ಮಚ್ಚಿನಿಂದ ನಾಯಿಯನ್ನು ಕೊಲ್ಲಲು ಹೋಗಿ ಎದುರುಮನೆ ಅಜ್ಜಿಯನ್ನು ಹತ್ಯೆಗೈದ ಯುವಕ – ನಡೆದಿದ್ದೇನು..??? Crime News
ಯುವಕನೊಬ್ಬ ನಾಯಿಯನ್ನು ಕೊಲ್ಲಲು ಹೋಗಿ ಎದುರುಗಡೆ ಮನೆಯ ಅಜ್ಜಿಯನ್ನು ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ ವಿಚಿತ್ರ ಘಟನೆಯೊಂದು ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ನಡೆದಿದೆ.
ಭದ್ರಾವತಿಯ ಅರಳಿಹಳ್ಳಿ ಗ್ರಾಮ ಮಂಜುನಾಥ ಎದುರು ಮನೆಯ ಅಜ್ಜಿಯನ್ನೇ ಕೊಂದಿರುವ ಆರೋಪಿಯಾಗಿದ್ದಾನೆ.
ಯುವಕನ ಮನೆಯ ಬಳಿ ಬಂದಿದ್ದ ನಾಯಿಯನ್ನು ಕೊಲ್ಲಲು ಮಚ್ಚಿನ ಸಮೇತನಾಗಿ ನಿನ್ನೆಯಿಂದಲೇ ಓಡಾಡುತ್ತಿದ್ದನಂತೆ. ಆಗ ಗ್ರಾಮದ ಕೆಲವರು ಯುವಕನಿಗೆ ಥಳಿಸಿ ಬುದ್ದಿಹೇಳಿ ಮನೆಗೆ ಕಳಿಸಿದ್ದರು ಎನ್ನಲಾಗುತ್ತಿದೆ.
ಈ ವಿಚಾರವಾಗಿ ಮಂಜುನಾಥ್ ನ ತಮ್ಮ ಮತ್ತು ಆತನ ಪತ್ನಿ ಜಗಳವಾಡಿಕೊಂಡು ಮನೆ ಬಿಟ್ಟು ಹೋಗಿದ್ದಾರೆ. ಒಬ್ಬನೇ ಇದ್ದ ಮಂಜುನಾಥ್ ನಿಗೆ ಇಂದು ಮತ್ತೆ ನಾಯಿಯ ದರ್ಶನವಾಗಿದೆ. ನಾಯಿಯನ್ನು ಕಡಿಯಲು ಕತ್ತಿ ತೆಗೆದುಕೊಂಡಿದ್ದಾನೆ. ನಾಯಿ ತಪ್ಪಿಸಿಕೊಂಡು ಓಡಿ ಹೋಗಿದೆ.
ಈ ಸಂಧರ್ಭದಲ್ಲಿ ಮಂಜುನಾಥನ ಮನೆ ಎದುರು ಇರುವ ಅಜ್ಜಿ ಫಜಲುನ್ನಿಸ್ಸಾ (70) ಎಂಬವರು ವಿಷಯ ಗೊತ್ತಿಲ್ಲದೇ ತಮ್ಮ ಪಾಡಿಗೆ ತಾವು ಮನೆಯೊಳಗೆ ಹೋಗುತ್ತಿದ್ರು. ಈ ಮಂಜುನಾಥನಿಗೆ ಏನನ್ನಿಸಿತೋ ಏನೋ ಹಿಂಬದಿಯಿಂದ ಅಜ್ಜಿಮನೆಗೆ ನುಗ್ಗಿದ ಆತ, ವೃದ್ಧೆಯ ತಲೆಗೆ ಮಚ್ಚಿನಿಂದ ಹಲ್ಲೆ ಮಾಡಿದ್ದಾರೆ. ಪರಿಣಾಮ ಅವಳು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ.
ಇನ್ನೂ ಘಟನೆ ಬಗ್ಗೆ ಮಾಹಿತಿ ಇಲ್ಲದ ಪೊಲೀಸರು ಸ್ಥಳಕ್ಕೆ ಬಂದು ತನಿಖೆ ಆರಂಭಿಸಿ ವಿಚಾರಣೆ ಮಾಡಿದ್ದಾರೆ. ಆಗ ಮಂಜುನಾಥನ ಮಾನಸಿಕತೆಯ ಬಗ್ಗೆ ಗೊತ್ತಾಗಿದ್ದು, ಅಲ್ಲದೆ ಆತವೆಸಗಿದ ಕೃತ್ಯದ ಬಗ್ಗೆ ತಿಳಿದುಬಂದಿದೆ.ಯುವಕನು ಮಾನಸಿಕ ವೈದ್ಯರಿಂದ ತಪಾಸಣೆಗೊಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ ದು ತಿಳಿದುಬಂದಿದೆ.
ಆದರೆ ಇತ್ತೀಚೆಗೆ ಔಷಧಿಯನ್ನು ಸೇವಿಸುವುದನ್ನ ನಿಲ್ಲಿಸಿದ್ದ. ಮೆಡಿಸನ್ ಬಿಟ್ಟಿದ್ದರಿಂದ ಆತ ಮತ್ತೆ ಅಸ್ವಸ್ಥತೆಯಿಂದ ವರ್ತಿಸುತ್ತಿದ್ದ. ವೃದ್ಧೆಯನ್ನು ಕೊಲೆ ಮಾಡಿದ ಆತ ಅಲ್ಲಿಯೇ ಸರ್ಕಲ್ ಬಳಿ ನಿಂತಿದ್ದ. ಆತನ ಮೈಮೇಲೆಲ್ಲಾ ರಕ್ತವಾಗಿರುವುದನ್ನ ಗಮನಿಸಿದ ಗ್ರಾಮಸ್ಥರು ಆತನಿಗೆ ಹೊಡೆದು ಏನು ಮಾಡಿದೆ ಎಂದು ಕೇಳಿದ್ದಾರೆ. ಏಟು ಬಿದ್ದ ಮೇಲೆ ನಡೆದ ಘಟನೆಯನ್ನು ಹೇಳಿದ್ದಾನೆ.
ಸ್ಥಳೀಯರು ಪೊಲೀಸರಿಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ಸದ್ಯ ಆರೋಪಿಯನ್ನ ಬಂಧಿಸಿದ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.