ಇಬ್ಬರು ಒಂದೇ ದಿನ ಹುಟ್ಟಿ ಒಟ್ಟಿಗೆ ಮಸಣ ಸೇರಿದ ದಂಪತಿಗಳ ದುರಂತ ಕಥೆ | uttharakhand
ಉತ್ತರಾಖಂಡದ ಎತ್ತರದ ಸ್ಥಳ ಮೈಯಾಳಿಗೆ ಚಾರಣಕ್ಕೆ ತೆರಳಿದ್ದ ಕರ್ನಾಟಕದ 19 ಜನರ ಸದಸ್ಯರ ಪೈಕಿ 9ಮಂದಿ ಹವಾಮಾನ ವೈಪರೀತ್ಯದಿಂದಾಗಿ ಮೃತಪಟ್ಟಿದ್ದರು. ಮೃತದೇಹಗಳನ್ನ ಉತ್ತರಾಖಂಡದಿಂದ ಏರ್ಲಿಫ್ಟ್ ಮಾಡಲಾಗಿದ್ದು, ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕುಟುಂದವರಿಗೆ ಹಸ್ತಾಂತರ ಮಾಡಲಾಗಿದೆ.
ಮೃತಪಟ್ಟವರ ಪೈಕಿ ಹುಬ್ಬಳ್ಳಿ ಮೂಲದ ದಂಪತಿ ಕೂಡ ಇದ್ದು, ಇವರ ಸಾವು ಕುಟುಂಬಸ್ಥರು ಹಾಗೂ ಆಪ್ತರನ್ನು ದುಃಖದ ಮಡುವಿಗೆ ತಳ್ಳಿದೆ.
ಹುಬ್ಬಳ್ಳಿಯ ಹುಬ್ಬಳ್ಳಿಯ ವಿನಾಯಕ ಮುಂಗರವಾಡಿ ಹಾಗೂ ಸುಜಾತಾ ಮುಂಗರವಾಡಿ ಮೃತ ದುರ್ದೈವಿಗಳು. ವಿಶೇಷವೆಂದರೆ, ಇವರಿಬ್ಬರ ಹುಟ್ಟಿದ ದಿನಾಂಕವೂ ಒಂದೇ ಆಗಿದ್ದು, ವಿನಾಯಕ ಮುಂಗರವಾಡಿ (1969-10-03) ಹಾಗೂ ಸುಜಾತಾ ಮುಂಗರವಾಡಿ (1972-10-03) ಇಬ್ಬರೂ ಒಂದೇ ದಿನ ಮೃತಪಟ್ಟಿದ್ದು ಕಾಕತಾಳೀಯವಾಗಿದೆ.
ಸುಜಾತ ಮತ್ತು ವಿನಾಯಕ ಮುಂಗರವಾಡಿ ಸಾವನ್ನಪ್ಪಿದ ದಂಪತಿಗಳಾಗಿದ್ದು, ಇಬ್ಬರು ಹುಬ್ಬಳ್ಳಿ ಬಿವಿಬಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ಮಾಡಿದ್ದರು. ಸದ್ಯ ಬೆಂಗಳೂರಿನಲ್ಲಿ ವಾಸಿಸುತ್ತಿದ್ದರು. ಮೃತ ದಂಪತಿಗಳು ಹುಟ್ಟಿದ್ದು ಒಂದೇ ದಿನಾಂಕದಂದು, ಮೃತಪಟ್ಟಿದ್ದು, ಒಂದೇ ದಿನ ಆಗಿದೆ. ದಂಪತಿಗಳ ಸಾವು ಇವರ ಕುಟುಂಬಕ್ಕೆ ಬರಸಿಡಿಲು ಬಡಿದಂತೆ ಆಗಿದೆ.
ಉತ್ತರ ಕರ್ನಾಟಕ ಸ್ನೇಹಲೋಕ ಟ್ರಸ್ಟ್ ಎಂಬ ಸಂಸ್ಥೆ ಹುಟ್ಟು ಹಾಕಿದ್ದ ವಿನಾಯಕ ಮುಂಗರವಾಡಿ, ಸುಜಾತಾ ಮುಂಗರವಾಡಿ ದಂಪತಿ ಸಮಾಜ ಸೇವೆಯಲ್ಲಿಯೂ ಮುಂದಿದ್ದರು. ಪ್ರತಿ ವರ್ಷ ಚಾರಣಕ್ಕೆ ಹೋಗುತ್ತಿದ್ದರು. ಈ ಬಾರಿ ಮಕ್ಕಳನ್ನು ಕೂಡ ಚಾರಣಕ್ಕೆ ಕರೆದೊಯ್ಯಲು ದಂಪತಿ ಯೋಜನೆ ಹಾಕಿಕೊಂಡಿದ್ದರು. ಆದರೆ, ಅವರಿಗೆ ಕೇವಲ 2 ಟಿಕೆಟ್ ಮಾತ್ರ ದೊರೆತಿತ್ತು. ಹೀಗಾಗಿ ದಂಪತಿ ಮಾತ್ರ ಚಾರಣಕ್ಕೆ ಹೋಗಿದ್ದರು. ದಂಪತಿಯ ಸಾವಿನ ಸುದ್ದಿ ಕುಟುಂಬ್ಕಕೆ ಸಿಡಿಲಿ ಬಡಿದಂತಾಗಿದೆ.