Ripponpete |ಕಬ್ಬಡಿ ಪಂದ್ಯಾವಳಿ – ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ರಾಮಕೃಷ್ಣ ವಿದ್ಯಾಲಯದ ವಿದ್ಯಾರ್ಥಿನಿಯರು
ರಿಪ್ಪನ್‌ಪೇಟೆ : ರಾಜ್ಯ ಮಟ್ಟದ ಕಬ್ಬಡಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನವನ್ನು ಪಡೆಯುವ ಮೂಲಕ ಶ್ರೀ ಶಾರದಾ ರಾಮಕೃಷ್ಣ ವಿದ್ಯಾಲಯದ ಐದು ವಿದ್ಯಾರ್ಥಿನಿಯರು ಕಬ್ಬಡಿ ಪಂದ್ಯಾವಳಿಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಅ 18 ಮತ್ತು 19 ರಂದು ಜಿಲ್ಲೆಯ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಡಾ ಬಿ ಆರ್ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ 17 ವರ್ಷ ವಯೋಮಿತಿಯೊಳಗಿನ ಕಬ್ಬಡಿ ಪಂದ್ಯಾವಳಿಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ಶ್ರಾವ್ಯ ಹಿರೆಮೈತೆ , ಶ್ರೇಯಾ ಬಿ ಆರ್ , ಧೀಕ್ಷಾ ಆರ್ , ಸಂಜನಾ ಎನ್ ,ಐಶ್ವರ್ಯ ವಿ ಎಸ್ ಆಯ್ಕೆಯಾಗುವ ಮೂಲಕ ಶಿವಮೊಗ್ಗ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಪಟ್ಟಣದ ಶಬರೀಶನಗರ ನಿವಾಸಿಗಳಾದ ರಾಘವೇಂದ್ರ ಬಿ ಎಸ್ ಮತ್ತು ಸವಿತಾ ದಂಪತಿಗಳ ಪುತ್ರಿಯಾದ ಶ್ರೇಯಾ ಬಿ ಆರ್ ನಾಯಕ್ ಶಾರದ ಶಾಲೆಯಲ್ಲಿ ಒಂಬತ್ತನೇ ತರಗತಿ ವ್ಯಾಸಂಗ ಮಾಡುತಿದ್ದಾರೆ.
ಪಟ್ಟಣದ ಸಮೀಪದ ಮೈತೆ ಗ್ರಾಮದ ಓಂಕೇಶ ಮತ್ತು ಪವಿತ್ರಾ ದಂಪತಿಗಳ ಪುತ್ರಿಯಾದ ಶ್ರಾವ್ಯ ಹಿರೆಮೈತೆ ಶಾರದ ರಾಮಕೃಷ್ಣ ವಿದ್ಯಾಲಯದಲ್ಲಿ ಹತ್ತನೇ ತರಗತಿ ವ್ಯಾಸಂಗ ಮಾಡುತಿದ್ದಾರೆ.
ಪಟ್ಟಣದ ವಿನಾಯಕನಗರದ ಸುರೇಶ್ ಮತ್ತು ಜಯಂತಿ ದಂಪತಿಗಳ ಪುತ್ರಿಯಾದ ಐಶ್ವರ್ಯ ಶಾರದ ರಾಮಕೃಷ್ಣ ಶಾಲೆಯಲ್ಲಿ ವ್ಯಾಸಂಗ ಮಾಡುತಿದ್ದಾರೆ.
ಸೂಡೂರು ಗ್ರಾಮದ ರಾಜೇಶ್ ಮತ್ತು ಗೀತಾ ಎನ್ ಜೆ ದಂಪತಿಗಳ ಪುತ್ರಿಯಾದ ಧೀಕ್ಷಾ ಶಾರದ ರಾಮಕೃಷ್ಣ ವಿದ್ಯಾಲಯದಲ್ಲಿ ವ್ಯಾಸಾಂಗ ಮಾಡುತಿದ್ದಾರೆ.
ಕೋಣನಜೆಡ್ಡು ಗ್ರಾಮದ ನಾಗರಾಜ್ ಮತ್ತು ಜಾನಕಿ ದಂಪತಿಗಳ ಪುತ್ರಿ ಸಂಜನಾ ಶಾರದ ರಾಮಕೃಷ್ಣ ವಿದ್ಯಾಲಯದಲ್ಲಿ ವ್ಯಾಸಾಂಗ ಮಾಡುತಿದ್ದಾರೆ.
17 ವಯೋಮಿತಿಯೊಳಗಿನ ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೂ,ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಐವರು ವಿದ್ಯಾರ್ಥಿಗಳಿಗೂ , ಕ್ರೀಡಾ ತರಬೇತುದಾರರಾದ ವಿನಯ್ ಎಂ ರವರಿಗೆ ಶ್ರೀ ರಾಮಕೃಷ್ಣ ಸಮೂಹ ಸಂಸ್ಥೆಗಳ ಮುಖ್ಯಸ್ಥರಾದ ದೇವರಾಜ್ ಹಾಗೂ ಮುಖ್ಯ ಶಿಕ್ಷಕರಾದ ರವಿ , ಸಹ ಶಿಕ್ಷಕರು ಹಾಗೂ ವ್ಯವಸ್ಥಾಪಕರಾದ ಸಂದೇಶ್ ಹಾಗೂ ಪೋಷಕ ವೃಂದದವರು ಅಭಿನಂದನೆ ಸಲ್ಲಿಸಿರುತ್ತಾರೆ.
ಕ್ರೀಡಾ ತರಬೇತುದಾರ ವಿನಯ್ ಎಂ ರವರ ನೇತೃತ್ವದಲ್ಲಿ ರಿಪ್ಪನ್‌ಪೇಟೆಯ ಶಾರದ ರಾಮಕೃಷ್ಣ ಶಾಲೆಯ ವಿದ್ಯಾರ್ಥಿಗಳು ಕಬ್ಬಡಿ ಪಂದ್ಯಾವಳಿಯಲ್ಲಿ ಎರಡನೇಯ ಬಾರಿಗೆ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದು ಅವರಿಗೆ ಹಾಗೂ ಅದ್ವಿತೀಯ ಸಾಧನೆಗೈದ ವಿದ್ಯಾರ್ಥಿಗಳಿಗೆ ಪೋಸ್ಟ್ ಮ್ಯಾನ್ ಸುದ್ದಿ ಸಂಸ್ಥೆಯಿಂದ ಅಭಿನಂದನೆಗಳು.