ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಕಾಲೇಜು ವಿದ್ಯಾರ್ಥಿ|sucide

ಅಂತಿಮ ವರ್ಷದ ಪದವಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಇಲ್ಲಿಗೆ ಸಮೀಪದ ಆಚಾಪುರ ಗ್ರಾ.ಪಂ . ವ್ಯಾಪ್ತಿಯ ಕೆರೆಹಿತ್ತಲು ಗ್ರಾಮದ ನಿವಾಸಿ ಕಾಲೇಜು ವಿದ್ಯಾರ್ಥಿಯೋರ್ವ ಅಡಕೆ ತೋಟದಲ್ಲಿ ಮರಕ್ಕೆ ನೇಣು ಬಿಗಿದು ಆತ್ಮ ಹತ್ಯೆ ಮಾಡಿಕೊಂಡ ಘಟನೆ ಭಾನುವಾರ ನಡೆದಿದೆ.
ಗ್ರಾಮದ ವೀರಭದ್ರಪ್ಪ ಗೌಡರ ಪುತ್ರ ಗೌತಮ್ (20) ಮೃತ ಯುವಕ
ಈತ ಸಾಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ವರ್ಷದ ಪದವಿ ವಿದ್ಯಾರ್ಥಿ ಎಂದು ತಿಳಿದು ಬಂದಿದೆ. ಬೆಳಿಗ್ಗೆ ಅಡಕೆ ತೋಟದ ಕೃಷಿ ಕಾರ್ಯದಲ್ಲಿ ತಂದೆಗೆ ಸಹಾಯ ಮಾಡುತ್ತಿದ್ದ. ತಂದೆ ತಿಂಡಿಗೆ ಮನೆಗೆ ಹೋದ ಸಮಯ ನೋಡಿ ಅಡಕೆ ಮತ್ತು ಕಾಫಿ ಮರದ ಸಾಲಿನಲ್ಲಿ ಮರಕ್ಕೆ ಉರುಳು ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 
 ಸಾಗರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ಘಟನೆ ಮಹಜರ್  ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ..

Leave a Reply

Your email address will not be published. Required fields are marked *