Headlines

ರಿಪ್ಪನ್ ಪೇಟೆ ಜೆಸಿಐ ನಿಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರ ಹಾಗೂ ಛತ್ರಿ ವಿತರಣೆ

ರಿಪ್ಪನ್ ಪೇಟೆ ಜೆಸಿಐ ನಿಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರ ಹಾಗೂ ಛತ್ರಿ ವಿತರಣೆ

ರಿಪ್ಪನ್ ಪೇಟೆ: ಪಟ್ಟಣದ ಸೀನಿಯರ್ ಚೇಂಬರ್  ಇಂಟರ್ನ್ಯಾಷನಲ್ ವತಿಯಿಂದ ಅರಸಾಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರಗಳು ಮತ್ತು ಛತ್ರಿಗಳನ್ನು ವಿತರಿಸುವ  ಮೂಲಕ ಶಿಕ್ಷಣೋತ್ಸಾಹಕ್ಕೆ ಪ್ರೇರಣೆಯಾದರು

ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದ ತೀರ್ಥಹಳ್ಳಿ ಸೀನಿಯರ್ ಚೇಂಬರ್ ಜೆಸಿಐ ನಿಕಟಪೂರ್ವ ಅಧ್ಯಕ್ಷ ಹೆಚ್ ಎನ್. ಸೂರ್ಯನಾರಾಯಣ್ ಶಿಕ್ಷಣದ ಮಹತ್ವವನ್ನು ಒತ್ತಿ ಹೇಳಿ, ವಿದ್ಯಾರ್ಥಿಗಳು ಕಲಿಕೆಯಲ್ಲಿ ತೊಡಗಿಸಿಕೊಂಡು ಭವಿಷ್ಯ ನಿರ್ಮಾಣಕ್ಕೆ ಪ್ರಾಮುಖ್ಯತೆ ನೀಡಬೇಕೆಂದು ಹೇಳಿದರು.

ಸೀನಿಯರ್ ಚೇಂಬರ್ ರಿಪ್ಪನ್ ಪೇಟೆಯ ಅಧ್ಯಕ್ಷ ಪಿಯೂಸ್ ರೋಡ್ರಿಗಸ್ ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಪಾತ್ರರಾಗಬಹುದೆಂಬ ಸಂದೇಶ ನೀಡಿದರು.

ಕಾರ್ಯಕ್ರಮದಲ್ಲಿ ಸೀನಿಯರ್ ಚೇಂಬರ್  ಅಧ್ಯಕ್ಷರಾದ ಪಿಯೂಸ್ ರೋಡ್ರಿಗಸ್, ಕಾರ್ಯದರ್ಶಿ ಶ್ರೀಧರ್, ಖಜಾಂಚಿ ಅಜೇಶ್, ಉಪಾಧ್ಯಕ್ಷೆ ಲೇಖನ ಚಂದ್ರನಾಯಕ್ ಹಾಗೂ ಪದಾಧಿಕಾರಿಗಳಾದ ರಫಿ ರಿಪ್ಪನ್ ಪೇಟೆ, ವಿನಾಯಕ, ಗುಂಡಣ್ಣ, ನೇಮಣ್ಣ, ಪ್ರಭಾಕರ್ ಆಚಾರ್, ಅನೂಪ್ ಬಟ್ಟೆ ಮಲ್ಲಪ್ಪ, , ದಾನಪ್ಪ, ರಾಮಚಂದ್ರಬಂಡಿ, ಅಶ್ವಕ್, ಸಂಗೀತ ಶಾಜಿ ಮತ್ತು ಶಾಜಿ ಭಾಗವಹಿಸಿದ್ದರು.

ಶಾಲೆಯ ಮುಖ್ಯ ಶಿಕ್ಷಕಿ ಪವಿತ್ರ, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ರಾಜೋಜಿರಾವ್, ಸಹ ಶಿಕ್ಷಕರು, ಪೋಷಕರು ಹಾಗೂ ಊರಿನ ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಕಾರ್ಯದರ್ಶಿ ಶ್ರೀಧರ್ ನಿರೂಪಿಸಿ   ಸಬಾಸ್ಟಿನ್ ಮ್ಯಾಥ್ಯೂಸ್‌ ಸ್ವಾಗತಿಸಿ  ಶಿಕ್ಷಕರಾದ ನಾಗರಾಜ್ ವಂದಿಸಿದರು