ನಿವೃತ್ತ ಯೋಧನ ಮೇಲೆ ಗ್ರಾಪಂ ಉಪಾಧ್ಯಕ್ಷನ ದೌರ್ಜನ್ಯ – ಜೂ.18 ಕ್ಕೆ ಭಾರಿ ಪ್ರತಿಭಟನೆ
ಹೊಸನಗರ : ನಿವೃತ್ತ ಯೊಧರೊಬ್ಬರ ಮೇಲೆ ಕರಿಮನೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರೊಬ್ಬರು ದೌರ್ಜನ್ಯ ನಡೆಸಿದ್ದಾರೆಂದು ಆರೋಪಿಸಿ ಜೂನ್ .18 ರ ಮಂಗಳವಾರ ಬೆಳಿಗ್ಗೆ11 ಗಂಟೆಗೆ ನಿಲ್ಸ್ ಕಲ್ ಗ್ರಾಪಂ ಆವರಣದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಕರಿಮನೆ ಗ್ರಾಮದ ನಿವೃತ್ತ ಯೋಧ ಹಾಗೂ ಜೆಡಿಎಸ್ ಮುಖಂಡರಾದ ರಾಮಪ್ಪ ಎಂಬುವವರ ಮೇಲೆ ಕರಿಮನೆ ಉಪಾದ್ಯಕ್ಷರಾದ ರಮೇಶ್ ಎಂಬುವವರು ದೌರ್ಜನ್ಯ,ಹಾಗು ಆನಾಗರೀಕ ವರ್ತನೆ ನಡೆದಿದ್ದಾರೆಂದು ಆರೋಪಿಸಿ ನಿವೃತ್ತ ಸೈನಿಕರ ಸಂಘ , ಜೆಡಿಎಸ್ ಹಾಗೂ ಬಿಜೆಪಿ ಪಕ್ಷದ ವತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕ್ ಜೆಡಿಎಸ್ ಅಧ್ಯಕ್ಷ ಎನ್ ವರ್ತೇಶ್ ತಿಳಿಸಿದ್ದಾರೆ.
ಸುಮಾರು ಒಂದು ವರ್ಷದ ಹಿಂದೆ ಗ್ರಾಮ ಪಂಚಾಯತಿ ಬೆಳೆಯಿಸಿ ಪೋಷಿಸಿದ ಸುಮಾರು 40 ಲಕ್ಷ ಬೆಲೆಬಾಳುವ ಆಕೇಶಿಯ ಮರಗಳನ್ನು ಕೆಲವರು ಅಕ್ರಮವಾಗಿ ಮಾರಾಟ ಮಾಡಲು ಹೊರಟ್ಟಿದ್ದನ್ನು ನಿವೃತ್ತ ಯೋಧ ರಾಮಪ್ಪ ಸೇರಿದಂತೆ ಗ್ರಾಮಸ್ಥರು ಪ್ರತಿಭಟಿಸಿ ಅಕ್ರಮವೆಸಗಿದ್ದವರ ವಿರುದ್ದ ದೂರು ದಾಖಲಿಸಿದ್ದರು.ಈ ಹಿನ್ನಲೆಯಲ್ಲಿ ನಿವೃತ ಯೋಧ ರಾಮಪ್ಪ ರವರಿಗೆ ಕಳೆದೊಂದು ವರ್ಷದಿಂದ ಕಿರುಕುಳ ನೀಡುತ್ತಿರುವ ಗ್ರಾಪಂ ಉಪಾಧ್ಯಕ್ಷರ ವಿರುದ್ದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.