Headlines

ಎಟಿಎಮ್ ನಿಂದ ಹಣ ತೆಗೆಯಲು ಸಹಾಯ ಮಾಡುವ‌‌ ನೆಪದಲ್ಲಿ ಮೋಸ : ಆರೋಪಿಯ ಬಂಧನ

ಎಟಿಎಮ್ ನಿಂದ ಹಣ ತೆಗೆಯಲು ಸಹಾಯ ಮಾಡುವ‌‌ ನೆಪದಲ್ಲಿ ಮೋಸ: ಕಳ್ಳನ ಬಂಧನ

ಎಟಿಎಂನಿಂದ ಹಣ ತೆಗೆಯಲು ಸಹಾಯ ಮಾಡುವ ನೆಪದಲ್ಲಿ ಕಾರ್ಡ್ ಬದಲಿಸಿ, ಹಣ ಡ್ರಾ ಮಾಡುತ್ತಿದ್ದ ಅಂತರ್ ರಾಜ್ಯ ಕಳ್ಳನನ್ನು ಬಂಕಾಪುರ ಠಾಣೆಯ ಪಿಎಸ್‌ಐ ನಿಂಗರಾಜ್ ಕೆ ವೈ ನೇತ್ರತ್ವದ ಸಿಬ್ಬಂದಿಗಳು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತನನ್ನು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಬೆಳಸಿಂದ ಗ್ರಾಮದ ಕಿರಣ್ ಕುಮಾರ್ ಎಂದು ಗುರುತಿಸಲಾಗಿದೆ.

ದಿನಾಂಕ: 06-082025 ರಂದು ಗುಡ್ಡದ ಚನ್ನಾಪೂರ ಗ್ರಾಮದ ಮಲ್ಲೇಶಪ್ಪ ದೊಡ್ಡಮನಿ ಇತನು ಎಟಿಎಮ್‌ಲ್ಲಿ ಹಣ ತೆಗೆದುಕೊಳ್ಳವ ಕಾಲಕ್ಕೆ ಆಪಾದಿತ ಕಾರ್ಡು ತೆಗೆದುಕೊಡುವಂತೆ ನಟನೆ ಮಾಡಿ ಮೋಸದಿಂದ ಎಟಿಎಮ್ ಕಾರ್ಡ ಬದಲಾಯಿಸಿ ಅದರಿಂದ ಬೇರೆ ಎಟಿಎಮ್ ಕೇಂದ್ರದಲ್ಲಿ ಒಟ್ಟು 75000/- ರೂಗಳನ್ನು ತೆಗೆದುಕೊಂಡು ಮೋಸ ಮಾಡಿದ ಬಗ್ಗೆ ಬಂಕಾಪುರ ಪೊಲೀಸ ಠಾಣೆ ಅಪರಾಧ ಸಂಖ್ಯೆ 109/2024 ಕಲಂ 318(4) ಬಿಎನ್‌ಎಸ್ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ತನಿಖೆ ನಡೆಸಿದ ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಆತನಿಂದ 81000 ರೂ ನಗದು ವಶಪಡಿಸಿಕೊಳ್ಳಲಾಗಿದೆ. ವಿಚಾರಣೆ ವೇಳೆ ಆರೋಪಿತನು ಕುಖ್ಯಾತ ಅಂತರ ಜಿಲ್ಲಾ ಮತ್ತು ಅಂತರ ರಾಜ್ಯದಲ್ಲಿ ಮೋಸ, ವಂಚನೆ, ಕಳ್ಳತನ, ಷೇರು ಮಾರುಕಟ್ಟೆಯಲ್ಲಿ ಹಣ ದ್ವಿಗುಣಗೊಳಿಸುತ್ತೇನೆ ಅಂತಾ ಹೊಟೆಲ್ ಮಾಲಿಕರಿಗೆ ಮತ್ತು ಇತರರಿಗೆ ವಂಚಿಸುತ್ತಾ ಹೆಚ್ಚಾಗಿ ಅನಕ್ಷರಸ್ತರು, ಮಹಿಳೆಯರು, ಮಕ್ಕಳು, ಅಮಾಯಕರು, ವಯೋವೃದ್ದರನ್ನು ಗುರಿಯಾಗಿಸಿಕೊಂಡು ಅವರಿಗೆ ಸಹಾಯ ಮಾಡುವ ನೆಪದಲ್ಲಿ ಪಿನ್ ನಂಬರ ತಿಳಿದುಕೊಂಡು ಎಟಿಎಮ್ ಕಾರ್ಡ ಬದಲಾಯಿಸಿ ಮೋಸ ಮಾಡಿ ಹಣ ತೆಗೆಯುತ್ತಾ ವಿಲಾಸಿ ಜೀವನ ನಡೆಸುತ್ತಾ ಬಂದಿದ್ದು ಈ ಬಗ್ಗೆ 1 ಚಿಕ್ಕಬಳ್ಳಾಪೂರ ಪೊಲೀಸ್ ಠಾಣೆ, 2]ಹಾಸನ ದುಡ್ಡಾ ಪೊಲೀಸ್ ಠಾಣೆ 3] ಕೊಡಗು ಸಿ ಇ ಎನ್ ಪೊಲೀಸ್ ಠಾಣೆ, 4]ಚಾಮರಾಜ ನಗರ ಪೊಲೀಸ್ ಠಾಣೆ, 5] ಕುಮಟಾ ಪೊಲೀಸ್ ಠಾಣೆ, 6] ಉಡುಪಿ ಪೊಲೀಸ್ ಠಾಣೆ, 7] ಶಿರಾಳಕೊಪ್ಪ ಪೊಲೀಸ್ ಠಾಣೆ, 8] ಡಾವಣಗೇರಿ ಶಹರ ಪೊಲೀಸ್ ಠಾಣೆ, 9]ಮುಂಡಗೋಡ ಪೊಲೀಸ್ ಠಾಣೆ, 10] ಹಳಿಯಾಳ ಪೊಲೀಸ್‌ ಠಾಣೆಗಳಲ್ಲಿ ಹೀಗೆ ಹತ್ತಕ್ಕೂ ಹೆಚ್ಚು ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದು  ಬಹಿರಂಗಗೊಂಡಿದೆ.

ಆರೋಪಿತನನ್ನು ಪತ್ತೆ ಮಾಡಿದ ಪಿಎಸ್‌ಐ ನಿಂಗರಾಜ ಕೆ ವೈ ಪಿಎಸ್‌ಐ- 2 ಎಸ್ ಎಮ್ ವನಹಳ್ಳಿ ಪತ್ತೆ ಕಾರ್ಯದಲ್ಲಿ ತೊಡಗಿದ ASI ಕೆ ರಜನಿ , ಹೆಡ್ ಕಾನಸ್ಟೆಬಲ್ ಎ ಕೆ ನದಾಪ, ಕಾನಸ್ಟೆಬಲ್‌ಗಳಾದ ಗೊವಿಂದ ಲಮಾಣಿ, ವೆಂಕಟೇಶ ಲಮಾಣಿ , ಬೀರಪ್ಪ ಕಳ್ಳಿಮನಿ, ನಿಂಗಪ್ಪ ಪೂಜಾರ ತಾಂತ್ರಿಕ ಸಿಬ್ಬಂದಿಗಳಾದ ಸತೀಶ ಮಾರಕಟ್ಟೆ, ಮಾರುತಿ ಹಾಲಬಾವಿ ರವರಿಗೆ ಮಾನ್ಯ ಪೊಲೀಸ ಅಧೀಕ್ಷಕರು ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.

Leave a Reply

Your email address will not be published. Required fields are marked *