ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಗೌಡಕೊಪ್ಪ ಗ್ರಾಮದ ರೈತನೊಬ್ಬ ಸಾಲಭಾದೆಗೆ ತತ್ತರಿಸಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಹೊಸನಗರ ತಾಲೂಕಿನ ಕೆಂಚನಾಲ ಗ್ರಾಪಂ ವ್ಯಾಪ್ತಿಯ ಗೌಡಕೊಪ್ಪ ಗ್ರಾಮದ ರೈತ ಮಂಜಪ್ಪ(55) ಎಂಬುವವರು ಸಾಲಭಾದೆಗೆ ಹೆದರಿ ತಮ್ಮ ಸ್ವಂತ ಜಮೀನಿನಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಗೌಡಕೊಪ್ಪ ಗ್ರಾಮದ ರೈತ ಮಂಜಪ್ಪ ರವರಿಗೆ ಮನೆ ಹಿಂಬದಿಯಲ್ಲಿಯೇ ಒಂದೂವರೆ ಎಕರೆ ಜಮೀನು ಇದ್ದು ಅದರಲ್ಲಿಯೇ ಸಾಗುವಳಿ ಮಾಡಿಕೊಂಡು ಬರುತ್ತಿದ್ದು ಸದರಿ ಜಮೀನಿನ ಆಧಾರದ ಮೇಲೆ ಖಾಸಗಿ,ಸಹಕಾರಿ ಮತ್ತು ಸರ್ಕಾರಿ ಬ್ಯಾಂಕುಗಳಲ್ಲಿ ಸಾಲ ಪಡೆದಿದ್ದರು.
ಇತ್ತೀಚೆಗೆ ಸುರಿದ ಅಕಾಲಿಕ ಮಳೆಯಿಂದ ಬೆಳೆ ನಷ್ಟ ಉಂಟಾಗಿ ತತ್ತರಿಸಿ ಹೋಗಿದ್ದ ರೈತ ಮಂಜಪ್ಪ ಸಾಲದ ತೀರುವಳಿ ನೋಟೀಸ್ ಬಂದ ಹಿನ್ನಲೆಯಲ್ಲಿ ನೊಂದು ಭಾನುವಾರ ಬೆಳಗ್ಗೆ ತಮ್ಮ ಹೊಲದಲ್ಲಿ ವಿಷ ಸೇವಿಸಿದ್ದರು,ತಕ್ಷಣ ಕುಟುಂಬಸ್ಥರು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲು ಮಾಡಲಾಗಿತ್ತು.ಆದರೆ ಚಿಕಿತ್ಸೆ ಫಲಕಾರಿಯಾಗದ ಹಿನ್ನಲೆಯಲ್ಲಿ ಸೋಮವಾರ ರಾತ್ರಿ ಮೃತಪಟ್ಟಿದ್ದಾರೆ.
ಮೃತ ಮಂಜಪ್ಪ ರವರ ಸಾವಿಗೆ ಸಾಲಭಾದೆ ಕಾರಣವೆಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇