ಅನೈತಿಕ ಸಂಬಂಧ | ವಿವಾಹಿತ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ
ಮಹಿಳೆಯೊಬ್ಬರನ್ನು ವ್ಯಕ್ತಿಯೊಬ್ಬ ಆಯುಧದಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ವರದಿಯಾಗಿದ್ದು ಈ ಬಗ್ಗೆ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸವಿತ(35) ಎಂಬ ವಿವಾಹಿತ ಮಹಿಳೆಯ ಮೇಲೆ ಶಿವನಾಯ್ಕ್(35) ಎಂಬ ವ್ಯಕ್ತಿ ವಡ್ಡಿನಕೊಪ್ಪದಲ್ಲಿ ಮನೆಗೆ ನುಗ್ಗಿ ಕುತ್ತಿಗೆಯನ್ನ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಬಗ್ಗೆ ವರದಿಯಾಗಿದೆ. ಅನೈತಿಕ ಸಂಬಂದವೇ ಘಟನೆಗೆ ಕಾರಣ ಎನ್ನಲಾಗುತ್ತಿದೆ.
ಆರೋಪಿ ಶಿವನಾಯ್ಕ್ ಮತ್ತು ಗಾಯಾಳು ಮಹಿಳೆ ಸವಿತಾ ರನ್ನು ಮೆಗ್ಗಾನ್ ಗೆ ದಾಖಲಿಸಲಾಗಿದೆ.
ಘಟನೆಯ ಹಿನ್ನಲೆ :
ಸವಿತ ಮತ್ತು ಶಿವನಾಯ್ಕ್ ಇಬ್ಬರಿಗೂ ಮದುವೆಯಾಗಿದೆ. ಒಂದೇ ಕಡೆ ಕೆಲಸ ಮಾಡುವಾಗ ಇಬ್ಬರೂ ಸಂಪರ್ಕಕ್ಕೆ ಬಂದಿದ್ದಾರೆ.ಅನೇಕ ಬಾರಿ ಹಿರಿಯರು ಬುದ್ದಿವಾದ ಹೇಳಿದರೂ ಇಬ್ವರೂ ತಮ್ಮ ಸಂಸಾರವನ್ನ ನೋಡಿಕೊಳ್ಳಲು ಸಾಧ್ಯವಾಗಿರಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಸವಿತ ಶಿವನಾಯ್ಕ್ ರನ್ನ ದೂರ ಮಾಡಿದ್ದರಿಂದ ಇಂದು ಮನೆಗೆ ನುಗ್ಗಿ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ.
ತುಂಗನಗರ ಪೊಲೀಸ್ ಠಾಣೆಯಲ್ಲಿ 307 ಪ್ರಕರಣ ದಾಖಲಾಗಿದೆ.