KSRTC ಬಸ್ ನಲ್ಲಿ ಸೀಟಿಗಾಗಿ ಮಹಿಳೆಯರಿಬ್ಬರ ಜಗಳ – ಪೊಲೀಸರ ಮಧ್ಯಸ್ಥಿಕೆಯಿಂದ ಬಗೆಹರಿದ ಸಮಸ್ಯೆ..!!!
ರಾಜ್ಯ ಸರ್ಕಾರ ಶಕ್ತಿ ಯೋಜನೆಯಡಿಯಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಕಲ್ಪಿಸಿಕೊಟ್ಟಿದ್ದು ಜನಪ್ರಿಯ ಕಾರ್ಯಕ್ರಮವಾಗಿ ಹೊರಹೊಮ್ಮಿದೆ ಆದರೆ ಕೆಲವೊಂದು ಘಟನೆಗಳು ಯೋಜನೆಯ ಮೂಲ ಧ್ಯೇಯಕ್ಕೆ ಪೆಟ್ಟು ನೀಡುವಂತಿರುತ್ತದೆ.
ಹೌದು ಕೆಎಸ್ಆರ್ಟಿಸಿ ಬಸ್ನಲ್ಲಿ ಸೀಟಿಗಾಗಿ ಮಹಿಳೆಯರಿಬ್ಬರು ಮಾಡಿಕೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ನಡೆದಿದೆ. ಮಹಿಳೆಯರ ಗಲಾಟೆ ಜೋರಾದ ಹಿನ್ನೆಲೆಯಲ್ಲಿ ಸಾಗರದಿಂದ ಶಿವಮೊಗ್ಗಕ್ಕೆ ಹೊರಟ ಬಸ್ ನೇರ ಪೋಲಿಸ್ ಠಾಣೆ ಬಳಿ ಹೋಗಿದೆ.
ನಿನ್ನೆ ಸಂಜೆ 7:30ಕ್ಕೆ ಘಟನೆ ನಡೆದಿದ್ದು, ಸೀಟ್ಗಾಗಿ ಬಸ್ನಲ್ಲಿ ಮಹಿಳೆಯರು ಮಾಡಿದ ಗಲಾಟೆಗೆ ಬೇಸತ್ತು ಬಸ್ ಚಾಲಕ ಪೊಲೀಸ್ ಠಾಣೆಗೆ ಬಸ್ ತಲುಪಿಸಿದ್ದಾನೆ.
ಕೊನೆಗೆ ಸಾಗರ ನಗರ ಪೊಲೀಸ್ ಠಾಣೆಯ ಮಹಿಳಾ ಸಿಬ್ಬಂದಿಯ ಮಧ್ಯಸ್ಥಿಕೆಯಲ್ಲಿ ಪ್ರಕರಣ ಸುಖಾಂತ್ಯ ಕಂಡಿದೆ. ಗಲಾಟೆ ಮಾಡುತ್ತಿದ್ದ ಎರಡು ಕಡೆಯವರನ್ನು ಬಸ್ ನಿಂದ ಇಳಿಸಿದ ಪೊಲೀಸರು, ಬಳಿಕ ಬಸ್ ಚಾಲನೆಗೆ ಅವಕಾಶ ನೀಡಿದ್ದಾರೆ. ಗಲಾಟೆ ಮಾಡಿದವರನ್ನು ಕೆಳಗೆ ಇಳಿಸಿ ಚಾಲಕ ಶಿವಮೊಗ್ಗ ಕಡೆಗೆ ಬಸ್ ಚಲಾಯಿಸಿದ್ದಾರೆ.
ಇನ್ನು, ಘಟನೆಯನ್ನು ನೋಡಿದ ಸ್ಥಳೀಯರು ಯಾತಕ್ಕಾಗಿ ಹೋರಾಟ, ಸೀಟಿಗಾಗಿ ಹೋರಾಟ ಅಂತ ಘೋಷಣೆ ಕೂಗಿದ್ದಾರೆ.