ಶಿವಮೊಗ್ಗ ನಗರ ದಲ್ಲಿ ವ್ಯಕ್ತಿಯೊಬ್ಬ ಗನ್ ತೋರಿಸಿ ಬೆದರಿಕೆ ಹಾಕಿದ ಘಟನೆ ಬಗ್ಗೆ ದೊಡ್ಡಪೇಟೆ ಪೊಲೀಸ್ ಸ್ಟೇಷನ್ನಲ್ಲಿ ದೂರು ದಾಖಲಾಗಿದೆ.
ಸೆಕೆಂಡ್ ಹ್ಯಾಂಡ್ ಬೈಕ್ ಡೀಲರ್ ಒಬ್ಬರಿಗೆ ಗನ್ ತೋರಿಸಿದ ಯುವಕ ಅದರಿಂದಲೇ ಅವರ ಮೇಲೆ ಹಲ್ಲೆ ಸಹ ಮಾಡಿದ್ಧಾನಂತೆ. ನಗರದ ಇಲಿಯಾಸ್ ನಗರದ ಬಳಿಇರುವ ಶಾದಿ ಮಹಲ್ ಬಳಿಯಲ್ಲಿ ಈ ಘಟನೆ ನಡೆದಿದೆ.
ನಡೆದಿದ್ದೇನು?
ಇಲಿಯಾಸ್ ನಗರದಲ್ಲಿ ಮೊಹಮ್ಮದ್ ರಿಯಾಮ್ ಎಂಬವರು ಬೈಕ್ ಡೀಲ್ ಮಾಡುವ ಕೆಲಸ ಮಾಡುತ್ತಿದ್ದಾರೆ. ಇವರ ಬಳಿ ಅಜರ್ ಎಂಬಾತ ಬಂದಿದ್ದನಂತೆ. ಅಲ್ಲದೆ ಬೈಕ್ವೊಂದನ್ನ ಖರೀದಿಸಿ, ಅದರ ೪೦ ಸಾವಿರ ರೂಪಾಯಿ ಹಣವನ್ನು ೨ ತಿಂಗಳು ಬಿಟ್ಟು ಕೊಡುವುದಾಗಿ ತಿಳಿಸಿದ್ದಾನೆ.
ಆದರೆ ಎರಡು ತಿಂಗಳು ಕಳೆದರು ಹಣ ಕೊಡದ ಹಿನ್ನೆಲೆಯಲ್ಲಿ ರಿಯಾಬ್ ಕಳೆದ ಶನಿವಾರ, ಅಜರ್ನನ್ನ ಕರೆಸಿಕೊಂಡು ಹಣ ಕೊಡು ಇಲ್ಲ ಬೈಕ್ ವಾಪಸ್ ಕೊಡು ಎಂದು ಪಟ್ಟು ಹಿಡಿದಿದ್ದಾರೆ. ಈ ವೇಳೇ ರಾಂಗ್ ಆದ ಅಜರ್, ಪೈಸ ಸಹ ಕೊಡುವುದಿಲ್ಲ , ಏನ್ ಮಾಡ್ತೀಯಾ ಮಾಡಿಕೋ ಎಂದು ಬೆದರಿಕೆ ಹಾಕಿದ್ದಾನೆ.
ಕೇವಲ ಬೆದರಿಕೆ ಹಾಕಿದ್ದಷ್ಟೆ ಅಲ್ಲದೆ ಅಜರ್, ತನ್ನ ಬೆನ್ನ ಹಿಂದೆ ಸಿಗಿಸಿಕೊಂಡಿದ್ದ ಗನ್ನನ್ನ ತೆಗೆದು ರಿಯಾಬ್ಗೆ ಹೆದರಿಸಿದ್ದಾನೆ. ಆತನ ಕಿವಿಗೆ ಅದರಿಂದಲೇ ಹಲ್ಲೆ ಮಾಡಿ, ಶೂಟ್ ಮಾಡ್ತೀನಿ ಎಂದು ಬೆದರಿಸಿದ್ದಾನೆ.. ಅಷ್ಟೊತ್ತಿಗೆ ಅಲ್ಲಿಗೆ ಕೆಲವರು ಬರುವುದನ್ನ ಗಮನಿಸಿದ ಅಜರ್, ಗನ್ ಸಮೇತ ಪರಾರಿಯಾಗಿದ್ಧಾನೆ.
ಈ ಸಂಬಂಧ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಸ್ಟೇಷನ್ನಲ್ಲಿ ಕೇಸ್ ಆಗಿದೆ. ಆದರೆ ಶಿವಮೊಗ್ಗ ಸಿಟಿಯಲ್ಲಿ ಗನ್ ಬಳಸಲಾಗುತ್ತಿದೆ ಎಂದರೆ, ಆತನ ಹಿಂದಿನ ಉದ್ದೇಶ ಏನಿರಬಹುದು ಎಂಬುದು ಇದೀಗ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.