

ದಸರಾ ಎಫೆಕ್ಟ್ – ಆಗುಂಬೆ ಘಾಟಿಯಲ್ಲಿ ಸಂಪೂರ್ಣ ಜಾಮ್!
ತೀರ್ಥಹಳ್ಳಿ : ದಸರಾ ಹಬ್ಬವನ್ನು ಮುಗಿಸಿ ಪ್ರತಿಯೊಬ್ಬರು ಊರುಗಳಿಗೆ ಹೊರಟ ಕಾರಣ ವಾಹನಗಳ ದಟ್ಟನೆ ಜಾಸ್ತಿಯಾಗಿರುವುದರಿಂದ
ಸಂಪೂರ್ಣ ಟ್ರಾಫಿಕ್ ಜಾಮ್ ಆಗಿರುವ ಘಟನೆ ಆಗುಂಬೆ ಘಾಟಿಯಲ್ಲಿ ನಡೆದಿದೆ.
ಮಂಗಳೂರು, ಉಡುಪಿ ಭಾಗದಿಂದ ತೀರ್ಥಹಳ್ಳಿ ಮೂಲಕ ಶಿವಮೊಗ್ಗ ಬೆಂಗಳೂರಿಗೆ ದಸರಾ ರಜೆ ಮುಗಿಸಿ ಹೊರಟ ಕಾರಣ ಘಾಟಿಯಲ್ಲಿ ಸಂಪೂರ್ಣ ಟ್ರಾಫಿಕ್ ಜಾಮ್ ಉಂಟಾಗಿದ್ದು ವಾಹನಗಳು ಕಳೆದ ಅರ್ಧ ಗಂಟೆಯಿಂದಲೂ ಹೆಚ್ಚು ಕಾಲದಿಂದ ನಿಂತಲ್ಲಿಯೇ ನಿಂತಿದ್ದು ವಾಹನ ಸವಾರರು ಪರದಾಟ ನಡೆಸುತ್ತಿದ್ದಾರೆ.
ಸ್ಥಳದಲ್ಲಿ ಆಗುಂಬೆ ಪೊಲೀಸರು ವಾಹನ ಓಡಾಟಕ್ಕೆ ಅನುವು ಮಾಡಿ ಕೊಡಲು ಹರ ಸಾಹಸ ಪಡುತ್ತಿದ್ದಾರೆ.
