ಬಟ್ಟೆಮಲ್ಲಪ್ಪದಲ್ಲಿ ನೂತನವಾಗಿ ಅನಾವರಣಗೊಂಡಿದ್ದ ಎಸ್ ಬಂಗಾರಪ್ಪರವರ ನಾಮಫಲಕವನ್ನು ರಾತ್ರೋರಾತ್ರಿ ಕಿತ್ತು ಹಾಕಿದ ಕಿಡಿಗೇಡಿಗಳು – ಆಮ್ ಆದ್ಮಿ ಪಕ್ಷದಿಂದ ಆಕ್ರೋಶ|Bangarappa

ನಾಡುಕಂಡ  ದಿಟ್ಟ ನೇರ  ನಡೆ  ನುಡಿ ವ್ಯಕ್ತಿತ್ವದ  ಧೀಮಂತ್  ರಾಜಕಾರಣಿ ರಾಜ್ಯದ  ಮಾಜಿ  ಮುಖ್ಯ ಮಂತ್ರಿ ಎಸ್. ಬಂಗಾರಪ್ಪ  ರವರ ಹೆಸರನ್ನು ಬಟ್ಟೆ ಮಲ್ಲಪ್ಪ ಸರ್ಕಲ್ ಗೆ ಆಮ್ ಆದ್ಮಿ ಪಕ್ಷ ಹಾಗೂ ಕೆಲ ಸಂಘಟನೆಗಳ  ವತಿಯಿಂದ ಕಳೆದ 6 ದಿನಗಳ ಹಿಂದೆ ನಾಮಕರಣ  ಮಾಡಲಾಗಿತ್ತು. ಹಾಗೆಯೇ  ನಾಮ ಫಲಕವನ್ನು ಅಳವಡಿಸಲಾಗಿತ್ತು. ಇದನ್ನು ಸಹಿಸದ ಕೆಲ ದುಷ್ಕರ್ಮಿಗಳು ನಾಮ ಫಲಕವನ್ನು ಕಿತ್ತೊಗೆದಿದ್ದಾರೆ ಎಂದು ಹೊಸನಗರ ತಾಲೂಕು ಆಮ್ ಆದ್ಮಿ ಪಕ್ಷ ಆಕ್ರೋಶ ವ್ಯಕ್ತಪಡಿಸಿದೆ.




ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಬಟ್ಟೆಮಲ್ಲಪ್ಪ ಗ್ರಾಮದ ಸರ್ಕಲ್ ಗೆ ಇತ್ತೀಚೆಗೆ ಬಂಗಾರಪ್ಪ ಸರ್ಕಲ್ ಎಂದು ಆಮ್ ಅದ್ಮಿ ಪಕ್ಷ ಹಾಗೂ ಕೆಲ ಸಂಘಟನೆಗಳಿಂದ ನಾಮಕರಣ ಮಾಡಲಾಗಿತ್ತು.

ಆದರೆ ಮಂಗಳವಾರ ರಾತ್ರಿ ಯಾರೋ ಕಿಡಿಗೇಡಿಗಳು ರಾಜ್ಯ ಕಂಡ ಅತ್ಯುತ್ತಮ ಮುಖ್ಯಮಂತ್ರಿ ,ಸಮಾಜವಾದಿ ಚಿಂತಕ ದಿ|| ಎಸ್ ಬಂಗಾರಪ್ಪ ರವರ ನಾಮಫಲಕವನ್ನು ಕಿತ್ತು ಹಾಕುವ ಮೂಲಕ ಧೀಮಂತ ನಾಯಕನಿಗೆ ಅವಮಾನ ಎಸಗಿದ್ದಾರೆ.




ಈ ಬಗ್ಗೆ ಆಮ್ ಆದ್ಮಿ ಪಕ್ಷದ ತಾಲೂಕ್ ಅಧ್ಯಕ್ಷ ಗಣೇಶ್ ಸೂಗೊಡು ರವರನ್ನು ಪೋಸ್ಟ್ ಮ್ಯಾನ್ ನ್ಯೂಸ್ ಸಂಪರ್ಕಿಸಿ ಮಾತನಾಡಿದಾಗ ಎಸ್ ಬಂಗಾರಪ್ಪನವರು ನಮ್ಮ ಜಿಲ್ಲೆಯ ಮತ್ತು ರಾಜ್ಯದ ಹೆಮ್ಮೆ ಅಂತಹವರ ಹೆಸರನ್ನು ಒಂದು ವೃತ್ತಕ್ಕೆ ಬಳಸುವಾಗ ಯಾವುದೇ ಅನುಮತಿಯ ಅವಶ್ಯಕತೆ ಇರುವುದಿಲ್ಲ ಏಕೆಂದರೆ ಅವರೊಬ್ಬ ಪ್ರಶ್ನಾತೀತ ನಾಯಕ. ಸುಸಂಸ್ಕೃತ ಜಿಲ್ಲೆಯಲ್ಲಿ ಅವರ ನಾಮಫಲಕವನ್ನು ಕಿತ್ತು ಹಾಕುವ ಹೀನ ಮನಸ್ಥಿತಿಯ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಬೇಕು ಎಂದರು.




ಪೊಲೀಸರ ಕರ್ತವ್ಯ ಲೋಪದಿಂದ ಈ ದುಷ್ಕ್ರುತ್ಯ ನಡೆದಿದ್ದು,ಕೇವಲ ಮರಳು ಗಾಡಿಯನ್ನು ಎಣಿಸುವುದರಲ್ಲಿಯೇ ಅವರು ನಿರತಾಗಿದ್ದಾರೆ ಅಂತಹ ಜನನಿಬಿಡ ಪ್ರದೇಶದಲ್ಲಿ ಒಬ್ಬ ಮಹಾನ್ ವ್ಯಕ್ತಿಯ ನಾಮಫಲಕ ಕಿತ್ತು ಹಾಕುವವರೆಗೂ ಪೊಲೀಸರು ಏನು‌ ಮಾಡುತಿದ್ದರು ಎಂದು ಪ್ರಶ್ಬಿಸಿದರು.

ಕೂಡಲೇ ನಾಮಫಲಕವನ್ನು ಕಿತ್ತು ಹಾಕಿದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸುವಂತೆ ಈ ಸಂಧರ್ಭದಲ್ಲಿ ಅವರು ಒತ್ತಾಯಿಸಿದರು.

ಆಮ್ ಆದ್ಮಿ‌ಪಕ್ಷದವರು ಯಾವುದೇ ಅನುಮತಿ ಪಡೆಯದೇ ಬಂಗಾರಪ್ಪ ಸರ್ಕಲ್ ಎಂದು ನಾಮಕರಣ ಮಾಡಿ ನಾಮಫಲಕ ಅಳವಡಿಸಿದ್ದರು ಇದರ ಬಗ್ಗೆ ಆಮ್ ಆದ್ಮಿ ಪಕ್ಷದ ತಾಲೂಕ್ ಅಧ್ಯಕ್ಷರಾದ ಗಣೇಶ್ ಸೂಗೊಡು ರಲ್ಲಿ ವಿಚಾರಿಸಿದಾಗ ಅವರು ಸರಿಯಾದ ರೀತಿಯಲ್ಲಿ ಸ್ಪಂದಿಸಿರಲಿಲ್ಲ ಹೀಗಾಗಿ ಗ್ರಾಪಂ ವತಿಯಿಂದ ತೆರವುಗೊಳಿಸಲು ಹೊಸನಗರ ಪೊಲೀಸ್ ಠಾಣೆಯಲ್ಲಿ ರಕ್ಷಣೆ ಕೋರಲಾಗಿತ್ತು.ಅದರಂತೆ ಇಂದು ತೆರವಿಗೆ ಸ್ಥಳಕ್ಕೆ ಹೋದಾಗ ಆ ನಾಮಫಲಕವನ್ನು ರಾತ್ರೋರಾತ್ರಿ ಯಾರೋ ಕಿಡಿಗೇಡಿಗಳು ತೆರವುಗೊಳಿಸಿದ್ದರು.“…..ಪ್ರಭು.ಪಿಡಿಒ,ಹರಿದ್ರಾವತಿ ಗ್ರಾಪಂ


                            
                                                  

Leave a Reply

Your email address will not be published. Required fields are marked *