POSTMAN NEWS

ನೈಜ ಸುದ್ದಿ ನೇರ ಬಿತ್ತರ..

ಖಾಸಗಿ ಆಸ್ಪತೆ ಉದ್ಯೋಗಿ ಕೊಲೆ ಪ್ರಕರಣ : ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಆರೋಪಿ ಜಬಿ ಕಾಲಿಗೆ ಗುಂಡೇಟು|Shivamogga

ಮಹಜರ್ ಗೆ ಕರೆದೊಯ್ದ ಸಂದರ್ಭ ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ ಆರೋಪಿಯ ಕಾಲಿಗೆ ಗುಂಡು ಹೊಡೆಯಲಾಗಿದೆ. 

ವೆಂಕಟೇಶ ನಗರದಲ್ಲಿ ಯುವಕನ ಕೊಲೆ ಪ್ರಕರಣ ಸಂಬಂಧ ಮಹಜರ್ ಗೆ ಕರೆದೊಯ್ದಾಗ ಘಟನೆ ಸಂಭವಿಸಿದೆ. 

ವೆಂಕಟೇಶ ನಗರದಲ್ಲಿ ಮಂಗಳವಾರ ಬೆಳಗಿನ ಜಾವ ವಿಜಯ್ ಎಂಬಾತನ ಹತ್ಯೆ ಮಾಡಲಾಗಿತ್ತು. ಪ್ರಕರಣ ಸಂಬಂಧ ಮೂವರನ್ನು ಪೊಲೀಸರು ಬಂಧಿಸಿದ್ದರು. ಬಂಧಿತರನ್ನು ಜಬಿ (23), ದರ್ಶನ್ (21) ಮತ್ತು ಕಾರ್ತಿಕ್ ಅಲಿಯಾಸ್ ಕಟ್ಟೆ (21) ಬಂಧಿತರು.

ವಿಜಯ್ ಕೊಲೆಗೆ ಬಳಕೆ ಮಾಡಿದ್ದ ಮಾರಕಾಸ್ತ್ರಗಳನ್ನು ಶಿವಮೊಗ್ಗ ಹರ್ಷ ಫರ್ನ್ ಹೊಟೇಲ್ ಸಮೀಪ ತುಂಗಾ ಚಾನಲ್ ಬಳಿ ಬಚ್ಚಿಟ್ಟಿದ್ದರು. ಇವುಗಳನ್ನು ವಶಕ್ಕೆ ಪಡೆದು, ಸ್ಥಳ ಮಹಜರ್ ಮಾಡಲು ಪ್ರಮುಖ ಆರೋಪಿ ಜಬಿಯನ್ನು ಕರೆದೊಯ್ಯಲಾಗಿತ್ತು. ಹುದುಗಿಸಿ ಇಟ್ಟ ಮಾರಕಾಸ್ತ್ರಗಳನ್ನು ತೆಗೆದ ಜಬಿ, ಜಯನಗರ ಠಾಣೆ ಸಿಬ್ಬಂದಿ ರೋಷನ್ ಅವರ ಮೇಲೆ ಹಲ್ಲೆ ನಡೆಸಿದ್ದಾನೆ.

ಅದೃಷ್ಟವಶಾತ್ ರೋಷನ್ ತಪ್ಪಿಕೊಂಡಿದ್ದಾರೆ. ಆದರೆ ಘಟನೆಯಲ್ಲಿ ಗಾಯಗೊಂಡಿದ್ದಾರೆ. ಈ ವೇಳೆ ಕುಂಸಿ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಹರೀಶ್ ಪಟೇಲ್ ಅವರು ಆತ್ಮರಕ್ಷಣೆಗಾಗಿ ಜಬಿ ಕಾಲಿಗೆ ಗುಂಡು ಹಾರಿಸಿದ್ದಾರೆ.

ಗಾಯಗೊಂಡಿರುವ ಪೊಲೀಸ್ ಸಿಬ್ಬಂದಿ ರೋಷನ್ ಮತ್ತು ಗುಂಡೇಟಿನಿಂದ ಗಾಯಗೊಂಡಿರುವ ಜಬಿಯನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇಬ್ಬರಿಗು ಚಕಿತ್ಸೆ ನೀಡಲಾಗುತ್ತಿದೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.