ಕುಂಸಿ ಪೊಲೀಸ್ ಠಾಣೆಗೆ ದಿಡೀರ್ ಭೇಟಿ ನೀಡಿ ಗೃಹ ಸಚಿವರು

ಕುಂಸಿ ಪೊಲೀಸ್ ಠಾಣೆಗೆ ದಿಡೀರ್ ಭೇಟಿ ನೀಡಿ ಗೃಹ ಸಚಿವರು

ಗೃಹ ಸಚಿವ ಡಾ. ಜಿ.ಪರಮೇಶ್ವರ್‌ ಕುಂಸಿ ಪೊಲೀಸ್‌ ಠಾಣೆಗೆ ದಿಢೀರ್‌ ಭೇಟಿ ನೀಡಿ ಠಾಣೆಯ ಸುತ್ತಲು ಓಡಾಡಿ, ಕಡತಗಳನ್ನು ಪರಿಶೀಲಿಸಿ ಪೊಲೀಸ್‌ ಸಿಬ್ಬಂದಿಗೆ ಸಲಹೆ ನೀಡುವುದರ ಜೊತೆಗೆ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ಶಿವಮೊಗ್ಗದಿಂದ ಕಾಗೋಡು ತಿಮ್ಮಪ್ಪ ರವರನ್ನು ಭೇಟಿಯಾಗಲು ಸಾಗರಕ್ಕೆ ತೆರಳುವ ಮಾರ್ಗ ಮಧ್ಯೆ ಕುಂಸಿ ಪೊಲೀಸ್‌ ಠಾಣೆಗೆ ಗೃಹ ಸಚಿವ ಡಾ. ಪರಮೇಶ್ವರ್‌ ಹಠಾತ್‌ ಭೇಟಿ ನೀಡಿದ್ದರು.

ಪೊಲೀಸ್‌ ಠಾಣೆಯ ಒಳಾಂಗಣವನ್ನು ಗೃಹ ಸಚಿವ ಡಾ. ಜಿ.ಪರಮೇಶ್ವರ್‌ ಪರಿಶೀಲಿಸಿದರು. ಪ್ರತಿ ಕೊಠಡಿ, ಮೂಲ ಸೌಕರ್ಯ, ಟೇಬಲ್‌ ಮೇಲಿದ್ದ ಕಡತಗಳನ್ನು ಪರಿಶೀಲಿಸಿದರು. ಠಾಣೆಯಲ್ಲಿರುವ ಸೆಲ್‌ಗಳನ್ನು ವೀಕ್ಷಿಸಿದರು.ಅಪರಾಧ ಮತ್ತು ಠಾಣೆಯ ನಿರ್ವಹಣೆ ಸಂಬಂಧದ ಕಡತಗಳನ್ನು ಪರಿಶೀಲಿಸಿದರು. ಈ ಸಂದರ್ಭ ಠಾಣೆ ಸಿಬ್ಬಂದಿಗೆ ಕೆಲವು ಸಲಹೆ ನೀಡಿದರು. ಅಲ್ಲದೆ ಕೆಲವು ಕಡತಗಳನ್ನು ಸರಿಯಾಗಿ ನಿರ್ಹವಣೆ ಮಾಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ವಿವಿಧ ಪ್ರಕರಣ ಸಂಬಂಧ ಸೀಜ್‌ ಆಗಿರುವ ವಾಹನಗಳನ್ನು ವೀಕ್ಷಿಸಿದರು. ಇವುಗಳ ದಾಖಲೆಗಳನ್ನು ಸರಿಯಾಗಿ ನಿರ್ವಹಣೆ ಮಾಡಿಲ್ಲ ಎಂದು ಗೃಹ ಸಚಿವ ಡಾ.ಪರಮೇಶ್ವರ್‌ ಸಿಡಿಮಿಡಿಗೊಂಡರು. ಇನ್ನು, ಠಾಣೆಯಲ್ಲಿರುವ ಕ್ರೈಮ್‌ ಟೇಬಲ್‌ ಅಪ್‌ಡೇಟ್‌ ಮಾಡದ್ದಕ್ಕೆ ಸಿಬ್ಬಂದಿಗೆ ತರಾಟೆಗೆಗೆ ತೆಗೆದುಕೊಂಡರು.

ಈ ಸಂದರ್ಭದಲ್ಲಿ ಕರ್ನಾಟಕ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಹಾಗೂ ಶಾಸಕ ಬೇಳೂರು ಗೋಪಾಲಕೃಷ್ಣ, ವಿಧಾನ ಪರಿಷತ್‌ ಸದಸ್ಯರಾದ ಮಂಜುನಾಥ ಭಂಡಾರಿ, ಬಲ್ಕಿಶ್‌ ಬಾನು, ಪೂರ್ವ ವಲಯ ಐಜಿಪಿ ರಮೇಶ್‌ ಬಾನೋತ್‌, ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್‌ ಕುಮಾರ್‌ ಸೇರಿದಂತೆ ಹಲವರು ಇದ್ದರು.

Leave a Reply

Your email address will not be published. Required fields are marked *