ತೀರ್ಥಹಳ್ಳಿ: ತಾಲೂಕಿನ ಸರ್ಕಾರಿ ಜಯಚಾಮರಾಜೇಂದ್ರ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದ ಕೊರತೆಯಿತ್ತು. ಅದರಲ್ಲಿ ಮುಖ್ಯವಾಗಿ ಐಸಿಯು ಸಮಸ್ಯೆ ಮತ್ತು ಆಸ್ಪತ್ರೆಯ ಐಸಿಯು ತೀವ್ರ ನಿಗಾ ಘಟಕ ಮತ್ತು ಶಸ್ತ್ರಚಿಕಿತ್ಸಾ ಕೊಠಡಿಯು ಮಳೆಯಿಂದ ಸೋರುತ್ತಿದ್ದು ಈ ಕೊಠಡಿ ಸೋರದಂತೆ ಮೇಲ್ಛಾವಣಿ ಶೀಟ್‌ಗಳನ್ನು ಅಳವಡಿಸಿಲಾಗಿದ್ದು ಅದನ್ನು ಮಂಗಳವಾರ ಗೃಹಸಚಿವ ಆರಗ ಜ್ಞಾನೇಂದ್ರ ಉದ್ಘಾಟನೆ ಮಾಡಿದರು.
ನಂತರ ಮಾತನಾಡಿದ ಸಚಿವರು ನನಗೆ ಇದೊಂದು ಸಂತೋಷದ ವಿಚಾರ. ಸಾರ್ವಜನಿಕ ಆಸ್ಪತ್ರೆಗೆ ಹಣ ಬಿಡುಗಡೆ ಮಾಡಿಸುವ ಮತ್ತು ಸಾರ್ವಜನಿಕರ ಸಮಸ್ಯೆ ಪರಿಹರಿಸುವ ಪ್ರಯತ್ನ ನೆಡೆಯುತ್ತಿದೆ. ತೀರ್ಥಹಳ್ಳಿಯಲ್ಲಿ ಜನರಿಗೆ ಸಮಸ್ಯೆ ಆಗುತ್ತಿರುವುದು ತಾಲೂಕು ಕಛೇರಿ ಮತ್ತು ಆಸ್ಪತ್ರೆಯಲ್ಲಿ ಎಂಬುದಿದೆ. ಹಾಗಾಗಿ ಆಸ್ಪತ್ರೆಗೆ ಮತ್ತು ತಾಲೂಕು ಕಛೇರಿಗೆ ಏನೆಲ್ಲಾ ಬೇಕೋ ಅದನ್ನೆಲ್ಲ ಮಾಡಿಸುವ ಪ್ರಯತ್ನ ಮಾಡುತ್ತಿದ್ದೇನೆ. ಮೊದಲಿಗೆ ಆಸ್ಪತ್ರೆ ಸ್ವಚ್ಛವಾಗಿರಬೇಕು ಹಾಗಾಗಿ ಈ ಒಂದು ಸುಸಜ್ಜಿತವಾದ ಕಟ್ಟಡವನ್ನು ಕಟ್ಟಿದ್ದಾರೆ. ಅಷ್ಟೇ ಅಲ್ಲದೆ 1.50 ಕೋಟಿ ವೆಚ್ಚದಲ್ಲಿ 25 ಬೆಡ್ ನ ಐಸಿಯು ತೀವ್ರ ನಿಗಾ ಘಟಕ ಮಾಡಿ ಅದನ್ನು ಕೂಡ ಉದ್ಘಾಟನೆ ಮಾಡಲಾಗಿದೆ. ಬಡ ಜನರಿಗೆ ಅನುಕೂಲವಾಗುವಂತೆ ಏನೆಲ್ಲಾ ಆಗಬೇಕೋ ಅದನ್ನೆಲ್ಲ ನಾನು ಈ ಸ್ಥಾನದಲ್ಲಿ ಇದ್ದಾಗ ಮಾಡಿದ್ದೇನೆ. ಆಸ್ಪತ್ರೆಗೆ ಇನ್ನಷ್ಟು ಅನುಕೂಲ ಬೇಕಾಗಿದೆ ಇನ್ನು ಏನೆಲ್ಲಾ ವ್ಯವಸ್ಥೆ ಬೇಕೋ ಅದನ್ನು ಮಾಡಿಸುವ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಕೋವಿಡ್ ಸಂದರ್ಭದಲ್ಲಿ ಹಗಲಿರುಳು ನಿರಂತರ ಶ್ರಮ ಹಾಕಿದ ವೈದ್ಯಧಿಕಾರಿಗಳ ತಂಡ, ನರ್ಸ್ ಗಳು, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರಿಗೆ ಅಭಿನಂದನೆಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಪ ಪಂ ಅಧ್ಯಕ್ಷೆ ಶಬನಂ, ಜಯಪ್ರಕಾಶ್ ಶೆಟ್ಟಿ, ಡಾ ನಾರಾಯಣ ಸ್ವಾಮಿ, ಡಾ ಗಣೇಶ ಭಟ್, ಬಾಳೆಬೈಲು ರಾಘವೇಂದ್ರ, ನಾಗರಾಜ್ ಶೆಟ್ಟಿ, ಡಾ ನಟರಾಜ್, ಬಾಳೆಬೈಲು ಸಂತೋಷ್ ಶೆಟ್ಟಿ, ಸಂತೋಷ್ ದೇವಾಡಿಗ, ಪ ಪಂ ಸದಸ್ಯರೆಲ್ಲರೂ ಭಾಗಿಯಾಗಿದ್ದರು.
ವರದಿ : ಅಕ್ಷಯ್ ಕುಮಾರ್