ಅನಾರೋಗ್ಯ ಪೀಡಿತ ಒಂಟಿ ವೃದ್ದೆಯ ರಕ್ಷಣೆ – ಪೊಲೀಸರು ಹಾಗೂ ಪತ್ರಕರ್ತರಿಂದ ವೃದ್ದಾಶ್ರಮಕ್ಕೆ ದಾಖಲು
ರಿಪ್ಪನ್‌ಪೇಟೆ : ಇಲ್ಲಿನ ಅರಸಾಳು ಗ್ರಾಮದಲ್ಲಿ ಹಲವಾರು ವರ್ಷಗಳಿಂದ ಅನಾರೋಗ್ಯ ಪೀಡಿತರಾಗಿ ಒಂಟಿಯಾಗಿ ವಾಸಿಸುತಿದ್ದ ವೃದ್ದೆಯನ್ನು ಪಿಎಸ್‌ಐ ಪ್ರವೀಣ್ ಹಾಗೂ ಪತ್ರಕರ್ತರು ವೃದ್ದಾಶ್ರಮಕ್ಕೆ ದಾಖಲಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಭಾಗ್ಯಲಕ್ಷ್ಮಿ ಕೋಂ ನಾರಾಯಣಸ್ವಾಮಿ ಮೂಲತಃ ಅರಸಾಳಿನವರು. ಶಿಕ್ಷಕರಾಗಿದ್ದ ಇವರ ಪತಿ ಕಳೆದ ಕೆಲವು ವರ್ಷಗಳ ಹಿಂದೆ ತೀರಿಕೊಂಡಿದ್ದರು.ಮಕ್ಕಳಿಲ್ಲದ ಅವರು ಕಳೆದ ಎಂಟು ವರ್ಷಗಳಿಂದ ಅನಾರೋಗ್ಯ ಪೀಡಿತರಾಗಿ ಒಂಟಿಯಾಗಿ ದುಸ್ತರವಾಗಿರುವ ಈಗಲೋ ಆಗಲೋ ಬೀಳುವಂತೆ ಇದ್ದ ಪಾಳು ಮನೆಯಲ್ಲಿ ವಾಸಿಸುತಿದ್ದರು.ಪತ್ರಕರ್ತರಾದ ಅರಸಾಳಿನ ಮೈಸ್ ಪಿಯೂಸ್ ರೋಡ್ರಿಗಸ್ ರವರು ಕಳೆದ ಹಲವಾರು ವರ್ಷಗಳಿಂದ ಒಂಟಿ ವೃದ್ದೆಯನ್ನು ಆರೈಕೆ ಮಾಡಿಕೊಂಡು ಬಂದಿದ್ದರು ಆದರೆ ಇತ್ತೀಚಿಗೆ ಅವರ ಆರೋಗ್ಯ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟು ಭಾರಿ ಸಂಕಷ್ಟಕೊಳಗಾಗಿದ್ದರು.
ಈ ಬಗ್ಗೆ ಮಾಹಿತಿಯನ್ನರಿತ ಪಟ್ಟಣದ ಪಿಎಸ್‌ಐ ಪ್ರವೀಣ್ ಎಸ್ ಪಿ ರವರು ಪಿಯೂಸ್ ರವರ ಬಳಿ ಮಾಹಿತಿ ಪಡೆದುಕೊಂಡು ವೃದ್ದೆಯನ್ನು ವೈದ್ಯಕೀಯ ವ್ಯವಸ್ಥೆಯಿರುವ ವೃದ್ದಾಶ್ರಮಕ್ಕೆ ಸೇರಿಸುವ ಬಗ್ಗೆ ಚರ್ಚೆ ಮಾಡಿ ಅದರಂತೆ ಉಡುಪಿ ಜಿಲ್ಲೆಯ ಕೋಟೇಶ್ವರ ಗ್ರಾಮದ ಸರ್ಜನ್ ಆಸ್ಪತ್ರೆ ಹಾಗೂ ವೃದ್ದಾಶ್ರಮಕ್ಕೆ ದಾಖಲಿಸಿದ್ದಾರೆ.
ಪತಿಯ ಪಿಂಚಣಿ ಹಣದೊಂದಿಗೆ ಈಗಾಗಲೇ ಮಾರಿಕೊಂಡಿರುವ ಪಾಳು ಬಿದ್ದ ಮನೆಯಲ್ಲಿ ಪಾರ್ಶ್ವವಾಯು ರೋಗದೊಂದಿಗೆ ಕಳೆದ ಹಲವಾರು ವರ್ಷಗಳಿಂದ ಒಂಟಿಯಾಗಿ ನರಕಯಾತನೆ ಅನುಭವುಸುತಿದ್ದ ವೃದ್ದೆಯನ್ನು ವೈದ್ಯಕೀಯ ವ್ಯವಸ್ಥೆ ಇರುವಂತಹ ಕೋಟೇಶ್ವರದ ವೃದ್ದಾಶ್ರಮಕ್ಕೆ ಸೇರಿಸಿ ಖಾಕಿಯೊಳಗಿನ ಮಾನವೀಯತೆ ಅಡಿಯಲ್ಲಿ ಹಲವಾರು ಮಾನವೀಯ ಕಾರ್ಯವನ್ನು ಮಾಡುವ ಮೂಲಕ ಜನಮಾನಸದಲ್ಲಿ ಜನಾನುರಾಗಿ ಪೊಲೀಸ್ ಅಧಿಕಾರಿಯಾಗಿರುವ ಪಟ್ಟಣದ ಪಿಎಸ್‌ಐ ಪ್ರವೀಣ್ ಮಾನವೀಯತೆ ಮೆರೆದಿದ್ದಾರೆ.
ಪತ್ರಕರ್ತ ಮೈಸ್ ಪಿಯೂಸ್ ರೋಡ್ರಿಗಸ್ ವಿಶೇಷ ಕಾಳಜಿ ವಹಿಸಿ ಸಾಗರದ ಆಂಬುಲೆನ್ಸ್ ಮಾಲೀಕ ಇಮ್ರಾನ್ ರವರ ಸಹಕಾರದಿಂದ ಕೋಟೇಶ್ವರದ ಸರ್ಜನ್ ಆಸ್ಪತ್ರೆ ಮತ್ತು ವೃದ್ದಾಶ್ರಮಕ್ಕೆ ದಾಖಲಿಸಿದ್ದಾರೆ.
ಈ ಸಂಧರ್ಭದಲ್ಲಿ ಪತ್ರಕರ್ತರಾದ ರಫ಼ಿ ರಿಪ್ಪನ್‌ಪೇಟೆ , ಸಬಾಸ್ಟಿಯನ್ ಮ್ಯಾಥ್ಯೂಸ್ , ಸಾಗರದ ಪತ್ರಕರ್ತ ರಫೀಕ್ ಬ್ಯಾರಿ ರಕ್ಷಣಾ ಇಲಾಖೆಯು ಉಮೇಶ್ , ಮಧುಸೂಧನ್ ಇದ್ದರು.