ಹೊಸನಗರ :ವಿಜಯ ಕರ್ನಾಟಕ ಸಂಸ್ಥೆ ಪ್ರಸ್ತುತ ಪಡಿಸುತ್ತಿರುವ VK ಜೋಡಿ ತಾರೆ ಸ್ಫರ್ಧೆಯ ಬೆಂಗಳೂರಿನಲ್ಲಿ ನಡೆದ ವಿಜಯ ಕರ್ನಾಟಕ ಜೋಡಿ ತಾರೆ 2022 ಸೀಸನ್ 2 ರ ಗ್ರ್ಯಾಂಡ್ ಫಿನಾಲೆಯಲ್ಲಿ ಹೊಸನಗರದ ಶಿಕ್ಷಕರಾದ ವನಜಾಕ್ಷಿ ದೇವೇಂದ್ರಪ್ಪ ದಂಪತಿಗಳಿಗೆ ರನ್ನರ್ ಅಪ್ ಪ್ರಶಸ್ತಿ ಒಲಿದಿದೆ.
ಪ್ರೇಮಿಗಳ ದಿನದ ಅಂಗವಾಗಿ ವಿಜಯ ಕರ್ನಾಟಕ ಸಂಸ್ಥೆಯು ಕರ್ನಾಟಕದ ಬೆಸ್ಟ್ ಜೋಡಿಗಳನ್ನು ಗುರುತಿಸಲು ಈ ಸ್ಪರ್ಧೆ ಹಮ್ಮಿಕೊಂಡಿದ್ದು, ರಾಜ್ಯದ ಹಲವು ಭಾಗಗಳಿಂದ ಹಲವಾರು ಸ್ಪರ್ಧಿಗಳು ಭಾಗವಹಿಸುತ್ತಾರೆ.
ಬೆಂಗಳೂರಿನಲ್ಲಿ ಪೆ.27 ರಂದು ನಡೆದ ವಿಜಯ ಕರ್ನಾಟಕ ಜೋಡಿ ತಾರೆ 2022 ಸೀಸನ್ 2 ರ ಗ್ರ್ಯಾಂಡ್ ಫಿನಾಲೆಯಲ್ಲಿ ಹೊಸನಗರ ತಾಲ್ಲೂಕಿನ ವೃತ್ತಿಯಲ್ಲಿ ಶಿಕ್ಷಕರಾದ ಹಾಗೂ ಜೆಸಿಐ ನ ಕ್ರಿಯಾಶೀಲ, ಸಕ್ರೀಯ ಸದಸ್ಯರಾದ ಶ್ರೀಮತಿ ವನಜಾಕ್ಷಿ ದೇವೇಂದ್ರಪ್ಪ ದಂಪತಿಗಳಿಗೆ “ರನ್ನರ್ ಅಪ್” ಪ್ರಶಸ್ತಿ ದೊರಕಿದೆ.
ಇವರಿಗೆ ಜೆಸಿಐ ಹೊಸನಗರ ಕೊಡಚಾದ್ರಿ ಅಧ್ಯಕ್ಷೆ ಸೀಮಾ ಕಿರಣ್ ತೆಂಡ್ಯೂಲ್ಕರ್, ಸರ್ವ ಸದಸ್ಯರು ಹಾಗೂ ಸ್ನೇಹಿತರು ಶುಭ ಹಾರೈಸಿದ್ದಾರೆ