RIPPONPETE | ಬಟ್ಟೆಮಲ್ಲಪ್ಪದಿಂದ ನಾಪತ್ತೆಯಾಗಿದ್ದ ಇಬ್ಬರು ಬಾಲಕರು ಪತ್ತೆ
ರಿಪ್ಪನ್ಪೇಟೆ : ಬಟ್ಟೆಮಲ್ಲಪ್ಪ ಗ್ರಾಮದಿಂದ ನಾಪತ್ತೆಯಾಗಿದ್ದ ಇಬ್ಬರು ಬಾಲಕರನ್ನು ಶಿವಮೊಗ್ಗದಲ್ಲಿ ರಿಪ್ಪನ್ಪೇಟೆ ಪೊಲೀಸರು ಪತ್ತೆ ಹಚ್ಚಿ, ಪಟ್ಟಣಕ್ಕೆ ವಾಪಾಸು ಕರೆತಂದಿದ್ದು, ಮರಳಿ ಪೋಷಕರಿಗೆ ಒಪ್ಪಿಸಿದ್ದಾರೆ.
ಬಟ್ಟೆಮಲ್ಲಪ್ಪ ಗ್ರಾಮದ ನಿವಾಸಿಗಳಾದ ಸಾತ್ವಿಕ್ (13) ನಿರಂಜನ್ (13)ಎಂಬ ಇಬ್ಬರು ಬಾಲಕರು ಬಟ್ಟೆಮಲ್ಲಪ್ಪದಿಂದ ಶಾಲೆಗೆ ತೆರಳುತ್ತೇವೆ ಎಂದು ಗುರುವಾರ ಬೆಳಿಗ್ಗೆ ನಾಪತ್ತೆಯಾಗಿದ್ದರು.
ಶಾಲಾ ಸಮವಸ್ತ್ರ ದೊಂದಿಗೆ ನಾಪತ್ತೆಯಾಗಿದ್ದ ಇಬ್ಬರು ಬಾಲಕರ ಬಗ್ಗೆ ಪೋಷಕಕರಿಗೆ ತಿಳಿಯುತಿದ್ದಂತೆ ರಿಪ್ಪನ್ಪೇಟೆ ಪಿಎಸ್ಐ ಪ್ರವೀಣ್ ಎಸ್ ಪಿ ರವರ ಗಮನಕ್ಕೆ ತಂದಿದ್ದಾರೆ.ಕೂಡಲೇ ಕಾರ್ಯಪ್ರವೃತ್ತರಾದ ಪಿಎಸ್ಐ ಬಾಲಕರ ಮಿಸ್ಸಿಂಗ್ ಬಗ್ಗೆ ಎಲ್ಲಾ ಕಡೆ ಮಾಹಿತಿ ಹಂಚಿಕೊಂಡಿದ್ದಾರೆ.
ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತಿದ್ದಂತೆ ಹಲವು ಕಡೆಗಳಿಂದ ಬಾಲಕರ ಬಗ್ಗೆ ಪೊಲೀಸರಿಗೆ ಮಾಹಿತಿ ದೊರಕಿದೆ.ಗುರುವಾರ ತಡ ರಾತ್ರಿ ಶಿವಮೊಗ್ಗದಲ್ಲಿ ಸ್ಥಳೀಯ ಪೊಲೀಸರ ಸಹಕಾರದಿಂದ ಬಾಲಕರನ್ನು ಪತ್ತೆಹಚ್ಚುವಲ್ಲಿ ಪಿಎಸ್ಐ ಪ್ರವೀಣ್ ನೇತ್ರತ್ವದ ಸಿಬ್ಬಂದಿಗಳ ತಂಡ ಯಶಸ್ವಿಯಾಗಿದೆ.
ಮೂಲಗಳ ಪ್ರಕಾರ ಪೋಷಕರೊಂದಿಗಿನ ವೈಮನಸ್ಸಿನಿಂದ ಇಬ್ಬರು ಬಾಲಕರು ಮನೆ ಬಿಟ್ಟು ತೆರಳಲು ಚಿಂತಿಸಿದ್ದು ,ಮನೆಯಿಂದ ಕೊಂಡು ಹೋಗಿದ್ದ ಹಣದಲ್ಲಿ ಶಿವಮೊಗ್ಗದಲ್ಲಿ ಹೊಸ ಬಟ್ಟೆಗಳನ್ನು ಖರೀದಿಸಿದ್ದರು ಎನ್ನಲಾಗುತ್ತಿದೆ.
 
                         
                         
                         
                         
                         
                         
                         
                         
                         
                        