ಭಾವೈಕ್ಯತೆಯಿಂದ ಸಮಾಜದ ಅಭಿವೃದ್ಧಿ ಸಾಧ್ಯ: ಜೋಸೆಫ್ ಅರಮಚ್ಚಾಡತ್ | ರಿಪ್ಪನ್‌ಪೇಟೆ ನವೀಕೃತ ಗುಡ್‌ಶಫರ್ಡ್ ಚರ್ಚ್ ಲೋಕಾರ್ಪಣೆ|Ripponpet

ರಿಪ್ಪನ್ ಪೇಟೆ: ಪ್ರತಿಯೊಂದು ಧರ್ಮದ ಮೂಲ ಸಾರ ಮನುಕುಲದ ಒಳಿತು. ಜಗತ್ತಿಗೆ ಶಾಂತಿ ಸಂದೇಶವನ್ನು ನೀಡಿದ ಪ್ರಭು ಯೇಸುಕ್ರಿಸ್ತರು ಕರುಣೆ ಪ್ರೀತಿ  ಮತ್ತು ದೇವರ ಮೇಲಿನ ನಂಬಿಕೆಯಿಂದ ಮಾತ್ರ ನೆಮ್ಮದಿಯ ಜೀವನವನ್ನು ಸಾಗಿಸಬಹುದು ಎಂದು ಶುಭ ಸಂದೇಶವನ್ನು ನೀಡಿದ್ದಾರೆ.ಜಾತಿ ಮತ ಪಂಥಗಳ ಭೇದವನ್ನು ಮರೆತು ಸದ್ಭಾವನೆಯಿಂದ ಬೆರೆತು ಎಲ್ಲರೂ ಸಹೋದರ ಸಹೋದರಿಯಂತೆ  ಇದ್ದಾಗ ಮಾತ್ರ ನೆಮ್ಮದಿಯ ಸಮಾಜಕ್ಕೆ ದಾರಿದೀಪವಾಗಲಿದೆ ಎಂದು ಭದ್ರಾವತಿ ಧರ್ಮ ಕ್ಷೇತ್ರದ ಧರ್ಮಧ್ಯಕ್ಷ ಜೋಸೆಫ್ ಅರಮಚ್ಚಾಡತ್  ಹೇಳಿದರು.


ಪಟ್ಟಣದ ತೀರ್ಥಹಳ್ಳಿ ರಸ್ತೆಯಲ್ಲಿನ ನವೀಕರಣಗೊಂಡ  ಗುಡ್‌ಶಫರ್ಡ್ ಚರ್ಚ್  ಲೋಕಾರ್ಪಣೆ  ಮಾಡಿ  ನಂತರ ನಡೆದ ಧಾರ್ಮಿಕ ಸಮಾರಂಭದಲ್ಲಿ ಸಾನಿಧ್ಯ  ವಹಿಸಿ ಶುಭ ಸಂದೇಶವನ್ನು ನೀಡಿದ ಅವರು ಒಂದು ಊರಿನ ದೇವಾಲಯವು ಅಲ್ಲಿನ ಜನರ ಧಾರ್ಮಿಕ ಆಚರಣೆ, ದೇವರ ಮೇಲಿನ ನಂಬಿಕೆ ಹಾಗೂ ಊರಿನ ಅಭಿವೃದ್ಧಿಯ ಸಂಕೇತವಾಗಿದೆ, ಮಾನವ ಜಗತ್ತಿನ ಪ್ರತಿಯೊಬ್ಬರು  ಧಾರ್ಮಿಕ ಭಕ್ತಿಯಿಂದ ಶ್ರದ್ಧಾ ಭಾವದಿಂದ ಭಗವಂತನನ್ನು ಪ್ರಾರ್ಥಿಸಿದರೆ ಅನುಗ್ರಹವು  ಲಭಿಸುದರ ಜೊತೆಗೆ  ಕಷ್ಟಕಾರ್ಪಣ್ಯಗಳು ನಿಗ್ರಹವಾಗಿ, ಮಾನಸಿಕ ಹಾಗೂ ದೈಹಿಕವಾಗಿ ಉತ್ತಮ ಆರೋಗ್ಯವನ್ನು ಹೊಂದುವುದರ ಜೊತೆಗೆ ಸಮಾಜವು ಅಭಿವೃದ್ಧಿಯುನ್ನು ಹೊಂದಿ  ಪ್ರತಿಯೊಬ್ಬರ ನೆಮ್ಮದಿಯ ಬದುಕಿಗೆ ಪ್ರೇರಣೆಯಾಗುತ್ತದೆ ಎಂದರು.


 ಶಿವಮೊಗ್ಗ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್ ಮುಖ್ಯ ಅತಿಥಿಯಾಗಿ ಮಾತನಾಡಿ  ಪ್ರಪಂಚದ ಎಲ್ಲಾ ಧರ್ಮಗಳು ಅಹಿಂಸಾ ತತ್ವವನ್ನು ಪಾಲಿಸಿ ಸನ್ಮಾರ್ಗದಲ್ಲಿ ನಡೆದರೆ ಮಾತ್ರ ಭಗವಂತನ ಆಶೀರ್ವಾದ ಪಡೆಯಲು ಸಾಧ್ಯ ಎಂಬುದನ್ನು ಸಾರಿದೆ.  ಹಾಗೆಯೇ ಏಸುಕ್ರಿಸ್ತರು ಸಹ  ಹಗೆತನ, ವೈರತ್ವ,ವನ್ನು ಬಿಟ್ಟು  ಸಮಾಜದಲ್ಲಿ ಶಾಂತಿ ಸಹ ಬಾಳ್ವೆ, ಪ್ರೀತಿ,ವಿಶ್ವಾಸ,ನಂಬಿಕೆ ಯ  ಮೂಲಕ ಜಗತ್ತನ್ನೇ ಗೆಲ್ಲಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಅವರ ಶುಭ ಸಂದೇಶಗಳು ತತ್ವಗಳು ಆದರ್ಶಗಳು ಇಂದಿಗೂ ಸಹ ಪ್ರಸ್ತುತವಾಗಿದೆ ಎಂದರು.


ನವೀಕರಣಗೊಂಡು  ನೂತನವಾಗಿ ಉದ್ಘಾಟನೆಯಾದ ಗುಡ್ ಶೆಫರ್ಡ್ ಚರ್ಚಿನ ಧರ್ಮಗುರು ರೆ. ಫಾ.ಬಿನೋಯ್ ಮಾತನಾಡಿ  ದೇವರ ಆಶೀರ್ವಾದ,ಭಕ್ತಾದಿಗಳ ಸಹಕಾರವಿದ್ದರೆ ಒಳ್ಳೆಯ ದೇವಾಲಯವನ್ನು ನಿರ್ಮಾಣ ಮಾಡಬಹುದು ಎಂಬುವುದಕ್ಕೆ  ಗುಡ್ ಶಫರ್ಡ್ ಚರ್ಚ್ ಅತ್ಯುತ್ತಮ ಉದಾಹರಣೆಯಾಗಿದೆ, ಕೇವಲ ಏಳು ತಿಂಗಳಲ್ಲೇ ಒಳ್ಳೆಯ ಒಂದು ದೇವಾಲಯ ನಿರ್ಮಾಣವಾಗಲು ಗುಡ್ ಶೆಪರ್ಡ್ ಚರ್ಚಿನ ಭಕ್ತಾದಿಗಳು, ಚುನಾಯಿತ ಪ್ರತಿನಿಧಿಗಳು, ಸಾರ್ವಜನಿಕ ಬಂಧುಗಳು, ವಿವಿಧ ಇಲಾಖೆಗಳ  ಅಧಿಕಾರಿಗಳ ಸಹಕಾರ ಮಾರ್ಗದರ್ಶನ ಕಾರಣವಾಗಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ  ಗ್ರಾ.ಪಂ.. ಸದಸ್ಯರಾದ ಡಿ.ಈ.ಮಧುಸೂದನ್,ಪಿ.ರಮೇಶ್,ಚಂದ್ರೇಶ್,ಮದರ್ ಸುಪೀರಿಯರ್ ಮದರ್ ಲಿಸ್ಸಾಮರಿಯಾ,ಭದ್ರಾವತಿ ಧರ್ಮಕ್ಷೇತ್ರದ ವಿಕಾರ್ ಜನರಲ್ ರೆ.ಫಾ.ಥಾಮಸ್ ಚಟ್ಟಲ್‌ಪಳ್ಳಿ, ಸಿದ್ದಾಪುರ ಧರ್ಮ ಕೇಂದ್ರದ ಧರ್ಮ ಗುರು ರೆ. ಫಾ. ಇಂಮಾನ್ಯುಯಲ್.ಫಾಸ್ಟರ್ ಕೌನ್ಸಿಲ್ ನಿರ್ದೇಶಕ ಜೋಮಿ ಮ್ಯಾಥ್ಯೂ. ಇನ್ನಿತರರಿದ್ದರು 

 ಕೋಣಂದೂರಿನ ನವಜ್ಯೋತಿ ಶಿಕ್ಷಣ ಸಂಸ್ಥೆಯ ಸಿಸ್ಟರ್ ಫಾತಿಮಾ ಸ್ವಾಗತಿಸಿ, ಉಪನ್ಯಾಸಕ ಸಬಾಸ್ಟಿನ್ ನಿರೂಪಿಸಿ,ರಿಪ್ಪನ್‌ಪೇಟೆ ಗುಡ್‌ಶಫರ್ಡ್ ಫೂರಾನ ಚರ್ಚ್ ಧರ್ಮಗುರುಗಳಾದ ರೆ.ಫಾ.ಬಿನೋಯಿ ವಂದಿಸಿದರು.

Leave a Reply

Your email address will not be published. Required fields are marked *