ರಿಪ್ಪನ್‌ಪೇಟೆ ಗ್ರಾಪಂ ಪಿಡಿಓ ಚಂದ್ರಶೇಖರ್ ವರ್ಗಾವಣೆ|ನೂತನ ಪಿಡಿಓ ಯಾರು ಗೊತ್ತಾ…???PDO

ರಿಪ್ಪನ್‌ಪೇಟೆ : ಪಟ್ಟಣದ ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ಕಳೆದ ಹತ್ತು ವರ್ಷಗಳಿಂದ ಕಾರ್ಯ ನಿರ್ವಹಿಸಿದ್ದ ಚಂದ್ರಶೇಖರ್ ವರ್ಗಾವಣೆಯಾಗಿದ್ದು ಅವರ ಸ್ಥಾನಕ್ಕೆ ಶಿಕಾರಿಪುರ ತಾಲೂಕಿನ ತಾಳಗುಂದ ಗ್ರಾಪಂ ನಲ್ಲಿ ಪಿಡಿಓ ಆಗಿ ಕಾರ್ಯ ನಿರ್ವಹಿಸುತ್ತಿರುವ ಮಧುಸೂಧನ್ ಎನ್ ನೇಮಕವಾಗಿದ್ದಾರೆ.

 
ರಿಪ್ಪನ್‌ಪೇಟೆ ಗ್ರಾಪಂ ಗೆ ನೂತನವಾಗಿ ವರ್ಗಾವಣೆಗೊಂಡಿರುವ ಮಧುಸೂಧನ್ ಎನ್ ಮೂಲತಃ ರಿಪ್ಪನ್‌ಪೇಟೆ ಶಬರೀಶ ನಗರದವರಾಗಿದ್ದು ಈ ಹಿಂದೆ ಪಟ್ಟಣದ ಗ್ರಾಮ ಪಂಚಾಯಿತಿಯಲ್ಲಿ ಹಲವಾರು ವರ್ಷಗಳ ಸೇವೆ ಸಲ್ಲಿಸಿದ್ದರು.ವರ್ಗಾವಣೆಗೊಂಡಿರುವ ಪಿಡಿಓ ಚಂದ್ರಶೇಖರ್ ರವರಿಗೆ ಸದ್ಯಕ್ಕೆ ಯಾವುದೇ ಸ್ಥಳ ನಿಯೋಜನೆಯಾಗಿರುವುದಿಲ್ಲ.

ರಿಪ್ಪನ್‌ಪೇಟೆ ಗ್ರಾಮಪಂಚಾಯಿತಿಗೆ ರಾಷ್ಟ್ರ ಮಟ್ಟದ ಕೀರ್ತಿ ತಂದ ಪಿಡಿಒ ಚಂದ್ರಶೇಖರ್ 

ಕಳೆದ ಹತ್ತು ವರ್ಷಗಳ ಕಾಲ ರಿಪ್ಪನ್‌ಪೇಟೆ ಪಿಡಿಒ ಆಗಿ ಸೇವೆ ಸಲ್ಲಿಸಿದ ಉತ್ಸಾಹಿ ಯುವ ಪಿಡಿಒ ಚಂದ್ರಶೇಖರ್,ಅಧ್ಯಕ್ಷರು,ಸದಸ್ಯರ ವಿಶ್ವಾಸಗಳಿಸಿ ರಾಷ್ಟ ಮಟ್ಟದಲ್ಲಿ ರಿಪ್ಪನ್‌ಪೇಟೆಯ ಕೀರ್ತಿ ಸಾರಿದ್ದಾರೆ. ಇವರ ಅಧಿಕಾರ ಅವಧಿಯಲ್ಲಿ ,ಗ್ರಾಪಂ ವ್ಯಾಪ್ತಿಯ ಪ್ರತಿ ಗ್ರಾಮಕ್ಕು ಡಿಜಿಟಲ್ ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪನೆ (ಡಿಜಿಟಲ್ ರಿಚಾರ್ಜ್ ಜೊತೆ), ಹಸಿ ಕಸ / ಒಣ ಕಸ ಬೇರ್ಪಡಿಸಲು ಪ್ರತಿ ಮನೆಗೆ ಉಚಿತವಾಗಿ ಎರಡು ಬಣ್ಣದ ಬಕೇಟ್ ವಿತರಣೆ, ಅಲ್ಲದೆ,ರಾಜ್ಯ ಹಾಗೂ ಜಿಲ್ಲಾ ಮಟ್ಟದ  ಕಾರ್ಯಕ್ರಮಗಳ ಯಶಸ್ವಿ ಆಯೋಜನೆ ಇವರ ಶ್ರಮವನ್ನು ಸಾರುತ್ತದೆ.

ಮಾದರಿ ಘನ ತ್ಯಾಜ್ಯ ನಿರ್ವಹಣೆ ಘಟಕ ಸ್ಥಾಪನೆ:

ರಿಪ್ಪನ್‌ಪೇಟೆ ವ್ಯಾಪ್ತಿಯಲ್ಲಿ ರಾಜ್ಯಕ್ಕೆ ಮಾದರಿಯಾದ ಘನ ತ್ಯಾಜ್ಯ ನಿರ್ವಹಣೆ ಘಟಕ ಸ್ಥಾಪಿಸಿದ್ದ ಇವರು,ಪ್ರತಿ ಗ್ರಾಮ,ಶಾಲೆಗಳಲ್ಲಿ ತ್ಯಾಜ್ಯ ವಿಂಗಡಣೆಗೆ ಅರಿವು ಮೂಡಿಸುವ ಕ್ರಮಕೈಗೊಂಡು ಪರಿಸರ ಕಾಳಜಿ ಮೆರೆದಿದ್ದಾರೆ. ಈ ಘಟಕದ ವೀಕ್ಷಣೆಗೆ ರಾಜ್ಯ ಹಾಗೂ ರಾಷ್ಟ್ರದ ಹಿರಿಯ ಅಧಿಕಾರಿಗಳು,ವಿವಿಧ ಗ್ರಾಮಪಂಚಾಯಿತಿ ಸದಸ್ಯರು ಭೇಟಿ ನೀಡಿ,ತಮ್ಮ ವ್ಯಾಪ್ತಿಯಲ್ಲಿ ಇದೇ ಮಾದರಿಯ ಘಟಕ ಅಳವಡಿಕೆ ಕುರಿತು ಮಾಹಿತಿ ಸಂಗ್ರಹಿಸಿದ್ದಾರೆ. 


ಇವರ ಅಧಿಕಾರವಧಿಯಲ್ಲಿ ರಿಪ್ಪನ್‌ಪೇಟೆ ಗ್ರಾಮಪಂಚಾಯಿತಿಗೆ ದೀನ ದಯಾಳ್ ಉಪಾಧ್ಯಾಯ ಗ್ರಾಮ ಸಶಕ್ತಿಕರಣ ರಾಷ್ಟ್ರ ಪ್ರಶಸ್ತಿ, ಗಾಂಧಿ ಗ್ರಾಮ ಪುರಸ್ಕಾರ ಹಾಗೂ ಕರ್ನಾಟಕ ವಿಧಾನ ಪರಿಷತ್ ಪುರಸ್ಕಾರ ಸೇರಿದಂತೆ ಒಂದು ರಾಷ್ಟ್ರ ಹಾಗೂ ಎರಡು ರಾಜ್ಯ ಪ್ರಶಸ್ತಿ ಹಾಗೂ ಇನ್ನಿತರ ಪ್ರಶಸ್ತಿ ಗಳು ದೊರೆತಿದೆ.

ಗ್ರಾಮಪಂಚಾಯಿತಿಗೆ ಪಿಡಿಒಗಳಾಗಿ ಅಧಿಕಾರಿಗಳು ಬರುತ್ತಾರೆ /ಹೋಗುತ್ತಾರೆ.ಆದರೆ,ಅವರ ಆಡಳಿತ ಅವಧಿಯಲ್ಲಿ ಕೈಗೊಂಡ ಕ್ರಮಗಳು ಶಾಶ್ವತವಾಗಿ ಉಳಿಯುತ್ತವೆ.

Leave a Reply

Your email address will not be published. Required fields are marked *