Headlines

ದಾನದಲ್ಲಿ ಶ್ರೇಷ್ಟ ದಾನ ರಕ್ತದಾನ – ಇನ್ನೊಬ್ಬರ ಜೀವ ರಕ್ಷಣೆಗೆ ರಕ್ತದಾನ ಮಾಡಿ – ಡಾ.ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಮಹಾಸ್ವಾಮಿಜಿ

ದಾನದಲ್ಲಿ ಶ್ರೇಷ್ಟ ದಾನ ರಕ್ತದಾನ – ಇನ್ನೊಬ್ಬರ ಜೀವ ರಕ್ಷಣೆಗೆ ರಕ್ತದಾನ ಮಾಡಿ – ಡಾ.ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಮಹಾಸ್ವಾಮಿಜಿ


ರಿಪ್ಪನ್‌ಪೇಟೆ;-ದಾನದಲ್ಲಿ ಶ್ರೇಷ್ಟವಾದುದ್ದು ರಕ್ತದಾನವಾಗಿದ್ದು ರಕ್ತದಾನದಿಂದ ಇನ್ನೊಬ್ಬರ ಜೀವವನ್ನು ಉಳಿಸಬಹುದು ಎಂದು ಅನಂದಪುರಂ ಮುರುಘಾರಾಜೇಂದ್ರಮಠದ ಡಾ.ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಮಹಾಸ್ವಾಮಿಜಿ ಹೇಳಿದರು.


ಸಮೀಪದ ಸದಾನಂದ ಶಿವಯೋಗಾಶ್ರಮದ ಮೂಲೆಗದ್ದೆಮಠದಲ್ಲಿ ರೋಟರಿ ಕ್ಲಬ್ .ಶ್ರೀಮ.ನಿ.ಪ್ರ.ಸಿದ್ದಲಿಂಗ ಮಹಾಶಿವಯೋಗಿಗಳವರ ಪುಣ್ಯಸ್ಮರಣಿಯ ಅಂಗವಾಗಿ ಆಯೋಜಿಸಲಾದ “ರಕ್ತದಾನ ಶಿಬಿರ ಮತ್ತು ಅಯುರ್ವೇದ” ತಪಾಸಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ದಿವ್ಯಸಾನಿದ್ಯ ಆಶೀರ್ವಚನ ನೀಡಿ ರಕ್ತದಾನ ಆರೋಗ್ಯಕ್ಕೆ ಪೂರಕವೇ ಹೊರತು ಮಾರಕವಲ್ಲ.ಯುವಕರು ಸ್ವಯಂ ಪ್ರೇರಣಿಯಿಂದ ರಕ್ತದಾನ ಮಾಡುವುದರಿಂದ ಆಮೂಲ್ಯವಾದ ಜೀವಗಳು ಉಳಿಯುತ್ತದೆ.ದುಶ್ಚಟಗಳನ್ನು ಮಾಡುವುದರ ಬದಲು ರಕ್ತದಾನ ಮಾಡುವುದು ಉತ್ತಮ ಎಂದರು.

ಇತ್ತೀಚಿನ ದಿನಗಳಲ್ಲಿ ರಕ್ತದ ಆವಶ್ಯಕತೆ ಹೆಚ್ಚಾಗಿದ್ದು ಮಾನವನ ಅಂಗಾಂಗಗಳ ದಾನವನ್ನು ಸಹ ದಾನ ಮಾಡುತ್ತಿದ್ದು ಕಣ್ಣು ಮತ್ತು ರಕ್ತದಾನ ,ಕಿಡ್ನಿ ದಾನದಂತಹ ದಾನ ಮಾಡುವುದರಿಂದ ಇನ್ನೊಬ್ಬರಿಗೆ ಸಹಕಾರಿಯಾಗುವುದೆಂದು ಹೇಳಿ ಅರೋಗ್ಯವಂತ ಮನುಷ್ಯ ಮೂರು ತಿಂಗಳಿಗೊಮ್ಮೆ ಮಹಿಳೆಯರು ನಾಲ್ಕು ತಿಂಗಳಿಗೊಂದು ಭಾರಿ ರಕ್ತದಾನ ಮಾಡಬಹುದೆಂದು ವೈದ್ಯರು ಹೇಳುತ್ತಿದ್ದು ಇದರಿಂದ ಹೃದಯ ಕಾಯಿಲೆ ಬಾರದು ಎಂದರು.


ಸದಾನಂದ ಶಿವಯೋಗಾಶ್ರಮ ಮೂಲೆಗದ್ದೆ ಮಠದ ಮ.ನಿ.ಪ್ರ.ಅಭಿನವ ಚನ್ನಬಸವ ಮಹಾಸ್ವಾಮಿಜಿ ಅಧ್ಯಕ್ಷತೆ ವಹಿಸಿದ್ದರು.

ಈ ಕಾರ್ಯಕ್ರಮದಲ್ಲಿ ಗುತ್ತಲಕಲ್ಮಠದ ಮ.ನಿ.ಪ್ರ. ಪ್ರಭುಮಹಾಸ್ವಾಮಿಜಿ , ಜಡೆ ಮಠದ ಮ.ನಿ.ಪ್ರ.ಸಿದ್ದ ವೃಷಬೇಂದ್ರ ಮಹಾಸ್ವಾಮಿಜಿ, ಸಾಗರ ತಾಲ್ಲೂಕ್ ಪಂಚಾಯ್ತಿ ಮಾಜಿ ಅಧ್ಯಕ್ಷ ಹಕ್ರೆ ಮಲ್ಲಿಕಾರ್ಜುನ, ಹೊಸನಗರ ತಾಲ್ಲೂಕ್ ಪಂಚಾಯ್ತಿ ಮಾಜಿ ಸದಸ್ಯ ಬಿ.ಯುವರಾಜ್,ಚಂದ್ರಮೌಳಿಗೌಡರು,ಜಯಶೀಲಪ್ಪಗೌಡರು,ಅಬ್ಬಗೋಡು ಹಾಲಪ್ಪಗೌಡರು,ಕಲ್ಯಾಣಪ್ಪಗೌಡರು ಹಾಗೂ ಇನ್ನಿತರರಿದ್ದರು.

Leave a Reply

Your email address will not be published. Required fields are marked *