Headlines

ಸ್ನೇಹಿತರ ನಡುವಿನ ಗಲಾಟೆ ಚೂರಿ ಇರಿತದಲ್ಲಿ ಅಂತ್ಯ : ಗಾಯಾಳು ಆಸ್ಪತ್ರೆಗೆ ದಾಖಲು-ಆರೋಪಿ ಪರಾರಿ|Stabbed

ಹೊಟೇಲ್ ನಲ್ಲಿ ಊಟ ಮಾಡುತಿದ್ದ ಇಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ಮಾತು ಮಾತಲ್ಲೇ ಗಲಾಟೆಯಾಗಿ ಒಬ್ಬನಿಗೆ ಚೂರಿ ಇರಿತವಾಗಿರುವ ಘಟನೆ ನಡೆದಿದೆ.

ಸಾಗರ ನಗರದ ಬಿ.ಎಚ್ ರಸ್ತೆಯ ಮಂಜುಶ್ರೀ ಹೋಟೆಲಿಗೆ ಗ್ರಾಹಕರಾಗಿ ಇಬ್ಬರು ಯುವಕರು ಬಂದಿದ್ದಾರೆ. ಅವರ ನಡುವೆ ಕ್ಷುಲ್ಲಕ ವಿಚಾರಕ್ಕೆ ಗಲಾಟೆಯಾಗಿದೆ.

ಗಲಾಟೆ ತಾರಕಕ್ಕೇರಿ, ಒಬ್ಬ ಮತ್ತೊಬ್ಬನಿಗೆ ಚೂರಿಯಿಂದ ಚುಚ್ಚಿದ್ದಾನೆ. ಇರಿತಕ್ಕೆ ಒಳಗಾದವನನ್ನು ಸಾಗರದ ಉಪ ವಿಭಾಗೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.ಚೂರಿಯಿಂದ ಹಲ್ಲೆ ನಡೆಸಿದ ವ್ಯಕ್ತಿ ಸ್ಥಳದಿಂದ ಪರಾರಿಯಾಗಿದ್ದಾನೆ. 

ಘಟನಾ ಸ್ಥಳಕ್ಕೆ ಪೊಲೀಸರು ಬಂದು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಇರಿತಕ್ಕೆ ಒಳಗಾದವನನ್ನು ಶಕೀಲ್ ಎಂದು ಗುರುತಿಸಲಾಗಿದೆ. ಇಬ್ಬರು ಕೂಡ ಜನ್ನತ್ ಗಲ್ಲಿ ನಿವಾಸಿಗಳು ಎಂಬ ಮಾಹಿತಿಯಿದೆ.

ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಾಗಿದೆ

Leave a Reply

Your email address will not be published. Required fields are marked *