ಶಿವಮೊಗ್ಗ ನಗರದ ಜೈಲ್ ರಸ್ತೆಯ ಇಡ್ಲಿ ಹೌಸ್ ಪಕ್ಕದ ತಿರುವಿನ ವೆಂಕಟೇಶ ನಗರ ತಿರುವಿನ ಆರಂಭದ ಮನೆಯೊಂದರ ಮುಂದೆ ಇಂದು ಮುಂಜಾನೆ ಯುವಕನೊಬ್ಬನನ್ನು ಕೊಲೆ ಮಾಡಲಾಗಿದೆ.
ಆತನ ಹೊಟ್ಟೆಗೆ ಚಾಕುವಿನಿಂದ ತಿವಿದಿದ್ದಾರೆ. ಮೃತ ವ್ಯಕ್ತಿಯನ್ನು ಗಾಂಧಿನಗರದ ನಿವಾಸಿ ಹಾಗೂ ಶಿವಮೊಗ್ಗ ನಗರದ ಭಾರತ್ ನ್ಯೂರೋ ಕ್ಲಿನಿಕ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವಿಜಯ್ ಎಂ.ವಿ.ಎಂದು ಹೇಳಲಾಗುತ್ತಿದೆ. ಆತನಿಗೆ ಸುಮಾರು 34 ವರ್ಷ ವಯಸ್ಸು ಎನ್ನಲಾಗಿದೆ.
ಗಾಂಧಿನಗರದ ನಿವಾಸಿಯಾದ ಆತನಿಗೆ ನಿನ್ನೆ ರಾತ್ರಿ ಎರಡು ಮೂವತ್ತರ ಹೊತ್ತಿಗೆ ಆಸ್ಪತ್ರೆಯಿಂದ ಫೋನ್ ಬಂದಿದೆ ಎಂದು ಹೇಳಲಾಗಿದ್ದು ಆಗ ಆತ ಹೋಗಿದ್ದಾನೆ ಎಂದು ಮೃತ ವ್ಯಕ್ತಿಯ ತಂದೆ ಹೇಳಿದ್ದಾರೆ. ಆತನ ಕೆ.ಎ. 05 ಹೆಚ್.ಜಿ.775 5 ಕ್ರಮ ಸಂಖ್ಯೆಯ ಬೈಕ್ ಸಹ ಅದೇ ಸ್ಥಳದಲ್ಲಿ ನಿಂತಿದೆ.
ವಿಜಯ್ ಇತ್ತೀಚೆಗೆ ವಿವಾಹ ವಿಚ್ಛೇದನ ಪಡೆದಿದ್ದರು ಎನ್ನಲಾಗಿದ್ದು, ಇನ್ನಷ್ಟು ವಿವರಗಳು ಹೊರ ಬರಬೇಕಿದೆ. ಸ್ಥಳಕ್ಕೆ ಭೇಟಿ ನೀಡಿದ ಜಯನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮಾದಪ್ಪ ಹಾಗೂ ಸಿಬ್ಬಂದಿಗಳು ಪರಿಶೀಲನೆ ನಡೆಸಿದ್ದು, ಮೃತನ ಕುಟುಂಬವನ್ನು ಪತ್ತೆ ಹಚ್ಚಿದ್ದಾರೆ. ಮೃತ ದೇಹವನ್ನು ಮೆಗಾನ್ ಆಸ್ಪತ್ರೆಗೆ ಕಳುಹಿಸಿದ್ದಾರೆ.
ಪೊಲೀಸ್ ತನಿಖೆ ಮುಂದುವರೆದಿದೆ