್ಥಾನದ ಅಭಿವೃದ್ಧಿಯಲ್ಲಿ ರಾಜಕೀಯ ಸಲ್ಲ – ಮತ್ತಿಮನೆ ಸುಬ್ರಹ್ಮಣ್ಯ
ಅಮ್ಮನಘಟ್ಟ ದೇವಸ್ಥಾನದ ಅಭಿವೃದ್ಧಿಯಲ್ಲಿ ರಾಜಕೀಯ ಸಲ್ಲ – ಮತ್ತಿಮನೆ ಸುಬ್ರಹ್ಮಣ್ಯ ರಿಪ್ಪನ್‌ಪೇಟೆ: “ಅಮ್ಮನಘಟ್ಟ ಜೇನುಕಲ್ಲಮ್ಮ ದೇವಾಲಯವು ರಾಜಕೀಯದ ಆಟಕ್ಕೆ ಬಲಿಯಾಗಬಾರದು. ಇದು ಸಾವಿರಾರು ಭಕ್ತರ ನಂಬಿಕೆಗೆ ತಾಯಿಯಾಗಿರುವ ದೇಗುಲ. ಇಂತಹ ಪವಿತ್ರ ಕ್ಷೇತ್ರದ ಅಭಿವೃದ್ಧಿಯಲ್ಲಿ ರಾಜಕೀಯ ಮಾಡುವ ಮೂಲಕ ಕಾಂಗ್ರೆಸ್ ನಾಯಕರು ಜನರ ಭಾವನೆಗಳನ್ನು ಸ್ವಾರ್ಥಕ್ಕಾಗಿ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ,” ಎಂದು ತಾಲ್ಲೂಕು ಬಿಜೆಪಿ ಅಧ್ಯಕ್ಷ ಮತ್ತಿಮನೆ ಸುಬ್ರಹ್ಮಣ್ಯ ಆರೋಪಿಸಿದ್ದಾರೆ. ಬುಧವಾರ ರಿಪ್ಪನ್ ಪೇಟೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ಶಾಸಕರಾಗಿ ಹರತಾಳು ಹಾಲಪ್ಪನವರ ಅಧಿಕಾರಾವಧಿಯಲ್ಲಿ…
ನಾಗರಹಳ್ಳಿ ನಾಗೇಂದ್ರಸ್ವಾಮಿ ದೇವಸ್ಥಾನದಲ್ಲಿ ನಾಗರ ಪಂಚಮಿ ಹಬ್ಬದ ಸಂಭ್ರಮ
ನಾಗರಹಳ್ಳಿ ನಾಗೇಂದ್ರಸ್ವಾಮಿ ದೇವಸ್ಥಾನದಲ್ಲಿ ನಾಗರ ಪಂಚಮಿ ಹಬ್ಬ ಸಂಭ್ರಮ – ಭಕ್ತರ ದಂಡೆ, ಧಾರ್ಮಿಕ ವಿಧಿವಿಧಾನಗಳೊಂದಿಗೆ ಆಚರಣೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ನಾಗರಹಳ್ಳಿಯ ಪ್ರಸಿದ್ಧ ನಾಗೇಂದ್ರಸ್ವಾಮಿ ದೇವಸ್ಥಾನದಲ್ಲಿ ಇಂದು ನಾಗರ ಪಂಚಮಿ ಹಬ್ಬವನ್ನು ಭಕ್ತಿ ಭಾವನೆ ಮತ್ತು ಶ್ರದ್ಧೆಯಿಂದ ಆಚರಿಸಲಾಯಿತು. ಮುಂಜಾನೆಯಿಂದಲೇ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನಕ್ಕಾಗಿ ಉತ್ಸಾಹದಿಂದ ಆಗಮಿಸಿದ್ದರು. ಹಬ್ಬದ ಅಂಗವಾಗಿ ದೇವಾಲಯದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆಯಿತು. ನಾಗೇಂದ್ರಸ್ವಾಮಿಗೆ ವಿಶೇಷ ಅಭಿಷೇಕ, ಪಂಚಾಮೃತ ಸ್ನಾನ, ಹಾಲು-ಸಕ್ಕರೆಯಿಂದ ಆರಾಧನೆ, ನಾಗಬಲಿ, ಅಷ್ಟನಾಗಾರ್ಚನೆ,…