Headlines

Ripponpete | ಪರಿಷತ್ ಚುನಾವಣೆ ಮತದಾನ ಮಾಡಿದ ಮಾಜಿ ಸಚಿವ ಹರತಾಳ ಹಾಲಪ್ಪ

Ripponpete | ಪರಿಷತ್ ಚುನಾವಣೆ ಮತದಾನ ಮಾಡಿದ ಮಾಜಿ ಸಚಿವ ಹರತಾಳ ಹಾಲಪ್ಪ

ಪರಿಷತ್ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗಳು ಮೊದಲ ಪ್ರಾಶಸ್ತ್ಯದ ಮತಗಳಲ್ಲಿ ಗೆಲ್ಲಲಿದ್ದಾರೆ – ಆರಗ ಜ್ಞಾನೇಂದ್ರ 

ರಿಪ್ಪನ್‌ಪೇಟೆ : ಇಂದು ನಡೆದ ನೈರುತ್ಯ ಪದವೀಧರ ಹಾಗೂ ಶಿಕ್ಷಕರ  ಕ್ಷೇತ್ರ ಚುನಾವಣೆಯಲ್ಲಿ ರಿಪ್ಪನ್‌ಪೇಟೆ ಬೂತ್ ಸಂಖ್ಯೆ ೪೪ ರಲ್ಲಿ  ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಹರತಾಳು ಹಾಲಪ್ಪನವರು ಮೊದಲ ಮತ ಚಲಾಯಿಸಿದರು.


ನಂತರ ಮಾಧ್ಯಮದವರೊಂದಿಗೆ ಮಾತನಾಡಿ  ಪದವೀಧರ ಮತ್ತು ಶಿಕ್ಷಕರ  ಪ್ರಾಶಸ್ತö್ಯದ ಮತದಾನ ಮತ್ತು ಎರಡನೇ  ಮತದಾನಕ್ಕೆ  “ಗುರುತು’’ ಮಾಡುವ ವಿಧಾನದಲ್ಲಿ ಮತದಾರರಲ್ಲಿ ಗೊಂದಲವಿದೆ ಇದಕ್ಕೆ ಸರಿಯಾದ ತರಬೇತಿ ನೀಡಬೇಕಾಗಿತು. ಸರ್ಕಾರ ಮುಂದಿನ ಭಾರಿಯಲ್ಲಿ  ಪದವೀಧರರ ಮತ್ತು ಶಿಕ್ಷಕರ ಚುನಾವಣೆಯಲ್ಲಿನ ಮತದಾನಕ್ಕೆ  ಮತದಾರರಿಗೆ ತರಬೇತಿ ನೀಡುವ ಪದ್ದತಿಯನ್ನು ಜಾರಿಗೆ ತರಬೇಕು  ಎಂದು ಸರ್ಕಾರವನ್ನು ಆಗ್ರಹಿಸಿದರು.

ಈ ಭಾರಿಯಲ್ಲಿ ಚುನಾವಣೆಯಲ್ಲಿ ಎನ್.ಡಿ.ಎ,ಮೈತ್ರಿ ಅಭ್ಯರ್ಥಿಗಳಾದ ಡಾ.ಧನಂಜಯಸರ್ಜಿ ಮತ್ತು ಎಸ್.ಎಲ್.ಭೋಜೆಗೌಡರು ಗೆಲುವಿ ನಿಶ್ಚಿತವಾಗಿದ್ದು  ನಮ್ಮ ಚುನಾವಣಾ ಪ್ರವಾಸದಲ್ಲಿ ಉತ್ತಮ ಸ್ಪಂದನೆ ದೊರಕಿದು ನೋಡಿದರೆ  ಮತದಾರರ ಒಲವು ಪಕ್ಷದ ಪರವಾಗಿರುವುದು ನಮಗೆ  ಹೆಚ್ಚು ಬಹುಮತ ಬರುವುದರಲ್ಲಿ ಸಂದೇಹವಿಲ್ಲ ಎಂದು ಹೇಳಿ ಕಾರ್ಯಕರ್ತರು ಹಗಲು ರಾತ್ರಿ ಎಲ್ಲದೇ ಮತದಾರರನ್ನು ತಲುವು ಮೂಲಕ ಸತತ ಪ್ರಯತ್ನ  ಫಲವೇ ಪಕ್ಷದ ಗೆಲುವಿಗೆ ಸಹಕಾರಿಯಾಗುವುದೆಂದು ಹೇಳಿ ಕಾರ್ಯಕರ್ತರನ್ನು  ಶ್ಲಾಘಿಸಿದರು.

ಪರಿಷತ್ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗಳು ಮೊದಲ ಪ್ರಾಶಸ್ತ್ಯದ ಮತಗಳಲ್ಲಿ ಗೆಲ್ಲಲಿದ್ದಾರೆ – ಆರಗ ಜ್ಞಾನೇಂದ್ರ 


ನೈಋತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಿರುವ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಗಳು ಈ ಚುನಾವಣೆಯಲ್ಲಿ ಮೊದಲ ಪ್ರಾಶಸ್ತ್ಯದ ಮತಗಳಿಂದ ಗೆಲುವು ಸಾಧಿಸುವುದು ನಿಶ್ಚಿತ ಎಂದು ಮಾಜಿ ಗೃಹ ಸಚಿವ ಹಾಗೂ ಶಾಸಕ ಆರಗ ಜ್ಞಾನೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣದ ಪರಿಷತ್ ಚುನಾವಣೆಯ ಮತಗಟ್ಟೆಗೆ ಭೇಟಿ ನೀಡಿ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿ ನಂತರ ಮಾತನಾಡಿದ ಅವರು ಮೈತ್ರಿ ಅಭ್ಯರ್ಥಿಗಳಾದ ಡಾ ಧನಂಜಯ್ ಸರ್ಜಿ ಹಾಗೂ ಬೋಜೆಗೌಡ ಪ್ರಥಮ ಪ್ರಾಶಸ್ತ್ಯದ ಮತಗಳಲ್ಲಿಯೇ ಗೆಲ್ಲುವ ವಿಶ್ವಾಸವಿದೆ . ಚಿಂತಕರ ಚಾವಡಿಯಾದ ವಿಧಾನ ಪರಿಷತ್ ಗೆ ಬೋಜೆಗೌಡ ಹಾಗೂ ಡಾ ಧನಂಜಯ್ ಸರ್ಜಿ ರವರಂತಹ ವಿಚಾರವಂತರು ಆಯ್ಕೆಯಾದರೆ ಉತ್ತಮ ಕಾನೂನುಗಳನ್ನು ಜಾರಿಗೆ ತರಲು ಸಾಧ್ಯ ಎಂದರು.

ಈ ಸಂಧರ್ಭದಲ್ಲಿ ಬಿಜೆಪಿ ಮಹಾಶಕ್ತಿ ಕೇಂದ್ರದ ಆಧ್ಯಕ್ಷ  ಎನ್.ಸತೀಶ್, ಪ್ರಧಾನ ಕಾರ್ಯದರ್ಶಿ ಸುಂದರೇಶ್ ,ತಾಲ್ಲೂಕ್ ಬಿಜೆಪಿ ಮಾಜಿ ಆಧ್ಯಕ್ಷ ಗಣಪತಿ ಬೆಳಗೋಡು,ಬಿಜೆಪಿ ಮುಖಂಡರಾದ ಎಂ.ಬಿ.ಮಂಜುನಾಥ,ಎಂ.ಸುರೇಶ್‌ಸಿಂಗ್, ಪಿ ರಮೇಶ್ , ನಾಗಾರ್ಜುನ ಸ್ವಾಮಿ, ಸೋಮಶೇಖರ್, ಹೆಚ್.ಎಂ.ರಾಘವೇಂದ್ರ, ಪರಮೇಶ್ ಕೆಂಚನಾಲ,ಜಿ.ಡಿ.ಮಲ್ಲಿಕಾರ್ಜುನ,ಮುರುಳಿಧರ ಕೆರೆಹಳ್ಳಿ,ಲೀಲಾ ಶಂಕರ್ ,ನಾಗರತ್ನ ದೇವರಾಜ್ ಹಾಗೂ ಇನ್ನಿತರರು ಹಾಜರಿದ್ದರು.

Leave a Reply

Your email address will not be published. Required fields are marked *