Headlines
ರಫ಼ಿ ರಿಪ್ಪನ್ ಪೇಟೆ

ರಫ಼ಿ ರಿಪ್ಪನ್ ಪೇಟೆ

ನಮಸ್ಕಾರ, ನಾನು ರಫಿ ರಿಪ್ಪನ್‌ಪೇಟೆ. ​'ಪೋಸ್ಟ್‌ಮ್ಯಾನ್ ನ್ಯೂಸ್' ಮಾಧ್ಯಮದ ಹಿಂದಿರುವ ಓರ್ವ ಅಪ್ಪಟ ಸುದ್ದಿಪ್ರೇಮಿ ಹಾಗೂ ಪತ್ರಕರ್ತ. "ನಮ್ಮೂರ ಸುದ್ದಿಗಳು ಜಗತ್ತಿಗೆ ತಲುಪಬೇಕು" ಎಂಬ ಆರು ವರ್ಷಗಳ ಕನಸಿನ ಕೂಸೇ ಈ ನಮ್ಮ ಪೋಸ್ಟ್‌ಮ್ಯಾನ್ ನ್ಯೂಸ್. ​ಸ್ಥಳೀಯ ಪತ್ರಿಕೆಗಳಿಂದ ಹಿಡಿದು ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೂ ಮಾಧ್ಯಮದ ನಾನಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದು. ಆದರೆ, ಈ ಪಯಣದಲ್ಲಿ ನನಗೊಂದು ಕೊರತೆ ಸದಾ ಕಾಡುತ್ತಿತ್ತು; ಅದೇನೆಂದರೆ, 'ನಿಜವಾದ ಸ್ಥಳೀಯ ಧ್ವನಿಗೆ ಅಲ್ಲಿ ಸೂಕ್ತ ವೇದಿಕೆ ಇರಲಿಲ್ಲ'. ಆ ಶೂನ್ಯವನ್ನು ತುಂಬಲು ಹುಟ್ಟಿಕೊಂಡ ಪರ್ಯಾಯ ವೇದಿಕೆಯೇ “ಪೋಸ್ಟ್‌ಮ್ಯಾನ್ ನ್ಯೂಸ್.” ​ಇಲ್ಲಿ 'ಸುದ್ದಿ' ಎಂದರೆ ಕೇವಲ ಸುದ್ದಿ ಮಾತ್ರ. ಇದು ಯಾವ ವ್ಯಕ್ತಿ ಅಥವಾ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಅತ್ಯಂತ ಸ್ಪಷ್ಟ: "ಸುದ್ದಿಯನ್ನು ಪ್ರಾಮಾಣಿಕವಾಗಿ ಹೇಳಬೇಕು, ತೀರ್ಪು ಕೊಡುವ ಕೆಲಸ ನಮಗಲ್ಲ." ಕೆಲವೊಮ್ಮೆ ನಮ್ಮ ವರದಿಗಳಿಗೆ ಬರುವ ಪ್ರತಿಕ್ರಿಯೆಗಳು ಬೇರೆಯದೇ ಬಣ್ಣ ಪಡೆಯಬಹುದು, ಆದರೆ ಅದಕ್ಕೆ ನನ್ನ ಏಕೈಕ ಉತ್ತರ ಕೇವಲ ನನ್ನ ಕೆಲಸದ ಮೂಲಕ ಮಾತ್ರ. ​'ಪೋಸ್ಟ್‌ಮ್ಯಾನ್ ನ್ಯೂಸ್' ಇಂದು ಕೇವಲ ಒಂದು ಸುದ್ದಿ ಪುಟವಾಗಿ ಉಳಿದಿಲ್ಲ, ಅದೊಂದು ಜಾಗೃತಿಯ ಚಳವಳಿಯಾಗಿ ರೂಪುಗೊಳ್ಳುತ್ತಿದೆ. ಕೇವಲ ವರದಿ ಮಾಡುವುದಷ್ಟೇ ನಮ್ಮ ಉದ್ದೇಶವಲ್ಲ; ನಮ್ಮೂರಿನ ಘಟನೆಗಳು, ಎಲೆಮರೆಯ ಕಾಯಿಯಂತಿರುವ ಪ್ರತಿಭೆಗಳು, ಜ್ವಲಂತ ಸಮಸ್ಯೆಗಳು ಮತ್ತು ಸಾಧನೆಗಳನ್ನು ಹೊರಲೋಕಕ್ಕೆ ಪರಿಚಯಿಸುವ 'ಸೇತುವೆ'ಯಾಗಬೇಕೆಂಬುದು ನಮ್ಮ ಹೆಬ್ಬಯಕೆ. ಹಣ ಪಡೆದು, ಕಾಸಿಗಾಗಿ ಸುದ್ದಿ ಮಾಡುವ ಅಭ್ಯಾಸವೂ ನಮಗಿಲ್ಲ, ಆ ಹವ್ಯಾಸವೂ ನಮಗಿಲ್ಲ. ಸತ್ಯ ಮತ್ತು ನೈಜತೆಯೇ ನಮ್ಮ ಬಂಡವಾಳ. ​ನಮ್ಮ ಅಂತಿಮ ಗುರಿ ಒಂದೇ — "ಸಣ್ಣ ಊರುಗಳ ಸತ್ಯ ಕಥೆಗಳು, ಅತಿ ದೊಡ್ಡ ಮಟ್ಟದಲ್ಲಿ ಜಗತ್ತಿನ ಕಿವಿಗೆ ತಲುಪಬೇಕು." ​ತಮ್ಮ ಪ್ರೀತಿ ಮತ್ತು ಬೆಂಬಲ ಸದಾ ಹೀಗೆಯೇ ಇರಲಿ. ​ಸ್ನೇಹಪೂರ್ವಕವಾಗಿ, ರಫಿ ರಿಪ್ಪನ್‌ಪೇಟೆ ಸಂಪಾದಕರು, ಪೋಸ್ಟ್‌ಮ್ಯಾನ್ ನ್ಯೂಸ್ 🌐 [www.postmannewskannada.com]

ರಿಪ್ಪನ್‌ಪೇಟೆ : ಹಿಂದೂ ಮಹಸಭಾ ಮಾಜಿ ಅಧ್ಯಕ್ಷ ನಿತ್ಯಾನಂದ ಹೆಗಡೆ ನಿಧನಕ್ಕೆ ಶ್ರದ್ದಾಂಜಲಿ|Ripponpet

ರಿಪ್ಪನ್‌ಪೇಟೆ : ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ ಮಾಜಿ ಅಧ್ಯಕ್ಷ ನಿತ್ಯಾನಂದ ಹೆಗಡೆ ರವರ ಅಕಾಲಿಕ ಸಾವು ನಮಗೆಲ್ಲಾ ಅತ್ಯಂತ ನೋವು ತಂದಿದೆ. ಯಾವುದೇ ಭಿನ್ನಾಭಿಪ್ರಾಯಗಳಿಲ್ಲದೇ ಎಲ್ಲರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದರು,ಪಟ್ಟಣದ ಹಲವಾರು ಸಂಘ ಸಂಸ್ಥೆಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ್ದ ನಿತ್ಯಾನಂದ ಹೆಗಡೆ ರವರ ನಿಧನದ ಸುದ್ದಿ ನಮಗೆಲ್ಲರಿಗೂ ಆಘಾತವನ್ನುಂಟುಮಾಡಿದೆ ಎಂದು ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ ಅಧ್ಯಕ್ಷ ವೈ ಜೆ ಕೃಷ್ಣ ಹೇಳಿದರು. ಪಟ್ಟಣದ ಭೂಪಾಳಂ ಚಂದ್ರಶೇಖರ್ ಸಭಾಂಗಣದಲ್ಲಿ ಕರ್ನಾಟಕ ಪ್ರಾಂತೀಯ ಹಿಂದೂ…

Read Full News

ಹೋರಿ ಬೆದರಿಸುವ ಸ್ಪರ್ದೆ : ಜಿಲ್ಲೆಯಲ್ಲಿ ಪ್ರತ್ಯೇಕ ಮೂರು ಪ್ರಕರಣಗಳಲ್ಲಿ ಮೂವರ ಸಾವು|Shikaripura

 ಹೋರಿ ಬೆದರಿಸುವ ಸ್ಪರ್ದೆಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಮೂರು ಪ್ರತ್ಯೇಕ ಪ್ರಕರಣದಲ್ಲಿ ಮೂವರ ಸಾವು. ಶಿಕಾರಿಪುರದ ಗಾಮಾ ಗ್ರಾಮ ಹಾಗೂ ಸೊರಬ ತಾಲ್ಲೂಕಿನ ಜಡೆ ಗ್ರಾಮ ಹಾಗೂ ತರಲಘಟ್ಟ ಗ್ರಾಮದಲ್ಲಿ ಹೋರಿ ಬೆದರಿಸುವ ಸ್ಪರ್ಧೆಗೆ ಇಬ್ಬರು ಬಲಿಯಾಗಿದ್ದಾರೆ. ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕಿ ಗಾಮಾ ಗ್ರಾಮದಲ್ಲಿ ನಡೆದ ಹೋರಿ ಹಬ್ಬದಲ್ಲಿ ಪ್ರಶಾಂತ್ (36) ಎಂಬಾತ ಸಾವನ್ನಪ್ಪಿದ್ದಾನೆ. ಘಟನೆ ವಿಡಿಯೋ ಇದೀಗ ಎಲ್ಲೆಡೆ ವೈರಲ್​ ಆಗಿದೆ. ಹೋರಿ ಬೆದರಿಸುವ ಸಂದರ್ಭದಲ್ಲಿ, ಬೆದರದ ಹೋರಿಯು ಒಂದು ಕಡೆಯ ಗೋಡೆ ಕಡೆಗೆ ತಿರುಗಿ ಹಿಂದಕ್ಕೆ…

Read Full News

ರಿಪ್ಪನ್‌ಪೇಟೆ : ಪುನೀತ್ ಪುಣ್ಯ ಸ್ಮರಣೆ |ರಾಜರತ್ನ ಮರೆಯಾಗಿ ಕಳೆದೇ ಹೋಯ್ತು ಒಂದು ವರ್ಷ|punith

ಮೊನ್ನೆ ಮೊನ್ನೆ ನಡೆದಿದೆಯೇನೋ.. ಎಂಬ ಭಾವನೆ ಇಂದಿಗೂ ಜನರ ಮನಸ್ಸಿನಲ್ಲಿದೆ. ಅಪ್ಪು ಅಗಲಿಕೆಗೆ ಆಗಲೇ ಒಂದು ವರ್ಷ. ಕಳೆದ ವರ್ಷ ಅಕ್ಟೋಬರ್ 29ರಂದು ಇಡೀ ಕರುನಾಡು ಕಣ್ಣೀರಿಟ್ಟಿತ್ತು. ನಿನ್ನೆಯಷ್ಟೇ ಪುನೀತ್ ಕಟ್ಟಕಡೆಯ ಸಿನಿ-ಡಾಕ್ಯುಮೆಂಟರಿ ಅಥವಾ ಡಾಕ್ಯು-ಡ್ರಾಮಾ ಗಂಧದ ಗುಡಿ ರಿಲೀಸ್ ಆಗಿದೆ. ಕರ್ನಾಟಕ ರತ್ನ ಡಾ| ಪುನೀತ್ ರಾಜ್‍ಕುಮಾರ್ ರವರ ಮೊದಲ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಪಟ್ಟಣದ ವಿನಾಯಕ ವೃತ್ತದಲ್ಲಿ ಕಸ್ತೂರಿ ಕನ್ನಡ ಸಂಘ ಹಾಗೂ ಪುನೀತ್ ರಾಜ್‍ಕುಮಾರ್ ಅಭಿಮಾನಿ…

Read Full News

ಮೇಗರವಳ್ಳಿ : ಪಾದಚಾರಿಗೆ ಡಿಕ್ಕಿ ಹೊಡೆದ ಇನ್ನೊವಾ ಕಾರು – ವ್ಯಕ್ತಿ ಸಾವು|Thirthahalli

ತೀರ್ಥಹಳ್ಳಿ : ತಾಲೂಕಿನ ರಾಷ್ಟ್ರೀಯ ಹೆದ್ದಾರಿ 169 ಎ ರಲ್ಲಿ ಮೇಗರವಳ್ಳಿ ಸರ್ಕಾರಿ ಆಸ್ಪತ್ರೆ ಸಮೀಪದಲ್ಲಿ ಭೀಕರ ಅಪಘಾತದಲ್ಲಿ ವೃದ್ದನೊಬ್ಬ ಸಾವನ್ನಪ್ಪಿರುವ ಘಟನೆ ಶನಿವಾರ ಬೆಳಗ್ಗೆ ನೆಡೆದಿದೆ. ಮೇಗರವಳ್ಳಿ ಗ್ರಾಮದ ಪುರೋಹಿತರಾದ ಕೆ ಜಿ ಗಣೇಶ್ ರಾವ್ ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಮೇಗರವಳ್ಳಿ ಗ್ರಾಮದ ಸರ್ಕಾರಿ ಆಸ್ಪತ್ರೆಯ ಮುಂಭಾಗದಲ್ಲಿ ವೃದ್ದರಾದ ಕೆ ಜಿ ಗಣೇಶ್ ರಾವ್ ರಸ್ತೆ ದಾಟುತ್ತಿದ್ದಾಗ ಇನೋವಾ ಕಾರು ಏಕಾಏಕಿ ಡಿಕ್ಕಿ ಹೊಡೆದಿದೆ. ತಕ್ಷಣ ಸ್ಥಳೀಯರು ಗಾಯಾಳುವಿಗೆ ಮೇಗರವಳ್ಳಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ನಂತರ …

Read Full News

ರಿಪ್ಪನ್‌ಪೇಟೆಯಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವಕ್ಕೆ ಭರದ ಸಿದ್ದತೆ : ಕಾರ್ಯಕ್ರಮದ ಅಹ್ವಾನ ಪತ್ರಿಕೆ ಬಿಡುಗಡೆ|Ripponpet

ರಿಪ್ಪನ್‌ಪೇಟೆ ;-ಇಲ್ಲಿನ ಕಸ್ತೂರಿ ಕನ್ನಡ ಸಂಘದ ನವಂಬರ್ 1 ರಂದು 67 ನೇ ಕನ್ನಡ ರಾಜ್ಯೋತ್ಸವ ಮತ್ತು ದಿ.ಪುನಿತ್‌ರಾಜ್ “ಪುಣ್ಯ ಸ್ಮರಣೆ’’ ಕಾರ್ಯಕ್ರಮದ ಅಹ್ವಾನ ಪತ್ರಿಕೆಯ ಬಿಡುಗಡೆಯನ್ನು ಹಿರಿಯ ಸಾಹಿತಿ ಹ.ಅ..ಪಾಟೀಲ್ ಬಿಡುಗಡೆಗೊಳಿಸಿದರು. ಗ್ರಾಮ ಪಂಚಾಯ್ತಿ ಸಭಾ ಭವನದಲ್ಲಿ ಕಸ್ತೂರಿ ಕನ್ನಡ ಸಂಘದ ಅಹ್ವಾನ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಕನ್ನಡ ರಾಜ್ಯೋತ್ಸವ ನವಂಬರ್ ತಿಂಗಳಿಗೆ ಸೀಮಿತಗೊಳ್ಳದೆ ನಿತ್ಯೋತ್ಸವವಾಗಲಿ ಎಂದು ಅಶಿಸಿದರು. ಕಸ್ತೂರಿ ಕನ್ನಡ ಸಂಘದ ಅಧ್ಯಕ್ಷ ಮೆಣಸೆ ಅನಂದ ಅಧ್ಯಕ್ಷತೆ ವಹಿಸಿ ಮಾತನಾಡಿ ಭೂಪಾಳಂ ಚಂದ್ರಶೇಖರಯ್ಯ…

Read Full News

ಚಲಿಸುತಿದ್ದ ರೈಲಿಗೆ ಸಿಲುಕಿ ರಬ್ಬರ್ ಟ್ಯಾಪಿಂಗ್ ಮಾಡುವ ಯುವಕ ಸಾವು|Railway

ರಿಪ್ಪನ್‌ಪೇಟೆ : ಇಲ್ಲಿಗೆ ಸಮೀಪದ ಅರಸಾಳು ಗ್ರಾಮದಲ್ಲಿ ಚಲಿಸುತಿದ್ದ ರೈಲಿಗೆ ಸಿಲುಕಿ ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ಇಂದು ಬೆಳಗಿನಜಾವ ನಡೆದಿದೆ. ಅರಸಾಳು ಗ್ರಾಮದ ಕೆರೆ ಏರಿ‌ಮೇಲಿನ ತಿರುವಿನಲ್ಲಿ ಈ ಘಟನೆ ನಡೆದಿದ್ದು ಮೃತಪಟ್ಟ ವ್ಯಕ್ತಿಯನ್ನು ಸಾಗರದ ತ್ಯಾಗರ್ತಿ ಮೂಲದ ಸಂತೋಷ್ (22) ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಶಿವಮೊಗ್ಗದ ರೈಲ್ವೆ ಪೊಲೀಸರು ಆಗಮಿಸಿ ಸ್ಥಳ ಮಹಜರು ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಅರಸಾಳುವಿನ ರಬ್ಬರ್ ತೋಟದಲ್ಲಿ ಕೆಲಸಕ್ಕಾಗಿ ಎರಡು ದಿನಕೊಮ್ಮೆ ಈತ ಇಲ್ಲಿಗೆ ಬರುತ್ತಿದ್ದನು. ಇಂದು ಬೆಳಗ್ಗೆ…

Read Full News

ಮಿದುಳು ನಿಷ್ಕ್ರಿಯಗೊಂಡು ಏಳು ವರ್ಷದ ಬಾಲಕ ಸಾವು : ನೇತ್ರದಾನ ಮಾಡಿ ಉದಾರತೆ ಮೆರೆದ ಪೋಷಕರು|Eyedonate

ರಿಪ್ಪನ್ ಪೇಟೆ : ಏಳು ವರ್ಷದ ಮಗುವಿನ ಮೆದುಳಿನಲ್ಲಿ ರಕ್ತಸ್ತ್ರಾವ ಉಂಟಾಗಿ ಸಾವು ಬದುಕಿನ ನಡುವೆ ಹೋರಾಡುತ್ತಿತ್ತು. ಮಗನನ್ನು ಬದುಕಿಸುವುದಕ್ಕೆ ಪೋಷಕರು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿ, ಚಿಕಿತ್ಸೆ ಕೊಡಿಸುತ್ತಿದ್ದರು. ಆದರೆ ಮೆದುಳು ನಿಷ್ಕ್ರೀಯಗೊಂಡ ಬಳಿಕ ಬಾಲಕ ಸಾವಿನ ಮನೆಯ ಅಂಚು ತಲುಪಿಯಾಗಿತ್ತು. ಎತ್ತಿ ಮುದ್ದಾಡಿ ಸಾಕಿ ಸಲುಹಿದ ಪುಟ್ಟ ಮಗನ ಸಾವಿನ ನೋವಿನ ನಡುವೆಯೂ ಪೋಷಕರು ಆತನ ಅಂಗಾಂಗ ದಾನ ಮಾಡುವ ನಿರ್ಧಾರ ಮಾಡಿದ್ದಾರೆ. ಈ ಮೂಲಕ ಮಗನ ಸಾವಿನ ನೋವಿನಲ್ಲಿಯೂ ಸಾರ್ಥಕತೆಯನ್ನು ಮೆರೆದಿದ್ದಾರೆ. ಹೌದು…

Read Full News

ರಿಪ್ಪನ್‌ಪೇಟೆ : ಶಿವಮಂದಿರದ ಬಳಿ ಬೈಕ್ ಗಳ ನಡುವೆ ಡಿಕ್ಕಿ – ಇಬ್ಬರ ಸ್ಥಿತಿ ಗಂಭೀರ, ಮೆಗ್ಗಾನ್ ಗೆ ದಾಖಲು|Accident

ರಿಪ್ಪನ್‌ಪೇಟೆ : ಇಲ್ಲಿನ ಶಿವಮೊಗ್ಗ ರಸ್ತೆಯ ಶಿವಮಂದಿರದ ಬಳಿ ಎರಡು ಬೈಕ್​ಗಳ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಇಬ್ಬರು ಬೈಕ್ ಸವಾರರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಗಾಳಿಬೈಲ್ ನಿವಾಸಿ ಆಸೀಫ಼್ ಮತ್ತು ಮಾದಪುರ ಗ್ರಾಮದ ಪ್ರಶಾಂತ್ ಗಂಭೀರ ಗಾಯಗೊಂಡವರು. ಗಾಳಿಬೈಲ್ ಗ್ರಾಮದ ಆಸೀಪ್ ಎಂಬುವವನು ಬಜಾಜ್ ಪಲ್ಸರ್(NS) ಬೈಕ್‌ನಲ್ಲಿ ರಿಪ್ಪನ್‌ಪೇಟೆಯಿಂದ ಗಾಳಿಬೈಲ್ ಕಡೆಗೆ ತೆರಳುತಿದ್ದನು, ಮಾದಾಪುರ ಗ್ರಾಮದ ಪ್ರಶಾಂತ್ ಎಂಬುವವನು ಬಜಾಜ್ ಡಿಸ್ಕವರಿ ಬೈಕ್ ನಲ್ಲಿ ಅದೇ ಮಾರ್ಗದಲ್ಲಿ ತೆರಳುತಿದ್ದಾಗ ಆಸೀಫ಼್ ಹಿಂಬದಿಯಿಂದ ಡಿಕ್ಕಿ ಹೊಡೆದ…

Read Full News

ಭಾರತ್ ಜೋಡೋ ಯಾತ್ರೆಯಲ್ಲಿ ಮೃತಪಟ್ಟಿದ್ದ ಸಾಗರದ ಕಾರ್ಯಕರ್ತನ ಮನೆಗೆ ಡಿ ಕೆ ಶಿವಕುಮಾರ್ ಭೇಟಿ – 10 ಲಕ್ಷ ನೆರವಿನ ಚೆಕ್ ವಿತರಣೆ|KPCC

ಭಾರತ್ ಜೋಡೋ ಯಾತ್ರೆಗೆ ತೆರಳಿದ್ದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ತ್ಯಾಗರ್ತಿಯ ಕಾಂಗ್ರೆಸ್ ಕಾರ್ಯಕರ್ತನೊಬ್ಬ ಅಪಘಾತದಲ್ಲಿ ಮೃತಪಟ್ಟಿದ್ದರು.ಆ ಕಾರ್ಯಕರ್ತನ ಮನೆಗೆ ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಭೇಟಿ ನೀಡಿ, 10 ಲಕ್ಷ ನೆರವಿನ ಚೆಕ್ ವಿತರಿಸಿದರು. ಭಾರತ್ ಜೋಡೋ ಯಾತ್ರೆ ವೇಳೆ ಹಿರಿಯೂರು ಬಳಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ಕಾಂಗ್ರೆಸ್ ಕಾರ್ಯಕರ್ತ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ತ್ಯಾಗರ್ತಿ ಹೋಬಳಿ ಹುತ್ತದಿಂಬ ಗ್ರಾಮದ ರಮೇಶ್ ಅವರ ನಿವಾಸಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು…

Read Full News

ಮಗುವಿನ ಪ್ರಥಮ ವರ್ಷದ ಹುಟ್ಟುಹಬ್ಬದ ದಿನವೇ ಆತ್ಮಹತ್ಯೆಗೆ ಶರಣಾದ ರಿಪ್ಪನ್‌ಪೇಟೆ ಮೂಲದ ಮಹಿಳೆ : ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಪೋಷಕರು|Ripponpet

ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಕಾರಗೋಡು ಗ್ರಾಮದ ಮಹಿಳೆ ಆಲಗೇರಿ ಮಂಡ್ರಿ ಸಮೀಪದ ಗಂಟಿನಕೊಪ್ಪ ಗ್ರಾಮದ ತನ್ನ ಗಂಡನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಕಾರಗೋಡು ಗ್ರಾಮದ ಆಟೋ ಕೃಷ್ಣ ರವರ ಪುತ್ರಿ ಐಶ್ವರ್ಯ (22) ಮೃತಪಟ್ಟ ದುರ್ಧೈವಿಯಾಗಿದ್ದಾರೆ. ರಿಪ್ಪನ್‌ಪೇಟೆ ಸಮೀಪದ ಕಾರಗೋಡು ಗ್ರಾಮದ ನಿವಾಸಿ ಆಟೋ ಕೃಷ್ಣ ರವರ ಪುತ್ರಿ ಐಶ್ವರ್ಯ ವಿವಾಹ ಎರಡು ವರ್ಷಗಳ ಹಿಂದೆ ಆಲಗೇರಿ ಮಂಡ್ರಿ ಸಮೀಪದ ಗಂಟಿನಕೊಪ್ಪ ಗ್ರಾಮದ ಚಂದ್ರಶೇಖರ್ ಎಂಬುವವರ ಜೊತೆ ನಡೆದಿತ್ತು. ಮೃತ…

Read Full News

ಸಾಹಿತಿಗಳಿಗೆ ಬೆದರಿಕೆಯೊಡ್ಡುವುದನ್ನು ಸಹಿಸಲು ಸಾಧ್ಯವಿಲ್ಲ : ಹರತಾಳು ಹಾಲಪ್ಪ | ಸಾಹಿತಿ ನಾ ಡಿಸೋಜಾ ಮನೆಗೆ ಭೇಟಿ ನೀಡಿ ಧೈರ್ಯ ತುಂಬಿದ ಶಾಸಕರು|sagara

ಸಾಗರ : ಲೇಖಕರು, ಸಾಹಿತಿಗಳು ನಿರ್ಭಯವಾಗಿ ಬರವಣಿಗೆ ಮಾಡಲು ಅವಕಾಶವಾಗಬೇಕು. ಹಿಂಸೆ, ಭಯದ ಮೂಲಕ ಲೇಖನಿಯನ್ನು ತಡೆಯುವ ಯಾವುದೇ ಪ್ರಯತ್ನ ಸರಿಯಲ್ಲ ಎಂದು ಶಾಸಕ ಹರತಾಳು ಹಾಲಪ್ಪ ತಿಳಿಸಿದರು.  ಬೆದರಿಕೆ ಪತ್ರ ಬಂದಿರುವ ಹಿನ್ನೆಲೆಯಲ್ಲಿ ಹಿರಿಯ ಸಾಹಿತಿ ಡಾ| ನಾ.ಡಿಸೋಜಾ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿ ಅವರು ಮಾತನಾಡಿದರು. ಹಿಂದೆ ಗೌರಿ ಲಂಕೇಶ್‌, ಕಲಬುರ್ಗಿ ಅಂತವರ ಹತ್ಯೆ ನಡೆದಿದೆ. ಬೇರೆ ಬೇರೆ ವಿಚಾರಧಾರೆಯುಳ್ಳವರಿಂದ ಇಂತಹ ಕೆಲಸ ನಡೆದಿದೆ. ಚರ್ಚೆಯ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕೇ ವಿನಃ ಹಿಂಸೆಗೆ ಇಳಿಯಬಾರದು…

Read Full News

ಭದ್ರಾವತಿ ಆಟೋ ಚಾಲಕನ ಕೊಲೆ ಪ್ರಕರಣ : ಸ್ನೇಹಿತರಿಂದಲೇ ನಡೆಯಿತು ಕೊಲೆ | ಮಗನ ಸಾವಿಗೆ ನೊಂದು ತಾಯಿ ಆತ್ಮಹತ್ಯೆ!!!!!???|Bhadravathi

ಭದ್ರಾವತಿ : ಸ್ನೇಹಿತರು ಅಂದರೆ ಪ್ರಾಣಕ್ಕೆ ಪ್ರಾಣ ಕೊಡೋರು ಅಂತಾರೆ, ಆದರೆ  ಭದ್ರಾವತಿಯಲ್ಲಿ ಸ್ನೇಹಿತರೆ ತಮ್ಮ ಗೆಳೆಯನನ್ನು ಕೊಲೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಅಕ್ಟೋಬರ್ 24ರಂದು ಭದ್ರಾವತಿಯ ಎಪಿಎಂಸಿ ಆವರಣದ ಮ್ಯಾಮ್ ಕೋಸ್ ಕಟ್ಟಡ ಬಳಿ ರೂಪೇಶ್ ಎಂಬಾತನ ಶವ ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡ ಭದ್ರಾವತಿಯ ಹಳೇ ನಗರ ಠಾಣೆ ಪೊಲೀಸರು ತನಿಖೆ ನಡೆಸಿದಾಗ ಸ್ನೇಹಿತರ ಕೃತ್ಯ ಬಯಲಾಗಿದೆ. ಆಟೋ ಚಾಲಕನಾಗಿದ್ದ ರೂಪೇಶ್​ನನ್ನು ಆತನ ಸ್ನೇಹಿತರೇ ಆದ ಭದ್ರಾವತಿ ಕಾಚಗೂಂಡನಹಳ್ಳಿಯ ಕುಶಾಲ್(35) ಹಾಗೂ ಭದ್ರಾವತಿ ಹುತ್ತಾ…

Read Full News

ಭಾವೈಕ್ಯತೆಯಿಂದ ಸಮಾಜದ ಅಭಿವೃದ್ಧಿ ಸಾಧ್ಯ: ಜೋಸೆಫ್ ಅರಮಚ್ಚಾಡತ್ | ರಿಪ್ಪನ್‌ಪೇಟೆ ನವೀಕೃತ ಗುಡ್‌ಶಫರ್ಡ್ ಚರ್ಚ್ ಲೋಕಾರ್ಪಣೆ|Ripponpet

ರಿಪ್ಪನ್ ಪೇಟೆ: ಪ್ರತಿಯೊಂದು ಧರ್ಮದ ಮೂಲ ಸಾರ ಮನುಕುಲದ ಒಳಿತು. ಜಗತ್ತಿಗೆ ಶಾಂತಿ ಸಂದೇಶವನ್ನು ನೀಡಿದ ಪ್ರಭು ಯೇಸುಕ್ರಿಸ್ತರು ಕರುಣೆ ಪ್ರೀತಿ  ಮತ್ತು ದೇವರ ಮೇಲಿನ ನಂಬಿಕೆಯಿಂದ ಮಾತ್ರ ನೆಮ್ಮದಿಯ ಜೀವನವನ್ನು ಸಾಗಿಸಬಹುದು ಎಂದು ಶುಭ ಸಂದೇಶವನ್ನು ನೀಡಿದ್ದಾರೆ.ಜಾತಿ ಮತ ಪಂಥಗಳ ಭೇದವನ್ನು ಮರೆತು ಸದ್ಭಾವನೆಯಿಂದ ಬೆರೆತು ಎಲ್ಲರೂ ಸಹೋದರ ಸಹೋದರಿಯಂತೆ  ಇದ್ದಾಗ ಮಾತ್ರ ನೆಮ್ಮದಿಯ ಸಮಾಜಕ್ಕೆ ದಾರಿದೀಪವಾಗಲಿದೆ ಎಂದು ಭದ್ರಾವತಿ ಧರ್ಮ ಕ್ಷೇತ್ರದ ಧರ್ಮಧ್ಯಕ್ಷ ಜೋಸೆಫ್ ಅರಮಚ್ಚಾಡತ್  ಹೇಳಿದರು. ಪಟ್ಟಣದ ತೀರ್ಥಹಳ್ಳಿ ರಸ್ತೆಯಲ್ಲಿನ ನವೀಕರಣಗೊಂಡ  ಗುಡ್‌ಶಫರ್ಡ್…

Read Full News

ಶ್ರದ್ದಾ ಭಕ್ತಿಯಿಂದ ನೆರವೇರಿದ ಸಂಭ್ರಮದ ಗೋಪೂಜೆ|Ripponpet

ರಿಪ್ಪನ್‌ಪೇಟೆ : ಇಂದು ಬಲಿಪಾಡ್ಯಮಿಯ ಅಂಗವಾಗಿ ರಿಪ್ಪನ್‌ಪೇಟೆಯ ವಿವಿದಢೆಯಲ್ಲಿ ಮತ್ತು ಮಜರಾಯಿ ಇಲಾಖೆಯವರ ಅದೇಶದನ್ವಯ ಹಲವು ದೇವಸ್ಥಾನಗಳಲ್ಲಿ ಗೋಪೂಜೆಯನ್ನು ಶ್ರದ್ದಾಭಕ್ತಿಯಿಂದ ಸಂಭ್ರಮಸಿದರು. ಇಲ್ಲಿನ ಗಣಪತಿ ದೇವಸ್ಥಾನದಲ್ಲಿ ಬೆಳಗ್ಗೆ ಗೋವುಯನ್ನು ಶೃಂಗರಿಸಿ ದೇವಸ್ಥಾನದ ಪ್ರದಾನ ಅರ್ಚಕ ವೇ.ಚಂದ್ರಶೇಖರ ಭಟ್ ಮತ್ತು ಗುರುರಾಜ್ ಭಟ್ ನೇತೃತ್ವದಲ್ಲಿ ಗೋ ಮಾತೆಗೆ ಬೆಲ್ಲ ಅಕ್ಕಿ ಬಾಳೆಹಣ್ಣು ನೀಡಿ ವಿಶೇಷ ಪೂಜೆ ಸಲ್ಲಿಸಲಾಯಿತು. ದೇವಸ್ಥಾನದ ಧರ್ಮದರ್ಶಿ ಆರ್.ಈ.ಈಶ್ವರಶೆಟ್ಟಿ, ಎಂ.ಡಿ.ಇಂದ್ರಮ್ಮ,ಗಣೇಶ್ ಎನ್.ಕಾಮತ್, ಎನ್.ಸತೀಶ್,ಸುಧೀಂದ್ರ ಪೂಜಾರಿ,ಮಂಜಪ್ಪ, ಮೋಹನ್,ಜಯಲಕ್ಷಿ, ರಾಘವೇಂದ್ರ,ಕೆ.ಆರ್.ಭೀಮರಾಜ್‌ಗೌಡರು, ವೈ.ಜೆ.ಕೃಷ್ಣ,ರಾಘವೇಂದ್ರ ಆರ್.ಸರಸ್ವತಿ ರಾಘವೇಂದ್ರ,ಇನ್ನಿತರರು ಹಾಜರಿದ್ದರು. [ ರಿಪ್ಪನ್‌ಪೇಟೆಯ ಸಮೀಪದ…

Read Full News

ಖಾಸಗಿ ಆಸ್ಪತೆ ಉದ್ಯೋಗಿ ಕೊಲೆ ಪ್ರಕರಣ : ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಆರೋಪಿ ಜಬಿ ಕಾಲಿಗೆ ಗುಂಡೇಟು|Shivamogga

ಮಹಜರ್ ಗೆ ಕರೆದೊಯ್ದ ಸಂದರ್ಭ ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ ಆರೋಪಿಯ ಕಾಲಿಗೆ ಗುಂಡು ಹೊಡೆಯಲಾಗಿದೆ.  ವೆಂಕಟೇಶ ನಗರದಲ್ಲಿ ಯುವಕನ ಕೊಲೆ ಪ್ರಕರಣ ಸಂಬಂಧ ಮಹಜರ್ ಗೆ ಕರೆದೊಯ್ದಾಗ ಘಟನೆ ಸಂಭವಿಸಿದೆ.  ವೆಂಕಟೇಶ ನಗರದಲ್ಲಿ ಮಂಗಳವಾರ ಬೆಳಗಿನ ಜಾವ ವಿಜಯ್ ಎಂಬಾತನ ಹತ್ಯೆ ಮಾಡಲಾಗಿತ್ತು. ಪ್ರಕರಣ ಸಂಬಂಧ ಮೂವರನ್ನು ಪೊಲೀಸರು ಬಂಧಿಸಿದ್ದರು. ಬಂಧಿತರನ್ನು ಜಬಿ (23), ದರ್ಶನ್ (21) ಮತ್ತು ಕಾರ್ತಿಕ್ ಅಲಿಯಾಸ್ ಕಟ್ಟೆ (21) ಬಂಧಿತರು. ವಿಜಯ್ ಕೊಲೆಗೆ ಬಳಕೆ ಮಾಡಿದ್ದ ಮಾರಕಾಸ್ತ್ರಗಳನ್ನು…

Read Full News

ತೀರ್ಥಹಳ್ಳಿ : ಪ್ಲೈವುಡ್ ಕಟ್ ಮಾಡುವಾಗ ಮಿಷಿನ್ ನ ಬ್ಲೇಡ್ ಹರಿದು ಕಾರ್ಮಿಕ ಸಾವು|Maaluru

ತೀರ್ಥಹಳ್ಳಿ ತಾಲೂಕಿನ ಮಾಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ಲೇವುಡ್ ಕೆಲಸಕ್ಕೆ ಬಂದಿದ್ದ ಕಾರ್ಮಿಕನೊಬ್ಬ ಅಚಾನಕ್ಕಾಗಿ ಸಾವನ್ನಪ್ಪಿರುವ ಘಟನೆ ಇಂದು ಸಂಜೆ ನಡೆದಿದೆ. ಮಾಳೂರು ಪೊಲೀಸ್ ಠಾಣೆ ವ್ಯಾಪ್ತಿಯ ಮುಂಡಾಸ್ ಕೊಪ್ಪ ಗ್ರಾಮದ ಆದಿತ್ಯ ಎಂಬುವವನೊಬ್ಬ ಪ್ಲೇವುಡ್ ವರ್ಕ್ ಗಾಗಿ ತೆರಳಿದ್ದರು. ಪ್ಲೈವುಡ್ ಕಟ್ ಮಾಡುವ ವೇಳೆ ಮಿಷಿನ್ ನ ಬ್ಲೇಡು ಅಚಾನಕ್ಕಾಗಿ ಆದಿತ್ಯನ ಕುತ್ತಿಗೆಯನ್ನ ಕೊಯ್ದಿದೆ.ಗಾಯಾಳುವನ್ನು ತಕ್ಷಣ ತೀರ್ಥಹಳ್ಳಿ ಜೆಸಿ ಆಸ್ಪತ್ರೆಗೆ ಸಾಗಿಸುವಾಗ ಆದಿತ್ಯ ಮಾರ್ಗ ಮಧ್ಯದಲ್ಲಿಯೇ ಸಾವನ್ನಪ್ಪಿದ್ದಾರೆ. ಈ ಪ್ರಕರಣ ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಠಾಣೆಯ…

Read Full News

ಶಿವಮೊಗ್ಗದ ಹಲ್ಲೆ ಪ್ರಕರಣ – ಮೂವರು ಆರೋಪಿಗಳನ್ನು ಬಂಧಿಸಿದ ಪೊಲೀಸರು|Shivamogga

ಶಿವಮೊಗ್ಗ : ಸೀಗೆಹಟ್ಟಿ ಬಳಿಯ ಧರ್ಮಪ್ಪ ನಗರದಲ್ಲಿ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ಉಳಿದವರ ವಿಚಾರಣೆ ಮುಂದುವರೆದಿದೆ. ಪ್ರಕಾಶ್ ಎಂಬುವವನ ಮೇಲೆ ಹಲ್ಲೆ ಮತ್ತು ಸೀಗೆಹಟ್ಟಿಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ದೊಡ್ಡಪೇಟೆ ಪೊಲೀಸರು ಮಾರ್ಕೆಟ್ ಫೌಜನ್(22), ಅಜರ್ ಯಾನೆ ಅಜ್ಜು(24) ಹಾಗೂ ಫರಾಜ್ (21) ಎಂಬುವರನ್ನ  ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಮೂವರು ಪ್ರಕಾಶ್ ಹಲ್ಲೆಗೆ…

Read Full News

ಶಾಂತಿ ಸಹಬಾಳ್ವೆಯೇ ಕ್ರಿಶ್ಚಿಯನ್ ಧರ್ಮದ ಮೂಲ ಮಂತ್ರವಾಗಿದೆ : ಆರಗ ಜ್ಞಾನೇಂದ್ರ|church-ripponpet

ರಿಪ್ಪನ್‌ಪೇಟೆ : ಕ್ರಿಶ್ಚಿಯನ್ ಸಮುದಾಯದವರು ಸದಾ ಶಾಂತಿ ಸಹಬಾಳ್ವೆಯೊಂದಿಗೆ ಅರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ಸರ್ವಧರ್ಮೀಯರಲ್ಲಿ ಸಮಾನತೆ ಸಹೋದರತ್ವವನ್ನು ಕಾಣುವುದರೊಂದಿಗೆ ತಮ್ಮ ಧರ್ಮದ ಸಂಘಟನೆಯನ್ನು ಬೆಳೆಸಿಕೊಂಡವರು ಎಂದು ರಾಜ್ಯ ಗೃಹ ಸಚಿವ ಆರಗ ಜ್ಞಾನೆಂದ್ರ ಹೇಳಿದರು. ರಿಪ್ಪನ್‌ಪೇಟೆಯ ತೀರ್ಥಹಳ್ಳಿ ರಸ್ತೆಯಲ್ಲಿ ನವೀಕರಣಗೊಂಡು ನಾಳೆ ಲೋಕಾರ್ಪಣೆಗೊಳ್ಳಲಿರುವ ಗುಡ್‌ಶಫರ್ಡ್ ಚರ್ಚ್ ಗೆ ಭೇಟಿ ನೀಡಿ ಧರ್ಮಗುರುಗಳು ಹಾಗೂ ಕ್ರೈಸ್ತ ಬಾಂಧವರ ಜೊತೆ ಸಮಾಲೋಚನೆ ನಡೆಸಿ ಮಾತನಾಡಿ ಕ್ರಿಶ್ಚಿಯನ್ ಸಮುದಾಯ ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ…

Read Full News

ಶಿವಮೊಗ್ಗ ಮತ್ತೆ ಉದ್ವಿಗ್ನ | ಮಾರಕಾಸ್ತ್ರಗಳಿಂದ ವ್ಯಕ್ತಿಯ ಮೇಲೆ ಹಲ್ಲೆ : ಕಲ್ಲು ತೂರಾಟ|Shivamogga

ಶಿವಮೊಗ್ಗ: ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ಸೀಗೆಹಟ್ಟಿ ಬಳಿಯ ಧರ್ಮಪ್ಪ ನಗರದಲ್ಲಿ ನಡೆದಿದ್ದು, ಹಲ್ಲೆಗೊಳಗಾದ ವ್ಯಕ್ತಿಯನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಮವಾರ ರಾತ್ರಿ 11.30ರ ಸುಮಾರಿಗೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಧರ್ಮಪ್ಪ ನಗರದ ಎರಡನೇ ಕ್ರಾಸ್ ನಿವಾಸಿ ಪ್ರಕಾಶ್ (25)ಎಂಬಾತನ ಮೇಲೆ ಹಲ್ಲೆ ನಡೆಸಿದ್ದಾರೆ. ಪ್ರಕಾಶ್‌ನ ತಲೆಗೆ ಗಾಯವಾಗಿದ್ದು, ಮೆಗ್ಗಾನ್ ಅಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಿಂದ ಕೆಲಕಾಲ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿತ್ತು.  ಸುದ್ದಿ ತಿಳಿದು ಸ್ಥಳಕ್ಕೆ ಬಂದ ಎಸ್ಪಿ ಜಿ.ಕೆ.ಮಿಥುನ್…

Read Full News

ಶಿವಮೊಗ್ಗದಲ್ಲಿ ಖಾಸಗಿ ಆಸ್ಪತ್ರೆ ಸಿಬ್ಬಂದಿಯ ಭೀಕರ ಕೊಲೆ|ನಡುರಸ್ತೆಯಲ್ಲಿ ಮೃತದೇಹ ಪತ್ತೆ|Murder

ಶಿವಮೊಗ್ಗ ನಗರದ ಜೈಲ್ ರಸ್ತೆಯ ಇಡ್ಲಿ ಹೌಸ್ ಪಕ್ಕದ ತಿರುವಿನ ವೆಂಕಟೇಶ ನಗರ ತಿರುವಿನ ಆರಂಭದ ಮನೆಯೊಂದರ ಮುಂದೆ ಇಂದು ಮುಂಜಾನೆ ಯುವಕನೊಬ್ಬನನ್ನು ಕೊಲೆ ಮಾಡಲಾಗಿದೆ. ಆತನ ಹೊಟ್ಟೆಗೆ ಚಾಕುವಿನಿಂದ ತಿವಿದಿದ್ದಾರೆ. ಮೃತ ವ್ಯಕ್ತಿಯನ್ನು ಗಾಂಧಿನಗರದ ನಿವಾಸಿ ಹಾಗೂ ಶಿವಮೊಗ್ಗ ನಗರದ ಭಾರತ್ ನ್ಯೂರೋ ಕ್ಲಿನಿಕ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವಿಜಯ್ ಎಂ.ವಿ.ಎಂದು ಹೇಳಲಾಗುತ್ತಿದೆ. ಆತನಿಗೆ ಸುಮಾರು 34 ವರ್ಷ ವಯಸ್ಸು ಎನ್ನಲಾಗಿದೆ. ಗಾಂಧಿನಗರದ ನಿವಾಸಿಯಾದ ಆತನಿಗೆ ನಿನ್ನೆ ರಾತ್ರಿ ಎರಡು ಮೂವತ್ತರ ಹೊತ್ತಿಗೆ ಆಸ್ಪತ್ರೆಯಿಂದ ಫೋನ್…

Read Full News

ರಿಪ್ಪನ್ ಪೇಟೆ : ಶ್ರದ್ದಾ ಭಕ್ತಿಯಿಂದ ನೆರವೇರಿದ ಲಕ್ಷ್ಮಿಪೂಜೆ| ಗ್ರಾಮದ ದೇವರುಗಳಿಗೆ ಕುರಿ,ಕೋಳಿ ಬಲಿ ನೀಡಿ ಸಂಭ್ರಮದ ನೋನಿ ಆಚರಣೆ:

ರಿಪ್ಪನ್ ಪೇಟೆ: ದೀಪಾವಳಿ ಹಬ್ಬದ ಸಂಭ್ರಮ ಇಂದು ಪಟ್ಟಣದೆಲ್ಲೆಡೆ ಕಂಡು ಬಂದಿದೆ. ವಿಶೇಷವಾಗಿ ಇಂದು ಲಕ್ಷ್ಮಿ ಪೂಜೆ ನೆರವೇರಿಸಲಾಗುತ್ತಿದೆ. ಅಂಗಡಿಗಳು, ಶೋರೂಮ್ ಗಳು, ಗ್ಯಾರೇಜ್ ಗಳು, ಕಚೇರಿಗಳು, ಸೇರಿದಂತೆ ಹಲವರು ಲಕ್ಷ್ಮಿ ಪೂಜೆ ಮಾಡಿದ್ದಾರೆ. ದೀಪಾವಳಿಯ ದಿನವಾದ ಇಂದು ಲಕ್ಷ್ಮೀ ಪೂಜೆಯನ್ನು ಶ್ರದ್ದಾಭಕ್ತಿಯಿಂದ ಇಲ್ಲಿನ ಅಂಗಡಿ, ಹೋಟೆಲ್ ಇನ್ನಿತರ ಉದ್ಯಮಗಳಲ್ಲಿ ಶ್ರದ್ಧಾ ಭಕ್ತಿಯಿಂದ ಮುತ್ತೈದೆಯರು ಸೇರಿದಂತೆ ಬಂಧು-ಬಳಗದವರು ಪೂಜೆಯೊಂದಿಗೆ ಸಂಭ್ರಮಿಸಿದರು. ಇಂದು ಕೂಡ ಪಟ್ಟಣದಲ್ಲಿ ಜನಜಂಗುಳಿ ಕಂಡು ಬಂದಿತು. ದಿನಸಿ, ಬಟ್ಟೆ ಅಂಗಡಿಗಳು, ಪಟಾಕಿ ಸ್ಟಾಲ್ ಗಳ…

Read Full News

ರಿಪ್ಪನ್‌ಪೇಟೆ : ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ ಮಾಜಿ ಅಧ್ಯಕ್ಷ ನಿತ್ಯಾನಂದ ಹೆಗಡೆ ನಿಧನ|hegade

ರಿಪ್ಪನ್‌ಪೇಟೆ : ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ  ಸಂಘದ ಮಾಜಿ ಅಧ್ಯಕ್ಷರಾದ ನಿತ್ಯಾನಂದ ಹೆಗಡೆ(57) ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಪಟ್ಟಣದ ಕಲಾ ಕೌಸ್ತುಭ ಕನ್ನಡ ಸಂಘ ಹಾಗೂ ವಿವಿಧ ಸಂಸ್ಥೆಗಳಲ್ಲಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸಿದ್ದ ನಿತ್ಯಾನಂದ ಹೆಗಡೆ ಕಳೆದ ಕೆಲ ಸಮಯದಿಂದ ಅನಾರೋಗ್ಯ ಪೀಡಿತರಾಗಿದ್ದರು.ಸೊರಬದ ಹರಿಷಿ ಗ್ರಾಮದ ತಮ್ಮ ಸ್ವಗೃಹದಲ್ಲಿ ಇಂದು ಸಂಜೆ ಮೃತಪಟ್ಟಿದ್ದಾರೆ. ಮೃತರು ಪತ್ನಿ ,ಓರ್ವ ಪುತ್ರನನ್ನು ಬಿಟ್ಟು ಅಗಲಿದ್ದಾರೆ.  ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಸೊರಬದ ಹರಿಷಿ ಗ್ರಾಮದಲ್ಲಿ ಅಂತ್ಯಕ್ರೀಯೆಯನ್ನು ನಡೆಸಲು…

Read Full News

ಅಕ್ಟೋಬರ್ 26 ರಂದು ರಿಪ್ಪನ್ ಪೇಟೆಯಲ್ಲಿ ನವೀಕೃತ ಗುಡ್‌ಶಫರ್ಡ್ ಚರ್ಚ್ ಲೋಕಾರ್ಪಣೆ’|Ripponpet

ರಿಪ್ಪನ್‌ಪೇಟೆ;-ಪಟ್ಟಣದ ತೀರ್ಥಹಳ್ಳಿ ರಸ್ತೆಯಲ್ಲಿನ ಗುಡ್‌ಶಫರ್ಡ್ ಫೂರಾನ ಚರ್ಚ್ ನವೀಕರಣಗೊಂಡು ಇದೇ ಅಕ್ಟೋಬರ್ ೨೬ ರಂದು ಬುಧವಾರ ಮಧ್ಯಾಹ್ನ  ೩-೪೫ ಕ್ಕೆ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ. ಲೋಕಾರ್ಪಣೆ ಕಾರ್ಯಕ್ರಮವು ಭದ್ರಾವತಿಯ ಎಂ.ಸಿ.ಬಿ.ಎಸ್.ಬೀಷಪ್  ಧರ್ಮಕ್ಷೇತ್ರದ ಜೋಸೆಫ್ ಅರುಮಜ್ಜಾ ಡತ್ ದಿವ್ಯ ಸಾನಿಧ್ಯದಲ್ಲಿ ಲೋಕಾರ್ಪಣೆಗೊಳ್ಳಲಿದೆ. ಈ ಕಾರ್ಯಕ್ರಮದಲ್ಲಿ ಮುಖ್ಯ ಆತಿಥಿಗಳಾಗಿ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ,ಸಂಸದ ಬಿ.ವೈ.ರಾಘವೇಂದ್ರ,ಶಾಸಕ ಹರತಾಳು ಹಾಲಪ್ಪ, ರಿಪ್ಪನ್‌ಪೇಟೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮಂಜುಳಾ ಕೇತಾರ್ಜಿರಾವ್, ಉಪಾಧ್ಯಕ್ಷೆ ಮಹಾಲಕ್ಷಿ, ಗ್ರಾ.ಪಂ ಸದಸ್ಯರಾದ.ಈ.ಮಧುಸೂದನ್,ಪಿ.ರಮೇಶ್, ವನಮಾಲ,ಮದರ್ ಸುಪೀರಿಯರ್ ಮ.ಲಿಸ್ಸಾಮರಿಯಾ,ಭದ್ರಾವತಿ ಧರ್ಮಕ್ಷೇತ್ರದ…

Read Full News

ಲಾರಿ ಹಾಗೂ ಬೈಕ್ ನಡುವೆ ಭೀಕರ ಅಪಘಾತ – ಯುವಕ ಸ್ಥಳದಲ್ಲೇ ಸಾವು – ಇನ್ನೋರ್ವ ಗಂಭೀರ|Accident

ಶಿವಮೊಗ್ಗ ಜಿಲ್ಲೆಯ ಆಯನೂರು ಸಮೀಪ ಗ್ಯಾಸ್ ಸಿಲಿಂಡರ್ ಲಾರಿ ಹಾಗೂ ಬೈಕ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಶಿವಮೊಗ್ಗದಿಂದ ಆಯನೂರು ಕಡೆ ಹೊರಟಿದ್ದ ಗ್ಯಾಸ್ ಸಿಲಿಂಡರ್ ತುಂಬಿದ್ದ ಲಾರಿಗೆ ಹಾಗೂ ಆಯನೂರಿನಿಂದ ಶಿವಮೊಗ್ಗಕ್ಕೆ ಹೊರಟಿದ್ದ ಬೈಕ್ ನ ನಡುವೆ ಈ ಅಪಘಾತ ಸಂಭವಿಸಿದ್ದು. ಸ್ಥಳದಲ್ಲೇ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾರೆ. ಆಯನೂರು ಕೋಟೆ ನಿವಾಸಿ ಯಶವಂತ್ ಎಂಬ ವ್ಯಕ್ತಿ ಸ್ಥಳದಲ್ಲೇ  ಸಾವನ್ನಪ್ಪಿದ್ದಾರೆ. ಬೈಕ್ ನ ಹಿಂಬದಿ ಕೂತಿದ್ದ ವ್ಯಕ್ತಿಯ ಕಾಲು ಮುರಿದಿದ್ದು ತಕ್ಷಣ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ…

Read Full News

ರಿಪ್ಪನ್‌ಪೇಟೆ : ಅದ್ದೂರಿಯಾಗಿ ಜರುಗಿದ ಈದ್ ಮಿಲಾದ್ ಮೆರವಣಿಗೆ|Ripponpet

ರಿಪ್ಪನ್‌ಪೇಟೆ : ಪಟ್ಟಣದ ಮೊಹಿಯುದ್ದೀನ್ ಜುಮ್ಮಾ ಮಸೀದಿ ಮತ್ತು ಮೆಕ್ಕಾ ಜುಮ್ಮಾ ಮಸೀದಿ, ತಝೀಝುಲ್ ಇಸ್ಲಾಂ ಮದ್ರಸ.ಮೀಲಾದ್ ಸ್ವಾಗತ ಸಮಿತಿ, ಬದ್ರಿಯಾ ಮದ್ರಸ ಸಮಿತಿ ಎಸ್.ಎಸ್.ಎಫ್,ಮತ್ತು ಎಸ್.ವೈ.ಎಸ್. ಇವರ ಸಹಯೋಗದಲ್ಲಿ ಅಯೋಜಿಸಲಾದ “ಇಲಲ್ ಹಬೀಬ್ ಮೀಲಾದ್’ ಸಮಾರಂಭದ ಅಂಗವಾಗಿ ಇಂದು ಈದ್ ಮಿಲಾದ್ ಮೆರವಣಿಗೆ ನಡೆಯಿತು. ಹೊಸನಗರ ರಸ್ತೆಯಿಂದ ವಿನಾಯಕ ವೃತ್ತದ ಮೂಲಕ ಸಾಗರ ರಸ್ತೆಯಲ್ಲಿನ ಖಬರ್ ಸ್ಥಾನ್ ವರೆಗೆ ಮುಸಲ್ಮಾನ ಭಾಂಧವರು ಯುವಕರ “ದಫ಼್’’ ಅಕರ್ಷಣೆಯೊಂದಿಗೆ  ಮುಸ್ಲಿಂ ಧರ್ಮಗುರುಗಳ ನೇತೃತ್ವದಲ್ಲಿ  ಮೆರವಣಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು….

Read Full News

ರಿಪ್ಪನ್‌ಪೇಟೆ : ನಿವೃತ ಎ ಎಸ್ ಐ ಮನೆಗೆ ಹಗಲು ಹೊತ್ತಿನಲ್ಲಿಯೇ ನುಗ್ಗಿ ಕಳ್ಳತನ – ಹತ್ತು ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣ ಕಳ್ಳತನ|Theft

ರಿಪ್ಪನ್‌ಪೇಟೆ : ಇಲ್ಲಿ‌ನ ತೀರ್ಥಹಳ್ಳಿ ರಸ್ತೆಯಲ್ಲಿ ವಾಸವಾಗಿರುವ ನಿವೃತ್ತ ಎಎಸ್ ಐ ರೊಬ್ಬರ ಮನೆಗೆ ಹಗಲು ಹೊತ್ತಿನಲ್ಲಿಯೇ ಕಳ್ಳರು ನುಗ್ಗಿ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣವನ್ನು ಕಳ್ಳತನ ಮಾಡಿರುವ ಘಟನೆ ಇಂದು ನಡೆದಿದೆ. ದಿನದಿಂದ ದಿನಕ್ಕೆ ಕಳ್ಳರು ಸ್ಮಾರ್ಟ್​ ಆಗುತ್ತಿದ್ದಾರೆ, ಮತ್ತಷ್ಟು ಚುರುಕಾಗುತ್ತಿದ್ದಾರೆ. ತಂತ್ರಜ್ಞಾನ ಎಷ್ಟೇ ಅಭಿವೃದ್ಧಿ ಹೊಂದಿದರೂ.. ಅವರವರದ್ದೇ ಆದ ದಾರಿಗಳನ್ನು ಕಂಡುಕೊಂಡು, ತಾವು ಐನಾತಿ ಕಳ್ಳರೇ ಸರಿ ಎಂಬವುದನ್ನು ಸಾಬೀತುಪಡಿಸುತ್ತಿದ್ದಾರೆ. ತಂತ್ರಜ್ಞಾನದ ಸಮ್ಮುಖದಲ್ಲಿ ರಾತ್ರಿಗಳು ಮೊದಲಿನಂತಿಲ್ಲ… ಹಾಗಂತ ಹಗಲು ಎಚ್ಚೆತ್ತುಕೊಳ್ಳುವುದಕ್ಕೆ ಅವಕಾಶವಿದೆಯಾ ಎಂದು ನೋಡಿದರೆ…

Read Full News

ಸ್ನೇಹಿತರ ನಡುವಿನ ಗಲಾಟೆ ಚೂರಿ ಇರಿತದಲ್ಲಿ ಅಂತ್ಯ : ಗಾಯಾಳು ಆಸ್ಪತ್ರೆಗೆ ದಾಖಲು-ಆರೋಪಿ ಪರಾರಿ|Stabbed

ಹೊಟೇಲ್ ನಲ್ಲಿ ಊಟ ಮಾಡುತಿದ್ದ ಇಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ಮಾತು ಮಾತಲ್ಲೇ ಗಲಾಟೆಯಾಗಿ ಒಬ್ಬನಿಗೆ ಚೂರಿ ಇರಿತವಾಗಿರುವ ಘಟನೆ ನಡೆದಿದೆ. ಸಾಗರ ನಗರದ ಬಿ.ಎಚ್ ರಸ್ತೆಯ ಮಂಜುಶ್ರೀ ಹೋಟೆಲಿಗೆ ಗ್ರಾಹಕರಾಗಿ ಇಬ್ಬರು ಯುವಕರು ಬಂದಿದ್ದಾರೆ. ಅವರ ನಡುವೆ ಕ್ಷುಲ್ಲಕ ವಿಚಾರಕ್ಕೆ ಗಲಾಟೆಯಾಗಿದೆ. ಗಲಾಟೆ ತಾರಕಕ್ಕೇರಿ, ಒಬ್ಬ ಮತ್ತೊಬ್ಬನಿಗೆ ಚೂರಿಯಿಂದ ಚುಚ್ಚಿದ್ದಾನೆ. ಇರಿತಕ್ಕೆ ಒಳಗಾದವನನ್ನು ಸಾಗರದ ಉಪ ವಿಭಾಗೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.ಚೂರಿಯಿಂದ ಹಲ್ಲೆ ನಡೆಸಿದ ವ್ಯಕ್ತಿ ಸ್ಥಳದಿಂದ ಪರಾರಿಯಾಗಿದ್ದಾನೆ.  ಘಟನಾ ಸ್ಥಳಕ್ಕೆ ಪೊಲೀಸರು ಬಂದು ಸ್ಥಳ ಪರಿಶೀಲನೆ…

Read Full News

ವಿಧಾನಸಭೆಯ ಡೆಪ್ಯೂಟಿ ಸ್ಪೀಕರ್ ಶಾಸಕ ಆನಂದ್ ಮಾಮನಿ ನಿಧನ|Bangalore

ವಿಧಾನಸಭೆಯ ಉಪಸಭಾಧ್ಯಕ್ಷ ಹಾಗೂ ಬೆಳಗಾವಿ ಜಿಲ್ಲೆ ಸವದತ್ತಿ ಕ್ಷೇತ್ರದ ಶಾಸಕರೂ ಆಗಿದ್ದ ಆನಂದ್ ಚಂದ್ರಶೇಖರ್ ಮಾಮನಿ (56) ಅವರು ತಡರಾತ್ರಿ ನಿಧನರಾಗಿದ್ದಾರೆ. ತೀವ್ರ ಸ್ವರೂಪದ ಅನಾರೋಗ್ಯದ ಹಿನ್ನೆಲೆಯಲ್ಲಿ ಎರಡು ತಿಂಗಳಿಂದ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಿಸದೆ ನಗರದ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನರಾದರು. ಉಪಸಭಾಪತಿಯಾಗಿದ್ದ ವೇಳೆ ಅವರು ಕಲಾಪದಲ್ಲಿ ಸದನವನ್ನು ನಿರ್ವಹಿಸುತ್ತಿದ್ದ ರೀತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಬೆಳಗಾವಿ ಜಿಲ್ಲೆಯ ಸವದತ್ತಿ ವಿಧಾನಸಭೆ ಕ್ಷೇತ್ರದಿಂದ ಸತತ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಅವರು, ಮಾದರಿ ಜನಪ್ರತಿನಿಧಿಯಾಗಿ ಕ್ಷೇತ್ರದಲ್ಲಿ…

Read Full News

ಕೊಡಚಾದ್ರಿ ಬೆಟ್ಟವೇರಿದ್ದ ಕೇರಳ ಮೂಲದ ವ್ಯಕ್ತಿ ಹೃದಯಾಘಾತದಿಂದ ಸಾವು|Kodachadri

ಕೊಡಚಾದ್ರಿ ಗಿರಿ ಹತ್ತಿದ ವ್ಯಕ್ತಿಯೋರ್ವ ಹೃದಯಾಘಾತದಿಂದ ಮೃತಪಟ್ಟ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ. ಕೇರಳದ ಕನ್ನೂರು ಜಿಲ್ಲೆಯ ವಾಲಪ್ಪಿಲ್ ಸಮೀಪದ ಕೊಟ್ಟಾರತು ಗ್ರಾಮದ ನಿವಾಸಿ ಗೋವಿಂದನ್ ಕುನ್ನಪ್ಪ (72) ಮೃತ ವ್ಯಕ್ತಿ ಶುಕ್ರವಾರದಂದು ಕೇರಳದಿಂದ ಕೊಲ್ಲೂರು ಶ್ರೀ ಮೂಕಾಂಬಿಕ ದರ್ಶನಕ್ಕೆ ಬಂದಿದ್ದ ಗೋವಿಂದನ್ ಕುಟುಂಬ ಕೊಲ್ಲೂರಿನಲ್ಲಿ ವಾಸ್ತವ್ಯ ಹೂಡಿ ಇಂದು ಬೆಳಿಗ್ಗೆ ಕೊಡಚಾದ್ರಿ ಗಿರಿಗೆ ಹೋಗಿದ್ದು ಪ್ರವಾಸಿಮಂದಿರದಿಂದ ಗಿರಿ ತುದಿಯ ಸರ್ವಜ್ಞ ಪೀಠಕ್ಕೆ ಕಾಲ್ನಡಿಗೆಯಲ್ಲಿ ತೆರಳಿದ್ದರು. ಸರ್ವಜ್ಞ ಪೀಠ ತಲುಪಿದ ನಂತರ ಅಲ್ಲೇ ಗೋವಿಂದನ್ ಕುನ್ನಪ್ಪ ಕುಸಿದು…

Read Full News

ಡಿನೋಟಿಫಿಕೇಷನ್ ರದ್ದುಗೊಳಿಸಿದ ರಾಜ್ಯ ಸರ್ಕಾರ : ಅತಂತ್ರಗೊಂಡ ಶರಾವತಿ ಮುಳುಗಡೆ ಸಂತ್ರಸ್ತರ ಬದುಕು|Sharavathi

ಶರಾವತಿ ಮುಳುಗಡೆ ಸಂತ್ರಸ್ತರ ಭೂ ಹಕ್ಕಿನ ಕನಸು ಮತ್ತೆ ಕಮರಿ‌ ಹೋಗಿದೆ.ನ್ಯಾಯಾಂಗ ನಿಂದನೆ ಭಯದಿಂದ‌ ರಾಜ್ಯ ಸರ್ಕಾರ ಡಿನೋಟಿಫಿಕೇಷನ್ ರದ್ದುಗೊಳಿಸಿದೆ. ಈ ಮೂಲಕ ರಾಜ್ಯಕ್ಕೆ ಬೆಳಕು ನೀಡಲು ತಮ್ಮ ಸರ್ವಸ್ವವನ್ನೇ ತ್ಯಾಗ ಮಾಡಿರುವ ಮುಳುಗಡೆ ಸಂತ್ರಸ್ತರನ್ನು ಸರ್ಕಾರ ಮತ್ತೊಮ್ಮೆ ಅನಾಥರನ್ನಾಗಿಸಿದೆ. ಹೌದು, ವಿದ್ಯುತ್ ಉತ್ಪಾದನೆ ಸಲುವಾಗಿ ಲಿಂಗನಮಕ್ಕಿ ಜಲಾಶಯ ನಿರ್ಮಾಣದ ವೇಳೆ ಶಿವಮೊಗ್ಗದ ಸಾಗರ, ಹೊಸನಗರ ತಾಲೂಕಿನ 166 ಗ್ರಾಮಗಳ 6,177 ಕುಟುಂಬಗಳನ್ನು ಎತ್ತಂಗಡಿ ಮಾಡಲಾಗಿತ್ತು. ಅಂದಿನ‌ ರಾಜ್ಯ ಸರ್ಕಾರ 1962 ರಲ್ಲಿಯೇ ಪುನರ್ವಸತಿಗಾಗಿ ಅರಣ್ಯ ಭೂಮಿಯನ್ನ…

Read Full News