ಶಿವ ನಾಮ ಸ್ಮರಣೆಯಿಂದ ಸಂಕಷ್ಟ ಪರಿಹಾರ – ಮಳಲಿ ಶ್ರೀಗಳು|shivarathri

ಶಿವ ನಾಮಸ್ಮರಣೆಯಿಂದ ಸಂಕಷ್ಟ ಪರಿಹಾರ – ಮಳಲಿ ಶ್ರೀಗಳು

ರಿಪ್ಪನ್‌ಪೇಟೆ : ಸಂಸ್ಕೃತಿ ಸಂಸ್ಕಾರ ಪ್ರತಿಯೊಬ್ಬರು ನಿತ್ಯ ಬದುಕಿನಲ್ಲಿ ಅಳವಡಿಸಿಕೊಂಡಾಗ ಬದುಕು ನೆಮ್ಮದಿಯಿಂದ ಕೂಡಿರುತ್ತದೆ. ಶಿವರಾತ್ರಿಯ ದಿನ ಮಾತ್ರ ಶಿವನಾಮಸ್ಮರಣೆ ಮಾಡಿದರೆ ಸಾಲದು ನಿತ್ಯ ಶಿವಮಂತ್ರ ಪಠಿಸುವುದರಿಂದ ಸಂಕಷ್ಟ ಹರಿಹಾರವಾಗುವುದು ಎಂದು ಮಳಲಿಮಠದ ಡಾ.ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.

ರಿಪ್ಪನ್‌ಪೇಟೆ ಸಮೀಪದ ಹಾಲುಗುಡ್ಡಯ ಇತಿಹಾಸ ಪ್ರಸಿದ್ದ ಹಾಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ಮಹಾಶಿವರಾತ್ರಿಯ ಅಂಗವಾಗಿ ಹಾಲೇಶ್ವರ ಸ್ವಾಮಿಗೆ ರುದ್ರಾಭಿಷೇಕ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಧರ್ಮಸಭೆಯ ದಿವ್ಯಸಾನಿಧ್ಯ ವಹಿಸಿ ಅಶೀರ್ವಚನ ನೀಡಿ ಬಾಲ್ಯದಲ್ಲಿ ವಿದ್ಯೆ  ಯವ್ವನದಲ್ಲಿ ಸಂಪತ್ತು.ಗಳಿಸಬೇಕು.ಇವೆರಡು ಜೀವನಕ್ಕೆ ಅಮೂಲ್ಯ  ಭೌತಿಕ ಸಂಪತ್ತು ಎಷ್ಟು ಮುಖ್ಯವೋ ಅಷ್ಟೇ ಆಧ್ಯಾತ್ಮಿಕ ಜೀವನಕ್ಕೆ ಮುಖ್ಯ.ಮಕ್ಕಳಿಗೆ ಗುರುಹಿರಿಯರಿಗೆ ತಂದೆ ತಾಯಿಗಳ ಬಗ್ಗೆ ಗೌರವಿಸುವ ಭಾವನೆಗಳು ತುಂಬ ಬೇಕು ಎಂದು ಶ್ರೀಗಳು ನುಡಿದರು.ಮಹಾಶಿವರಾತ್ರಿಯಲ್ಲಿ ಜಾಗರಣೆಯೊಂದಿಗೆ ಜಾಗೃತಿ ಹೊಂದಬೇಕು ಧರ್ಮದ ಪಥದಲ್ಲಿ ಸಾಗುವಂತಾಗಬೇಕು ಎಂದು ಹೇಳಿದರು.

ಹಾಲೇಶ್ವರ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಜಯದೇವಗೌಡರು ಅಧ್ಯಕ್ಷತೆ ವಹಿಸಿದ್ದರು.

ಧರ್ಮಸಭೆಯಲ್ಲಿ ಹೆಚ್.ಎಸ್.ರವಿ, ಯೋಮಕೇಶಪ್ಪಗೌಡರು.ವಾಸಪ್ಪಗೌಡರು, ಷಣ್ನುಖಪ್ಪಗೌಡರು,ಶೇಷಪ್ಪಗೌಡರು,ಎನ್.ವರ್ತೇಶ್‌ಗೌಡರು,ಹರೀಶ್‌ಗೌಡ.
ಉಮೇಶ್‌ಗೌಡರು ಗಂಟೆ,ಈಚಲುಗುಡ್ಡೇರೆ ಮನೆ ರಾಜೇಂದ್ರಗೌಡ, ನವೀನಗೌಡರು, ಗಂಟೆ ಪುಟ್ಟರಾಜ ಗೌಡ,ಇನ್ನಿತರ ಹಾಲುಗುಡ್ಡೆ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಹೆಚ್.ಎಸ್.ರವಿ ಸ್ವಾಗತಿಸಿ ನಿರೂಪಿಸಿ ವಂದಿಸಿದರು.

Leave a Reply

Your email address will not be published. Required fields are marked *