“ಶಾಸಕ ಗೋಪಾಲಕೃಷ್ಣ ಬೇಳೂರು ನಾಡಕಛೇರಿ ದಿಢೀರ್ ಭೇಟಿ’’
ರಿಪ್ಪನ್‌ಪೇಟೆ;-ಕೆರೆಹಳ್ಳಿ ಹೋಬಳಿ ಕಛೇರಿಗೆ ಇಂದು ಶಾಸಕ ಗೋಪಾಲಕೃಷ್ಣ ಬೇಳೂರು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸಮಯಕ್ಕೆ ಸರಿಯಾಗಿ ಕಛೇರಿಗೆ ಅಧಿಕಾರಿಗಳು ಬರುತ್ತಿಲ್ಲ ಮತ್ತು ಗ್ರಾಮ ಸಹಾಯಕ ಪ್ರವೀಣ್ ಎಂಬಾತನ ವಿರುದ್ಧ ಸಾರ್ವಜನಿಕರಿಂದ ಸಾಕಷ್ಟು ದೂರುಗಳಿವೆ ಎಲ್ಲಿದ್ದಾನೆ ಎಂದು ಪ್ರಶ್ನಿಸಿದಾಗ ಉಪತಹಶೀಲ್ದಾರ್ ಊಟಕ್ಕೆ ಹೋಗಿದ್ದಾನೆ ಬಂದಿಲ್ಲ ಎಂಬ ಉತ್ತರ ನಿಮ್ಮ ಊಟದ ಸಮಯ ಎಷ್ಟು ಈಗ ಎಷ್ಟು ಸಮಯ ಎಂದಾಗ ಗ್ರಾಮ ಲೆಕ್ಕಾಧಿಕಾರಿ ಹೊಸನಗರಕ್ಕೆ ಮುಟೇಷನ್ ದಾಖಲೆ ತರಲು ಕಳುಹಿಸಿದೆ ಎಂದು ಹೇಳಿ ಸಮಜಾಯಿಸಿ ನೀಡಿದರು.
ಶೇಷಪ್ಪ ಎಂಬುವವರು ಶಾಸಕರ ಬಳಿ ಬೆಳಗ್ಗೆಯಿಂದ ಗ್ರಾಮ ಸಹಾಯಕ ಬೆಳಗ್ಗೆಯಿಂದಲೂ ಕಛೇರಿಗೆ ಬಂದಿಲ್ಲ ಎಂದು ಹೇಳಿದಾಗ ಯಾರು ಯಾಕೆ ಬಂದಿಲ್ಲ ಎಂದು ಕೇಳಿ ಈ ರೀತಿಯಲ್ಲಿ ಸಾರ್ವಜನಿಕರ ದೂರುಗಳು ಬಂದರೆ ತಮ್ಮ ವಿರುದ್ದ ಕ್ರಮ ಜರುಗಿಸಬೇಕಾಗುತ್ತದೆಂದು ಎಚ್ಚರಿಕೆ ನೀಡಿದರು.
ಅಲ್ಲದೆ ಲೋಕೋಪಯೋಗಿ ಇಲಾಖೆಯ ಕಟ್ಟಡದಲ್ಲಿ ಹೋಬಳಿ ಕಛೇರಿ ನಡೆಸಲಾಗುತ್ತಿದ್ದು ಕಟ್ಟಡ ಶಿಥಿಲವಾಗಿದೆ ಎಂದು ಪತ್ರಕರ್ತರು ಗಮನಸೆಳೆಯುವುದರೊಂದಿಗೆ ಈ ಶಿಥಿಲ ಕಟ್ಟಡವನ್ನು ತೆರವುಗೊಳಿಸಿ ಇಲ್ಲಿಯೇ ಹೊಸಕಟ್ಟಡ ನಿರ್ಮಿಸಿ ಹೋಬಳಿ ಕಛೇರಿಯನ್ನು ಇಲ್ಲಿ ಮಾಡಿದರೆ ದೂರ ದೂರುಗಳಿಂದ ಬಂದು ಹೋಗುವವರಿಗೆ ತುಂಬ ಅನುಕೂಲವಾಗುತ್ತದೆಂದು ಹೇಳಿದಾಗ ಸ್ಪಂದಿಸಿದ ಶಾಸಕ ಗೋಪಾಲಕೃಷ್ನ ಬೇಳೂರು ತುರ್ತು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಹೋಬಳಿ ಕಛೇರಿಗೆ ಬರುವ ರೈತಾಪಿ ವರ್ಗಕ್ಕೆ ಮತ್ತು ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಾರ್ಯನಿರ್ವಹಿಸಿ ಎಂದು ಹೇಳಿ ಸಾರ್ವಜನಿಕರಿಂದ ದೂರುಗಳು ಬಂದರೇ ಸುಮ್ಮನಿರಲು ಸಾಧ್ಯವಿಲ್ಲ ಎಂದು ಉಪತಹಶೀಲ್ದಾರ್ ಹುಚ್ಚರಾಯಪ್ಪಗೆ ವಾರ್ನಿಂಗ್ ಮಾಡಿದರು.
ಈ ಸಂದರ್ಭದಲ್ಲಿ ಅರಸಾಳು ಗ್ರಾ.ಪಂ. ಮಾಜಿ ಅಧ್ಯಕ್ಷ ಉಮಾಕರ್,ಗ್ರಾಪಂ ಸದಸ್ಯರಾದ ಆಸೀಫ಼್ ಭಾಷಾಸಾಬ್ ಡಿ.ಈ.ಮಧುಸೂದನ್, ಗಣಪತಿ,ಮುಖಂಡರಾದ ಹೆಚ್.ಎನ್.ಉಮೇಶ್, ಶ್ರೀಧರ,
ರಾಜುಗೌಡ,ಡಾಕಪ್ಪಚಂದಾಳದಿಂಬ ,ಶಿವಪ್ಪ ವಡಾಹೊಸಳ್ಳಿ, ಉಪತಹಶೀಲ್ದಾರ್ ಹುಚ್ಚರಾಯಪ್ಪ, ಗ್ರಾಮಲೆಕ್ಕಾಧಿಕಾರಿಗಳಾದ ರೇಣುಕಯ್ಯ,ಇನ್ನಿತರು ಹಾಜರಿದ್ದರು.