
ಅನಾರೋಗ್ಯ ಪೀಡಿತ ಒಂಟಿ ವೃದ್ದೆಯ ರಕ್ಷಣೆ – ಪೊಲೀಸರು ಹಾಗೂ ಪತ್ರಕರ್ತರಿಂದ ವೃದ್ದಾಶ್ರಮಕ್ಕೆ ದಾಖಲು
ಅನಾರೋಗ್ಯ ಪೀಡಿತ ಒಂಟಿ ವೃದ್ದೆಯ ರಕ್ಷಣೆ – ಪೊಲೀಸರು ಹಾಗೂ ಪತ್ರಕರ್ತರಿಂದ ವೃದ್ದಾಶ್ರಮಕ್ಕೆ ದಾಖಲು ರಿಪ್ಪನ್‌ಪೇಟೆ : ಇಲ್ಲಿನ ಅರಸಾಳು ಗ್ರಾಮದಲ್ಲಿ ಹಲವಾರು ವರ್ಷಗಳಿಂದ ಅನಾರೋಗ್ಯ ಪೀಡಿತರಾಗಿ ಒಂಟಿಯಾಗಿ ವಾಸಿಸುತಿದ್ದ ವೃದ್ದೆಯನ್ನು ಪಿಎಸ್‌ಐ ಪ್ರವೀಣ್ ಹಾಗೂ ಪತ್ರಕರ್ತರು ವೃದ್ದಾಶ್ರಮಕ್ಕೆ ದಾಖಲಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಭಾಗ್ಯಲಕ್ಷ್ಮಿ ಕೋಂ ನಾರಾಯಣಸ್ವಾಮಿ ಮೂಲತಃ ಅರಸಾಳಿನವರು. ಶಿಕ್ಷಕರಾಗಿದ್ದ ಇವರ ಪತಿ ಕಳೆದ ಕೆಲವು ವರ್ಷಗಳ ಹಿಂದೆ ತೀರಿಕೊಂಡಿದ್ದರು.ಮಕ್ಕಳಿಲ್ಲದ ಅವರು ಕಳೆದ ಎಂಟು ವರ್ಷಗಳಿಂದ ಅನಾರೋಗ್ಯ ಪೀಡಿತರಾಗಿ ಒಂಟಿಯಾಗಿ ದುಸ್ತರವಾಗಿರುವ ಈಗಲೋ ಆಗಲೋ…