ಮನೆಯ ಹಿಂಭಾಗದ ಅಡಿಕೆ ತೋಟದಲ್ಲಿ ಗಾಂಜಾ ಬೆಳೆ – 2.50 ಲಕ್ಷ ಮೌಲ್ಯದ ಗಾಂಜಾ ಸಮೇತ ಆರೋಪಿ ವಶಕ್ಕೆ
ಗಾಂಜಾ ಗಿರಾಕಿಗಳಿಗೆ ಸಿಂಹಸ್ವಪ್ನವಾಗಿರುವ ಡಿವೈಎಸ್ಪಿ ಗಜಾನನ ವಾಮನ ಸುತರ
ತೀರ್ಥಹಳ್ಳಿ : ಮನೆಯ ಹಿಂಭಾಗ ಅಡಿಕೆ ತೋಟದಲ್ಲಿ ಗಾಂಜಾ ಗಿಡಗಳನ್ನು ಅಕ್ರಮವಾಗಿ ಬೆಳೆದಿದ್ದ ಆರೋಪಿಯ ಹೆಡೆಮುರಿ ಕಟ್ಟುವಲ್ಲಿ ತೀರ್ಥಹಳ್ಳಿ ಉಪವಿಭಾಗದ ಡಿವೈಎಸ್ಪಿ ಗಜಾನನ ವಾಮನ ಸುತಾರ ನೇತ್ರತ್ವದ ಸಿಬ್ಬಂದಿಗಳ ತಂಡ ಯಶಸ್ವಿಯಾಗಿದೆ.
ತೀರ್ಥಹಳ್ಳಿ ತಾಲೂಕಿನ ಹುತ್ತಳ್ಳಿ ಗ್ರಾಮದ ಗುರುಮೂರ್ತಿ ಬಂಧಿತ ಆರೋಪಿಯಾಗಿದ್ದು 2.50000 ಲಕ್ಷ ಮೌಲ್ಯದ ಹಸಿ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ.
ಹುತ್ತಳ್ಳಿ ಗ್ರಾಮದ ವಾಸಿ ಗುರುಮೂರ್ತಿಯು ತನ್ನ ವಾಸದ ಮನೆಯ ಹಿಂಭಾಗದ ಅಡಿಕೆ ತೋಟದಲ್ಲಿ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆದಿದ್ದಾನೆ ಎಂದು ಬಂದ ಖಚಿತ ಮಾಹಿತಿಯ ಮೇರೆಗೆ ಎಸ್ ಪಿ ಮಿಥುನ್ ಕುಮಾರ್ ಜಿ.ಕೆ ಐಪಿಎಸ್, ಎಎಸ್ಪಿ ಅನಿಲ್ ಕುಮಾರ್ ಭೂಮಾರೆಡ್ಡಿ, ಕಾರಿಯಪ್ಪ ಎ.ಜಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2 ಶಿವಮೊಗ್ಗ ಜಿಲ್ಲೆರವರ ಮಾರ್ಗದರ್ಶನದಲ್ಲಿ ತೀರ್ಥಹಳ್ಳಿ ಉಪವಿಭಾಗದ ಡಿವೈಎಸ್ಪಿ ಗಜಾನನ ವಾಮನ ಸುತರ ನೇತೃತ್ವದ ಸಿಬ್ಬಂಧಿಗಳನ್ನೊಳಗೊಂಡ ತಂಡವು ಸ್ಥಳಕ್ಕೆ ದಾಳಿ ನಡೆಸಿ ಅಡಿಕೆ ಗಿಡಗಳ ಮದ್ಯೆ ಬೆಳೆದಿದ್ದ ಅಂದಾಜು ಮೌಲ್ಯ 2,50,000/- ರೂಗಳ 9 ಕೆಜಿ 524 ಗ್ರಾಂ ತೂಕದ ಒಟ್ಟು 14 ಹಸಿ ಗಾಂಜಾ ಗಿಡಗಳನ್ನು ಅಮಾನತ್ತು ಪಡಿಸಿಕೊಂಡು ಆರೋಪಿತನ ವಿರುದ್ಧ ತೀರ್ಥಹಳ್ಳಿ ಪೊಲೀಸ್ ಠಾಣೆ ಗುನ್ನೆ ಸಂಖ್ಯೆಃ 0148/2024 ಕಲಂ 8C, 20 (a) (i) NDPS ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.
ಗಾಂಜಾ ಗಿರಾಕಿಗಳಿಗೆ ಸಿಂಹಸ್ವಪ್ನವಾಗಿರುವ ಡಿವೈಎಸ್ಪಿ ಗಜಾನನ ವಾಮನ ಸುತರ
ತೀರ್ಥಹಳ್ಳಿ ಉಪವಿಭಾಗದ ವ್ಯಾಪ್ತಿಯ ಗಾಂಜಾ ಗಿರಾಕಿಗಳಿಗೆ ಸಿಂಹ ಸ್ವಪ್ನವಾಗಿರುವ ಡಿವೈಎಸ್ಪಿ ಗಜಾನನ ವಾಮನ ಸುತರ ಪ್ರಸಕ್ತ ವರ್ಷದಲ್ಲಿ 30 ಕ್ಕೂ ಅಧಿಕ ಪ್ರಕರಣಗಳನ್ನು ಪತ್ತೆ ಹಚ್ಚಿ ಗಾಂಜಾ ಗಿರಾಕಿಗಳ ಹೆಡೆಮುರಿ ಕಟ್ಟಿದ್ದಾರೆ.
ಕೊಲೆ, ದರೋಡೆ, ಅತ್ಯಾಚಾರ, ಅಪಘಾತ ಸೇರಿದಂತೆ ಹಲವು ಅಪರಾಧ ಪ್ರಕರಣಗಳಲ್ಲಿ ಆರೋಪಿಗಳು ಗಾಂಜಾ ಸೇವಿಸಿ ಕೃತ್ಯವೆಸಗಿರುವುದು ಸಾಬೀತಾಗಿದೆ. ಅಪರಾಧ ಕೃತ್ಯಗಳಿಗೆ ಪ್ರೇರೇಪಿಸುವ ಗಾಂಜಾ ಚಟಕ್ಕೆ ಬಿದ್ದ ಯುವ ಸಮೂಹ ಹಾದಿ ತಪ್ಪುತ್ತಿರುವುದು ಸ್ಪಷ್ಟವಾಗಿದೆ.
ಗಾಂಜಾ ಪ್ರಕರಣಗಳಲ್ಲಿ ಇತ್ತೀಚಿನವರೆಗೂ ಬರೀ ಬಳಕೆದಾರರನ್ನಷ್ಟೇ ಹಿಡಿದು ಕೇಸು ಹಾಕಲಾಗುತಿತ್ತು ಕಳೆದೊಂದು ವರ್ಷದಿಂದ ಡಿವೈಎಸ್ಪಿ ಗಜಾನನ ವಾಮನ ಸುತರ ನೇತ್ರತ್ವದಲ್ಲಿ ಕಿಂಗ್‌ಪಿನ್‌ಗಳ ಬೆನ್ನತ್ತಿದೆ. ಬಳಕೆದಾರರಿಂದ ಒಂದು ಮತ್ತು ಎರಡನೇ ಹಂತದ ಪೂರೈಕೆದಾರರ ಮಾಹಿತಿ ಪಡೆದು ಅವರನ್ನು ವಶಕ್ಕೆ ಪಡೆದು ಕಿಂಗ್‌ಪಿನ್‌ಗಳನ್ನು ಪತ್ತೆ ಹಚ್ಚಿ ಹೆಡೆಮುರಿ ಕಟ್ಟಲು ಇಲಾಖೆ ಮುಂದಾಗಿದೆ.