Ripponpete | ಹೆಚ್ಚಿದ ಡೆಂಗ್ಯೂ ಭೀತಿ – ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್
ರಿಪ್ಪನ್‌ಪೇಟೆ : ಪಟ್ಟಣದ ಬಡಾವಣೆಯಲ್ಲಿ ಸಾಂಕ್ರಾಮಿಕ ರೋಗಗಳ ಭೀತಿಯ ಹಿನ್ನೆಲೆಯಲ್ಲಿ ಸೊಳ್ಳೆ ಗಳ ಹಾವಳಿ ನಿಯಂತ್ರಿಸಲು ಗ್ರಾಮಾಡಳಿತ ಹಾಗೂ ಆರೋಗ್ಯ ಇಲಾಖೆ ಭಾನುವಾರ ಫಾಗಿಂಗ್ ಸಿಂಪರಣೆ ಕೈಗೊಂಡಿದೆ.
ಪಟ್ಟಣದ ನಾಲ್ಕು ರಸ್ತೆಗಳಲ್ಲಿ ಫಾಗಿಂಗ್ ಯಂತ್ರ ಬಳಸಿ ಗ್ರಾಮ ಪಂಚಾಯತ್, ಆರೋಗ್ಯ ಇಲಾಖೆ ಮತ್ತು ಕಾರ್ಮಿಕರು ಬಡಾವಣೆಯ ಪ್ರತಿಯೊಂದು ಮನೆಗೆ ಭೇಟಿ ನೀಡಿ ಮನೆಯ ಒಳಗೆ ಮತ್ತು ಹೊರಗೆ ಫಾಗಿಂಗ್ ಕಾರ್ಯ ನಡೆಸಿದರು.
ಹೆಚ್ಚು ಸೊಳ್ಳೆ ಇರುವ ಪ್ರದೇಶದಲ್ಲಿ ಆಗಾಗ್ಗೆ ಫಾಗಿಂಗ್ ಮಾಡಲಾಗುವುದು, ಸೊಳ್ಳೆಗಳು ಹೆಚ್ಚು ಬಾದಿಸುತ್ತಿರುವ ಪಟ್ಟಣದ ಗಾಂಧಿನಗರ, ಮದೀನಾ ಕಾಲೋನಿ ಸೇರಿದಂತೆ ಇನ್ನಿತರ ಬಡಾವಣೆಯಲ್ಲಿ ಜನರ ಬೇಡಿಕೆ ಮೇರೆಗೆ ಫಾಗಿಂಗ್ ಮಾಡುವ ಕಾರ್ಯ ನಿರಂತರ ನಡೆಯುತ್ತಿದೆ ಎಂದು ಪಿಡಿಓ ಮಧುಸೂಧನ್ ತಿಳಿಸಿದರು..
ಪಟ್ಟಣದಲ್ಲಿ ಮೋಡ ಕವಿದ ವಾತಾವರಣ, ಚರಂಡಿಯಲ್ಲಿ ಕೊಳಚೆ ಶೇಖರಣೆಯಿಂದ ಸಾಂಕ್ರಾಮಿಕ ರೋಗಗಳ ಹರಡುವಿಕೆ ಹೆಚ್ಚಾಗುತ್ತಿದೆ. ಕೆಲ ಬಡಾವಣೆಯಲ್ಲಿ ಡೆಂಗ್ಯೂ ಪತ್ತೆಯಾದ ಹಿನ್ನೆಲೆಯಲ್ಲಿ ಅದನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಇಲಾಖೆಯ ಅಮೃತೇಶ್ ತಿಳಿಸಿದರು.