Headlines

ಬಿಜೆಪಿ ಟಿಕೆಟ್ ಆಕಾಂಕ್ಷಿಗಳಿಗೆ “ಟಪ್ ಫೈಟ್” ನೀಡುತ್ತಿರುವ ಚಂದ್ರಶೇಖರ್ ಪೂಜಾರ : ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾಯಕನ ಹಿಂದೆ, ಈ ಬಾರಿ ಅವನೇ ನಾಯಕ.!?

ಬಿಜೆಪಿ ಟಿಕೆಟ್ ಆಕಾಂಕ್ಷಿಗಳಿಗೆ “ಟಪ್ ಫೈಟ್” ನೀಡುತ್ತಿರುವುದು ಚಂದ್ರಶೇಖರ್ ಪೂಜಾರ.ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾಯಕನ ಹಿಂದೆ, ಈ ಬಾರಿ ಅವನೇ ನಾಯಕ.!?

ಹರಿಹರ: ಈಗಾಗಲೇ ಕರ್ನಾಟಕ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕವನ್ನು ಘೋಷಣೆ ಮಾಡಿ ಅಧಿಸೂಚನೆ ಹೊರಡಿಸಿದೆ. ಏಪ್ರಿಲ್ 13ನೇ ತಾರೀಖಿನಿಂದ ನಾಮಪತ್ರ ಸಲ್ಲಿಕೆ ಕಾರ್ಯ ಆರಂಭವಾಗಲಿದೆ. ಮೇ ಹತ್ತರಂದು ರಾಜ್ಯ ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿದೆ 13 ರಂದು ಅಭ್ಯರ್ಥಿಗಳ ಭವಿಷ್ಯ ಹೊರಬಿಳಲಿದೆ.




ಪ್ರಮುಖ ಪಕ್ಷಗಳು ರಾಜ್ಯ ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನ ಘೋಷಣೆ ಮಾಡುವಲ್ಲಿ ವಿಳಂಬ ತಂತ್ರ ಅನುಸರಿಸುತ್ತಿದ್ದಾರೆ. ಹೇಗಾದರೂ ಶತಾಯಗತಾಯ ಕರ್ನಾಟಕದಲ್ಲಿ ಆಡಳಿತದ ಚುಕ್ಕಾಣೆ  ಹಿಡಿಯಲೇಬೇಕು ಎಂಬ ನಿರ್ಧಾರಕ್ಕೆ ಬಂದಿರುವ ಕಾಂಗ್ರೆಸ್ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವಲ್ಲಿ ಬಾರಿ ಎಚ್ಚರಿಕೆ ಹೆಜ್ಜೆಗಳನ್ನ ಇಡುತ್ತಿವೆ.


ರಾಜ್ಯದಲ್ಲಿ ನಡೆಯುತ್ತಿರುವ ವಿಧಾನಸಭಾ ಕ್ಷೇತ್ರಗಳ ಚುನಾವಣೆಯಲ್ಲಿ ರಾಷ್ಟ್ರದ ಗಮನಸೆಳೆದಿದ್ದು ಹರಿಹರ ವಿಧಾನಸಭಾ ಕ್ಷೇತ್ರ.”ಕಳೆದ ಚುನಾವಣೆಯಲ್ಲಿ ನಾಯಕನ ಹಿಂದೆ ಮತಯಾಚನೆ ಮಾಡಿದ ಪಕ್ಷದ ಕಾರ್ಯಕರ್ತ, ಇಂದು ತಾನೇ ಹರಿಹರ ವಿಧಾನಸಭಾ ಕ್ಷೇತ್ರದ ಪ್ರಬಲ ಆಕಾಂಕ್ಷಿ ಆಗುವ ಮೂಲಕ ನಾಯಕನಾಗಲು ಹೊರಟಿದ್ದಾರೆ “ಹರನ ಮೇಲೆ ಇರುವ ಚಂದ್ರ”. ಹರಿಹರ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿಗಳಿಗೆ ಟಪ್ ಫೈಟ್ ನೀಡುತ್ತಿದ್ದಾರೆ ಚಂದ್ರಶೇಖರ್ ಪೂಜಾರ.




ಚಂದ್ರಶೇಖರ್ ಪೂಜಾರ ಹರಿಹರ ವಿಧಾನಸಭಾ ಕ್ಷೇತ್ರದ್ಯಾಂತ ಕಳೆದ ವಿಧಾನಸಭಾ ಚುನಾವಣೆಯ ನಂತರ ದಿನದಲ್ಲಿ ಬಿಜೆಪಿ ಪಕ್ಷ ಸಂಘಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ನಿಷ್ಠಾವಂತ ಕಾರ್ಯಕರ್ತರಲ್ಲಿ ಮುಂಚೂಣಿಯಲ್ಲಿ ನಿಲ್ಲುವಂತ ಕಾರ್ಯಕರ್ತರಲ್ಲಿ ಒಬ್ಬರು. ಪಕ್ಷದ ಚಿನ್ಹೆ ಅಡಿಯಲ್ಲಿ ಹರಿಹರ ವಿಧಾನಸಭಾ ಕ್ಷೇತ್ರಾದ್ಯಂತ ವಿವಿಧ ರೀತಿಯ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುತ್ತ ತಾಲೂಕಿನ ಮತದಾರರಲ್ಲಿ ಹೊಸ ಭರವಸೆಯನ್ನ ಹುಟ್ಟು ಹಾಕಿದ ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಚಂದ್ರಶೇಖರ್ ಪೂಜಾರ.


2019 ರಿಂದ 2023ರವರೆಗೂ ಬಿಜೆಪಿ ಪಕ್ಷದ ಚಿಹ್ನೆ ಅಡಿಯಲ್ಲಿ ಹರಿಹರ ವಿಧಾನಸಭಾ ಕ್ಷೇತ್ರಾದ್ಯಂತ ವಿವಿಧ ರೀತಿಯ ಕಾರ್ಯಕ್ರಮಗಳು ,ಸಮಾಜಮುಖಿ ಸೇವೆಗಳನ್ನು ನೀಡುತ್ತಾ ತಾಲೂಕಿನಲ್ಲಿ ಬಿಜೆಪಿ ಪಕ್ಷದ ಚಿಹ್ನೆ ಹಾಗೂ ಬಿಜೆಪಿ ಪಕ್ಷದ ಸಂಘಟನೆಯ ಜೊತೆ ಜೊತೆಗೆ ಪಕ್ಷವನ್ನ ಜನಸಾಮಾನ್ಯರ ಮನಸ್ಸಿನಲ್ಲಿ ಮಾಸದ ರೀತಿಯಲ್ಲಿ ನೋಡಿಕೊಂಡು ಹೋಗಿದ್ದಾರೆ. ಅಂದರೆ ಹರಿಹರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷವನ್ನ ಜೀವಂತವಾಗಿ ಇರುವಂತ ಪ್ರಯತ್ನ ಚಂದ್ರುಶೇಖರ್ ಪೂಜಾರ್ ಅವರಿಂದ ನಡೆದಿದೆ.

ಹರಿಹರ ವಿಧಾನಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಮಾಜಿ ಶಾಸಕರಿಗೆ ಹಾಗೂ ಜಿಲ್ಲಾಧ್ಯಕ್ಷರಿಗೆ ಟಫ್ ಫೈಟ್ ನೀಡುತ್ತಿರುವುದು ಪಕ್ಷದ ಸಾಮಾನ್ಯ ಕಾರ್ಯಕರ್ತ ಚಂದ್ರಶೇಖರ್ ಪೂಜಾರ.

ಚುನಾವಣೆಯ ದಿನಾಂಕ ಘೋಷಣೆಯಾಗಿದೆ ಬಿಜೆಪಿ ಹರಿಹರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳನ್ನ ಘೋಷಣೆ ಮಾಡುವಲ್ಲಿ ವಿಳಂಬ ತಂತ್ರ ಅನುಸರಿಸುತ್ತಿದೆ. ಇನ್ನೆರಡು ದಿನದಲ್ಲಿ ನಾಮಪತ್ರ ಸಲ್ಲಿಕೆಯ ಕಾರ್ಯ ಆರಂಭವಾಗಲಿದೆ. ಇನ್ನೂ ಹರಿಹರ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಪಕ್ಷದ ಅಭ್ಯರ್ಥಿ ಯಾರು ಎಂಬ ಗುಟ್ಟನ್ನು ಮಾತ್ರ ಇನ್ನೂ ಬಿಟ್ಟು ಕೊಟ್ಟಿಲ್ಲ. ಒಂದು ಮಾಹಿತಿಯ ಪ್ರಕಾರ ಈ ಬಾರಿ ಹರಿಹರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಚಂದ್ರಶೇಖರ್ ಪೂಜಾರ್ ಅವರಿಗೆ ಟಿಕೆಟ್ ನೀಡುತ್ತಾರೆ ಎಂಬ ಮಾಹಿತಿ ಪಕ್ಷದ ಪಡಸಾಲೆಯಲ್ಲಿ ಹರಿದಾಡುತ್ತಿದೆ. ಬಹುತೇಕ ಹರಿಹರ ವಿಧಾನಸಭಾ ಕ್ಷೇತ್ರದಿಂದ ಚಂದ್ರಶೇಖರ್ ಪೂಜಾರ ಕಣಕ್ಕಿಳಿಯುವ ಸಾಧ್ಯತೆ!?

ಈಗಾಗಲೇ ಕಳೆದ ಮೂರು ದಿನಗಳಿಂದ ದೆಹಲಿಯಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಸಂಬಂಧಿಸಿದಂತೆ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ. ಅಂತಿಮ ನಿರ್ಧಾರಕ್ಕೆ ಬರುವಲ್ಲಿ ಹೈಕಮಾಂಡ್ ಹೆಣಗಾಡುತ್ತಿದೆ. ಯಡಿಯೂರಪ್ಪನವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡವರಿಗೆ ಟಿಕೆಟ್ ಸಿಗುವುದು ಎಂಬ ಮಾಹಿತಿ ಹರಿದಾಡುತ್ತಿದ್ದು. ಈಗಾಗಲೇ ಯಡಿಯೂರಪ್ಪನವರು ಹೈಕಮಾಂಡ್ ವಿರುದ್ಧ ಮುನಿಸಿಕೊಂಡು ರಾಜ್ಯಕ್ಕೆ ವಾಪಸ್ ಆಗಿದ್ದಾರೆ. ಹರಿಹರ ವಿಧಾನಸಭಾ ಕ್ಷೇತ್ರ ಸೇರಿದಂತೆ ಸರಿಸುಮಾರು ಇಪ್ಪತ್ತಕ್ಕೂ ಹೆಚ್ಚು ಹಾಲಿ ಹಾಗೂ ಮಾಜಿ ಶಾಸಕರು  ಯಡಿಯೂರಪ್ಪನವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದರು. ಈಗ ಅವರೆಲ್ಲರಿಗೂ ಟಿಕೆಟ್ ಸಿಗುವುದು ಅನುಮಾನವಿದೆ. ಆದ್ದರಿಂದಲೇ ಯಡಿಯೂರಪ್ಪನವರು ಹೈಕಮಾಂಡ್ ವಿರುದ್ಧ ಮುನಿಸಿಕೊಂಡಿದ್ದಾರೆ ಎಂಬ ಮಾಹಿತಿ ಈಗಾಗಲೇ ರಾಜ್ಯಾದ್ಯಂತ ಪ್ರಶ್ನಾರ್ಥಕ ಚಿಹ್ನೆಯಾಗಿ ಹರಿದಾಡುತ್ತಿದೆ.




ಕಳೆದ ಚುನಾವಣೆಯಲ್ಲಿ ನಾಯಕನ ಹಿಂದೆ ಮತಯಾಚನೆ ಮಾಡಿದ ಕಾರ್ಯಕರ್ತ ಈ ಬಾರಿಯ ಚುನಾವಣೆಯಲ್ಲಿ ತಾನೇ ನಾಯಕನಾದರೂ ಆಶ್ಚರ್ಯವಿಲ್ಲ. ಕಾಲದ ಚಕ್ರ ಯಾವ ರೀತಿ ಉರುಳುತ್ತದೆ ಎಂಬುದಕ್ಕೆ ಚಂದ್ರಶೇಖರ್ ಪೂಜಾರ ತಾಜಾ ಉದಾಹರಣೆಯಾಗಬಹುದು?

ಒಟ್ಟಾರೆಯಾಗಿ ಹರಿಹರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ತಾವೇ ಕಣಕ್ಕಿಳಿಯುತ್ತೇವೆ ಎಂಬ ಪ್ರಬಲ ಆಶಾಭಾವನೆಯಲ್ಲಿದ್ದ ನಾಯಕರಿಗೆ ಚಂದ್ರಶೇಖರ್ ಪೂಜರಿ ನಿರಾಸೆ ನಿರಾಶೆ ಉಂಟು ಮಾಡಬಹುದೇ?

ಒಂದು ಮಾಹಿತಿಯ ಪ್ರಕಾರ 18ನೇ ತಾರೀಖಿನವರೆಗೆ ಹರಿಹರ ವಿಧಾನಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿಯ ಘೋಷಣೆ ಆಗುವುದಿಲ್ಲ ಎಂಬ ಮಾಹಿತಿ ಪಕ್ಷದ ವಲಯದಿಂದ ಕೇಳಿ ಬಂದಿದೆ. ಪಕ್ಷದ ವಿರುದ್ಧ ಬಂಡಾಯ ಹೇಳದಂತೆ ನೋಡಿಕೊಳ್ಳುವ ಉದ್ದೇಶದಿಂದ ಅಭ್ಯರ್ಥಿಯ ಆಯ್ಕೆ ವಿಳಂಬವಾಗುತ್ತಿದೆ. ಇಷ್ಟೆಲ್ಲಾ ಜಟಿಲತೆಗೆ ಚಂದ್ರಶೇಖರ್ ಪೂಜಾರ್ ಅವರ ಸಂಘಟನೆಯ ಕಾರಣವಾಗಿದೆ.



Leave a Reply

Your email address will not be published. Required fields are marked *