ಸಾಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಕಾಗೋಡು ತಿಮ್ಮಪ್ಪರವರ ಪುತ್ರಿ ರಾಜನಂದಿನಿ ಹಾಗೂ ಜಿಪಂ ಮಾಜಿ ಸದಸ್ಯ ಹೊನಗೋಡು ರತ್ನಾಕರ್ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ರಾಜನಂದಿನಿ KPCC ಯ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಸಾಗರ ಹೊಸನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಇಂದು ಮುಖ್ಯಮಂತ್ರಿ ಬಸರಾಜ ಬೊಮ್ಮಾಯಿ ಯವರನ್ನು ಭೇಟಿ ಮಾಡಿ ಸಾಗರ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ನವರ ಸಮ್ಮುಖದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಗೊಂಡರು.
ಮತ್ತೊಬ್ಬ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಯಾಗಿದ್ದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ರತ್ನಾಕರ ಹೊನಗೋಡು ರವರು ಸಹ ಬಿಜೆಪಿ ಸೇರ್ಪಡೆಗೊಂಡಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಮೂಲ ಕಾಂಗ್ರೆಸ್ಸಿಗರಿಗೆ ಬೆಲೆ ಇಲ್ಲ ಹೀಗಾಗಿ ಸದ್ಯದಲ್ಲೇ ಹಲವು ಮೂಲ ಕಾಂಗ್ರೆಸ್ಸಿಗರು ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರಲಿದ್ದಾರೆ ಎಂದು ರತ್ನಾಕರ ಹೊನಗೋಡು ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ನನ್ನ ಎದೆಗೆ ಚೂರಿ ಹಾಕಿದ ಹಾಗೇ ಆಗಿದೆ – ಕಾಗೋಡು ತಿಮ್ಮಪ್ಪ
ಡಾ ರಾಜನಂದಿನಿ ಬಿಜೆಪಿ ಸೇರ್ಪಡೆಯಾದ ಬಗ್ಗೆ ಕಾಗೋಡು ತಿಮ್ಮಪ್ಪ ಮೊದಲ ಪ್ರತಿಕ್ರಿಯೆ ನೀಡಿ ಈಗ ನನಗೆ ಸುದ್ದಿ ಸಿಕ್ಕಿದೆ,ಅವಳು ರೀತಿ ಮಾಡ್ತಾಳೆ ಎಂದು ಕನಸಲ್ಲಿ ಕಂಡವನಲ್ಲ,ಅಲೋಚನೆ ಮಾಡಿದವನು ಅಲ್ಲ,ನಾವು ರಾಜಕಾರಣದಲ್ಲಿ ಒಂದು ಸ್ಥಿರತೆ ಭದ್ದತೆ ಇಟ್ಟುಕೊಂಡು ಬಂದಂತವನು ನಾನು,ಅದ್ದರಿಂದ ನಮ್ಮ ಬದ್ದತೆಗೆ ತಕ್ಕಂತೆ ನಡೆದುಕೊಂಡಿದ್ದೇವೆ,
ಅ ಸಂತೋಷ ನನಗೆ ಇದೆ,ಇಂತಹ ಸನ್ನಿವೇಶದಲ್ಲಿ ಬಿಜೆಪಿ ಸೆರೋಕೆ ಹೊಗಿದಳೆ ಅಂದ್ರೆ ಇವತ್ತು ನನಗೆ ಎದೆಗೆ ಚೂರಿ ಹಾಕಿದ ಹಾಗೆ ಅಗಿದೆ,
ಈ ಕೆಲಸ ಮಾಡಬಾರದಿತ್ತು,ಮಗಳಾಗಿ ಇವಳು ಈ ರೀತಿ ಇವಳು ಇದಳೆ ಹೀಗೆ ನಡ್ಕೊಂತಳೆ ಅಂತ ಕನಸಲ್ಲೂ ಕೂಡ ಕಂಡವನಲ್ಲ,ಇದು ದೌರ್ಬಗ್ಯ .
ಇದು ಆಗಬಾರದಿತ್ತು.ಅದು ಏನೇ ಅದ್ರೂ ಕಾಂಗ್ರೆಸ್ ಅನ್ನು ಬಿಟ್ಟು ಹೊಗೊಲ್ಲ ಕಾಂಗ್ರೆಸ್ ಪರ ನಿಲ್ಲವೆ ಈ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಚುನಾವಣೆ ಮಾಡುತ್ತೇನೆ ಎಂದರು.
ಇದಕ್ಕೆ ಯಾರದ್ದೋ ತಂತ್ರ ಇದೇ, ಇದನ್ನ ಮಾಡಿರಬೇಕಾದ್ರೆ ಹಾಲಪ್ಪ ಅವರದ್ದೆ ಇರಬೇಕೇನೋ .ಇದು ನನಗೆ ಗೊತ್ತಾಗಿದ್ದೆ ಈಗ, ನಾನು ಕೂಡ ಮನ ಒಲಿಸುವ ಪ್ರಯತ್ನ ಮಾಡುತ್ತೇನೆ.ಎಂದು ಕಾಗೋಡು ತಿಮ್ಮಪ್ಪ ಹೇಳಿದ್ದಾರೆ,ಒಟ್ಟಿನಲ್ಲಿ ಅಪ್ಪ ಕಾಂಗ್ರೆಸ್ ಅಲ್ಲಿ ಇದ್ದರೂ ಸಹ ಅವರ ವಿರುದ್ಧವೆ ಬಿಜೆಪಿ ಸೇರಿರುವುದು ವಿಪರ್ಯಾಸವೆ ಸರಿ,