ಸಾಗರ ತಾಲೂಕಿನ ಆನಂದಪುರದ ಕೆಲವು ಅಂಗಡಿಗಳಲ್ಲಿ ಮಂಗಳವಾರ ತಡರಾತ್ರಿ ಸರಣಿ ಕಳ್ಳತನವಾದ ಘಟನೆ ನಡೆದಿದೆ.
ಆನಂದಪುರದ ಬಿ ಎಚ್ ರಸ್ತೆಯಲ್ಲಿರುವ ಹೋಲ್ ಸೇಲ್ ಅಂಗಡಿಗಳಾದ ಮಾರುತಿ ಜನರಲ್ ಸ್ಟೋರ್. ಸಾಗರ್ ಜನರಲ್ ಸ್ಟೋರ್. ಲಿಬರಟಿ ಸ್ಟೋರ್ ಹಾಗೂ ಶ್ರೀನಿವಾಸ್ ಜನರಲ್ ಸ್ಟೋರಿನ ಬೀಗಗಳನ್ನ ಮುರಿದು ಕಳ್ಳತನ ನಡೆದಿದೆ.
ಮಧ್ಯ ರಾತ್ರಿಯ ಸಮಯದಲ್ಲಿ ಈ ಕಳ್ಳತನ ನಡೆದಿದ್ದು ಅಂಗಡಿಯ ಮುಂಭಾಗದಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾ ಗಳನ್ನು ಸಹ ಬೇರೆ ಕಡೆ ತಿರುಗಿಸುವುದರ ಮೂಲಕ ಕಳ್ಳತನ ನಡೆಸಿ ಅಂಗಡಿಯ ಒಳಗೆ ಹೋಗಿ ಸಿಸಿಟಿವಿಯ ಮಾನಿಟರ್ಸ್ ಹಾಗೂ ಲಕ್ಷಾಂತರ ರೂ ಬೆಲೆಬಾಳುವ ವಸ್ತುಗಳು ಕಳ್ಳತನವಾಗಿರಬಹುದು ಎನ್ನಲಾಗಿದೆ.
ಸ್ಥಳಕ್ಕೆ ಆನಂದಪುರ ಪೊಲೀಸರು ಹಾಗೂ ಜಿಲ್ಲಾ ಬೆರಳಚ್ಚು ತಙ್ನರು ಭೇಟಿ ನೀಡಿ ಪರಿಶೀಲಿಸಿದ್ದಾರೆ.ಕಳ್ಳತನದ ದ್ರೃಶ್ಯ ಸಿಸಿಟಿವಿ ಯಲ್ಲಿ ಸೆರೆಯಾಗಿದೆ.