Ripponpet | ಸರ್ಕಾರಿ ಆಸ್ಪತ್ರೆಯಲ್ಲಿ ಗ್ರಾಪಂ ಅಧ್ಯಕ್ಷೆಯ ಮೇಲೆ ಹಲ್ಲೆ – ಆರೋಪಿಯ ಬಂಧನ
ರಿಪ್ಪನ್ಪೇಟೆ : ಪಟ್ಟಣದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆಯಾದ ಧನಲಕ್ಷ್ಮಿ ಗಂಗಾಧರ್ ರವರ ಮೇಲೆ ಯುವಕನೊಬ್ಬ ಹಲ್ಲೆ ನಡೆಸಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.
ಅರಸಾಳು ಗ್ರಾಪಂ ವ್ಯಾಪ್ತಿಯ ಕಲ್ಲುಹಳ್ಳ ಗ್ರಾಮದ ಸುನೀಲ್ (34) ಬಂಧಿತ ಆರೋಪಿಯಾಗಿದ್ದಾನೆ.
ನಡೆದಿದ್ದೇನು ..??
ಜಮೀನು ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಕಲ್ಲುಹಳ್ಳ ಗ್ರಾಮದ ಪುಟ್ಟಪ್ಪ ಹಾಗೂ ಗ್ರಾಪಂ ಅಧ್ಯಕ್ಷೆ ಧನಲಕ್ಷ್ಮಿ ರವರ ಪತಿ ಗಂಗಾಧರ್ ರವರ ನಡುವೆ ಮನಸ್ತಾಪವಿದ್ದು ಶನಿವಾರ ಗಂಗಾಧರ್ ರವರು ಜಮೀನಿಗೆ ತೆರಳಿದಾಗ ಪುಟ್ಟಪ್ಪ ಏಕಾಏಕಿ ಗಂಗಾಧರ್ ಮೇಲೆ ಹಲ್ಲೆ ನಡೆಸಿದ್ದಾರೆ ಸ್ಥಳೀಯರು ಜಗಳವನ್ನು ಬಿಡಿಸಿ ಗಂಗಾಧರ್ ರವರನ್ನು ರಿಪ್ಪನ್ಪೇಟೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದಾರೆ.
ಈ ಸಂಧರ್ಭದಲ್ಲಿ ಪತಿಯ ಆರೋಗ್ಯವನ್ನು ವಿಚಾರಿಸಲು ಆಸ್ಪತ್ರೆಗೆ ತೆರಳಿದ್ದ ಧನಲಕ್ಷ್ಮಿರವರ ಮೇಲೆ ಪುಟ್ಟಪ್ಪನವರ ಪುತ್ರ ಸುನೀಲ್ ಎಂಬಾತ ಆಸ್ಪತ್ರೆಯಲ್ಲಿ ವೈದ್ಯರ ಎದುರಲ್ಲೇ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾನೆ.
ಘಟನೆಗೆ ಸಂಬಂಧಿಸಿದಂತೆ ರಿಪ್ಪನ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.