ಜಮೀನು ವ್ಯಾಜ್ಯಕ್ಕೆ ಯುವಕನನ್ನು ಕುಡುಗೋಲಿನಿಂದ ಕಡಿದು ಕೊಲೆ | ಆರೋಪಿಗಳ ಮನೆ ಮೇಲೆ ಗ್ರಾಮಸ್ಥರಿಂದ ಕಲ್ಲು ತೂರಾಟ |Crime News
ಜಮೀನು ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಓರ್ವ ಯುವಕನನ್ನು ಕೊಲೆ ಮಾಡಿರುವ ಘಟನೆ ಶಿವಮೊಗ್ಗದ ದುಮ್ಮಳ್ಳಿಯಲ್ಲಿ ನಡೆದಿದೆ.
ದುಮ್ಮಳ್ಳಿಯ ನಿವಾಸಿ ನಿವಾಸಿ ಸತೀಶ್ ನಾಯ್ಕ(28) ಕೊಲೆಯಾದ ಯುವಕನಾಗಿದ್ದಾನೆ.
ನಡೆದಿದ್ದೇನು..??
ಶೇಷನಾಯ್ಕ ಹಾಗೂ ಮಂಜನಾಯ್ಕ ಎಂಬವರು ಅಕ್ಕಪಕ್ಕದಲ್ಲಿ ಜಮೀನು ಹೊಂದಿದವರು.ಇಬ್ಬರ ನಡುವೆ ಹಲವಾರು ವರ್ಷಗಳಿಂದ ಜಮೀನಿನ ವಿಚಾರದಲ್ಲಿ ವ್ಯಾಜ್ಯವಿತ್ತು. ಈ ವಿಚಾರ ಕೋರ್ಟ್ ಮೆಟ್ಟಿಲೇರಿದ್ದು, ವಿಚಾರಣೆ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿತ್ತು. ಕೋರ್ಟ್‌ನಲ್ಲಿ ಜಮೀನು ಶೇಷನಾಯ್ಕನ ಪರವಾಗಿ ಆಗುವ ಸಾಧ್ಯತೆ ಇತ್ತು ಎನ್ನಲಾಗುತ್ತಿದೆ.
ಈ ಬೆಳವಣಿಗೆಗಳಿಂದ ಅಸಮಾಧಾನಗೊಂಡಿದ್ದ ಮಂಜಾನಾಯ್ಕ್ ರಚರ ಪುತ್ರ ಅಖಿಲೇಶ್ ನಾಯ್ಕ ಇವತ್ತು ಜಮೀನಿನಲ್ಲಿ ಸತೀಶ್ ನಾಯ್ಕ್ ಕೆಲಸ ಮಾಡಲು ಬಂದಿದ್ದ ವೇಳೆ ಏಕಾಏಕಿ ದಾಳಿ ನಡೆಸಿ ಕನ್ಲಿಯಿಂದ ಕೊಚ್ಚಿ ಸತೀಶ್ ನಾಯ್ಕ್ ನನ್ನು ಕೊಲೆ ಮಾಡಿ ಅಲ್ಲಿಂದ ಪರಾರಿಯಾಗಿದ್ದಾನೆ.
ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಸ್‌ಪಿ ಮಿಥುನ್ ಕುಮಾರ್ ಪ್ರಕರಣ ಸಂಬಂಧ ಆರೋಪಿ ಅಖಿಲೇಶ್ ನಾಯ್ಕನನ್ನು ಬಂಧಿಸಲಾಗಿದೆ. ಸತೀಶ್ ನಾಯ್ಕ ತನ್ನ ಜಮೀನಿನಲ್ಲಿ ಕೆಲಸ ಮಾಡುವಾಗ ಜಮೀನು ವಿಚಾರಕ್ಕೆ ಗಲಾಟೆ ತೆಗೆದು ಅಖಿಲೇಶ್ ಹಾಗೂ ಆತನ ಕಡೆಯವರು ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ ಎಂದಿದ್ದಾರೆ.
ಆರೋಪಿಗಳ ಮನೆ ಮೇಲೆ ಕಲ್ಲು ತೂರಾಟ :
ಜಮೀನು ವಿಚಾರದಲ್ಲಿ ಸತೀಶ್ ಎಂಬ ಯುವಕನನ್ನ ಬರ್ಬರ ಹತ್ಯೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ಗ್ರಾಮಸ್ಥರು ಆರೋಪಿ ಮಂಜನಾಯ್ಕ್ ಮನೆಯ ಮೇಲೆ ಕಲ್ಲು ತೂರಿದ್ದಾರೆ.
ನ್ಯಾಯಾಲದಲ್ಲಿ ಸತೀಶ್ ಪರ ತೀರ್ಪು ಬಂದಿದ್ದರೂ ವ್ಯಾಜ್ಯದ ಎದುರಾಳಿಯಾದ ಮಂಜನಾಯ್ಕ ಮತ್ತು ಆತನ ಪುತ್ರ ಗ್ರಾಮದಲ್ಲಿ ಒಳ್ಳೆ ಹೆಸರು ಪಡೆದಿದ್ದ ಸತೀಶ್ ನನ್ನ ಕೊಲೆ ಮಾಡಿದ್ದಕ್ಕೆ ಅವರ ಮನೆಯ ಮೇಲೆ ರೊಚ್ಚಿಗೆದ್ದ ಗ್ರಾಮಸ್ಥರು ಕಲ್ಲು ತೂರಿದ್ದಾರೆ. ಪೊಲೀಸ್ ಸಿಬ್ಬಂದಿಗಳಿಗೆ ಕಲ್ಲು ಬಿದ್ದು ಗಾಯಗಳಾಗಿದೆ.
ಮನೆಯಲ್ಲಿದ್ದ ಆರೋಪಿಯ ಕುಟುಂಬಸ್ಥರರನ್ನ ಪೊಲೀಸರು ರಕ್ಷಣೆಯಲ್ಲಿ ಬೇರೇಡೆಗೆ ವರ್ಗಾಯಿಸಲಾಗಿದೆ. ಪರಿಸ್ಥಿತಿ ಬಿಗುವಿನಿಂದ ಕೂಡಿದೆ ಎನ್ನಲಾಗುತ್ತಿದೆ.