Headlines

ಸಿಡಿಲು ಬಡಿದು ಎತ್ತು ಸಾವು | lighting

ಸಿಡಿಲು ಬಡಿದು ಎತ್ತು ಸಾವು | lighting


ಸೊರಬ ಪಟ್ಟಣದ ಸೇರಿ ತಾಲೂಕಿನಾದ್ಯಂತ ಬಿರುಸಿನ ಗಾಳಿ, ಮಿಂಚು-ಗುಡುಗು ಸಹಿತ ಉತ್ತಮ ಮಳೆಯಾಗಿದ್ದು, ಅರೇಕೊಪ್ಪ ಗ್ರಾಮದಲ್ಲಿ ಸಿಡಿಲು ಬಡಿದು ಎತ್ತು ಮೃತಪಟ್ಟ ಘಟನೆ ನಡೆದಿದೆ.

ಗ್ರಾಮದ ಮಂಜಪ್ಪ ಅವರು ಅಮೃತ್‍ ಮಹಲ್ ತಳಿಯ ಒಂದು ಜೊತೆ ಎತ್ತಗಳನ್ನು ಸಾಕಿದ್ದರು.ಅವರ ಜಮೀನಿನಲ್ಲಿ ಜಾನುವಾರಗಳನ್ನು ಮೇಯಲು ಬಿಟ್ಟ ಸಂದರ್ಭದಲ್ಲಿ ಸಂಜೆ ವೇಳೆ ಅಮೃತ್ ಮಹಲ್ ತಳಿಗೆ ಸೇರಿದ ಒಂದು ಎತ್ತಿಗೆ ಸಿಡಿಲು ಬಡಿದಿದೆ. ಪರಿಣಾಮ ಎತ್ತು ಸ್ಥಳದಲ್ಲೆ ಸಾವನ್ನಪ್ಪಿದೆ. 


ಮೃತ ಎತ್ತಿನ ಸಾವಿನಿಂದ ರೈತನಿಗೆ ಸುಮಾರು 55 ಸಾವಿರಕ್ಕೂ ಹೆಚ್ಚು ನಷ್ಟವಾಗಿದೆ ಎಂದು ಹೇಳಲಾಗಿದೆ.

ಸ್ಥಳಕ್ಕೆ ಪೊಲೀಸ್ ಸಿಬ್ಬಂದಿ, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಪಶು ಆಸ್ಪತ್ರೆಯ ವೈದ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *