ರಿಪ್ಪನ್‌ಪೇಟೆ : ಪಟ್ಟಣದಲ್ಲಿ ಶಾಂತಿಯುತ ಮತದಾನಕ್ಕಾಗಿ ಸೆಂಟ್ರಲ್ ಪ್ಯಾರಾ ಮಿಲಿಟರಿ ಫೋರ್ಸ್(ಸಿಆರ್ ಪಿಎಫ್) ಮತ್ತು ಪೊಲೀಸ್ ಸಿಬ್ಬಂದಿಯಿಂದ ಬುಧವಾರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಥ ಸಂಚಲನ ಸಾರ್ವಜನಿಕರ ಗಮನ ಸೆಳೆಯಿತು.
ಪಟ್ಟಣದ ಶಿವಮೊಗ್ಗ ರಸ್ತೆಯಿಂದ ಪ್ರಾರಂಭವಾದ ಪಥಸಂಚಲನದಲ್ಲಿ ಸಿಆರ್ ಪಿ ಎಫ್ ಮತ್ತು ಪೊಲೀಸ್ ಸಿಬ್ಬಂದಿಗಳು ವಿನಾಯಕ ವೃತ್ತ ಮಾರ್ಗವಾಗಿ ಹೊಸನಗರ ರಸ್ತೆ ಮೂಲಕ ತೆರಳಿ ಮದೀನಾ ಕಾಲೋನಿಯಿಂದ ಸಾಗರ ರಸ್ತೆ ಮೂಲಕ ತೀರ್ಥಹಳ್ಳಿ ರಸ್ತೆಯಲ್ಲಿ ಸಾಗಿತು ನಂತರ ಚೌಡೇಶ್ವರಿ ಕಾಲೋನಿಯ ಮೂಲಕ ಶಿವಮೊಗ್ಗ ರಸ್ತೆಯ ಪೊಲೀಸ್ ಠಾಣೆ ಮುಂಭಾಗದಲ್ಲಿ ಪಥ ಸಂಚಲನ ಸಮಾಪ್ತಿಯಾಯಿತು.
ರೋಹನ್ ಜಗದೀಶ್ ಎ ಎಸ್ಪಿ ಸಾಗರ ಉಪವಿಬಾಗ ಇವರ ನೇತೃತ್ವದಲ್ಲಿ ಹರ್ಷ ಗೌತಮ್ ಸಿಆರ್ ಪಿಎಫ಼್ ಅಸಿಸ್ಟೆಂಟ್ ಕಮಾಂಡರ್, ತೀರ್ಥಹಳ್ಳಿ ಡಿವೈಎಸ್ಪಿ ಗಜಾನನ ವಾಮನ ಸುತಾರ, ಹೊಸನಗರ ವೃತ್ತ ನಿರೀಕ್ಷಕರಾದ ಗಿರೀಶ್ ಬಿ ಸಿ , ಸಾಗರ ಗ್ರಾಮಾಂತರ ಪಿಎಸೈ ಕೃಷ್ಣಪ್ಪ , ಕಾರ್ಗಲ್ ಪಿಎಸೈ  ತಿರುಮಲೇಶ್,ರಿಪ್ಪನ್‌ಪೇಟೆ ಪಿಎಸೈ ಶಿವಾನಂದ ಕೆ ಭಾಗವಹಿಸಿದ್ದರು.
 
                         
                         
                         
                         
                         
                         
                         
                         
                         
                        