Ripponpete | ಹಾಡಹಗಲೇ ವಿನಾಯಕ ವೃತ್ತದಲ್ಲಿ ಬೈಕ್ ಕದ್ದು ಪರಾರಿಯಾದ ಕಳ್ಳ – ಸಿಸಿಟಿವಿ ಯಲ್ಲಿ ಕಳ್ಳತನದ ದೃಶ್ಯ ಸೆರೆ
ರಿಪ್ಪನ್‌ಪೇಟೆ : ಇಲ್ಲಿನ ವಿನಾಯಕ ವೃತ್ತದಲ್ಲಿ ನಿಲ್ಲಿಸಿದ್ದ ಬೈಕ್ ನ್ನು ಹಾಡಹಗಲೇ ಕಳ್ಳತನ ಮಾಡಿ ಕಳ್ಳ ಪರಾರಿಯಾದ ಘಟನೆ ಗುರುವಾರ ನಡೆದಿದೆ.
ಹೊಸನಗರ ರಸ್ತೆಯ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬೈಕ್ ನ್ನು ಕಳ್ಳ ಕದ್ದೊಯ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಪಟ್ಟಣದ ಸಮೀಪದ ಬೆನವಳ್ಳಿ ಗ್ರಾಮದ ಪರಶುರಾಮ್ ಎಂಬುವರು ಹೊಸನಗರ ರಸ್ತೆಯಲ್ಲಿರುವ ಅರಳಿಕಟ್ಟೆ ಬಳಿಯಲ್ಲಿ ಬೈಕ್(KA 15 V 8554) ನಿಲ್ಲಿಸಿ ಹೋಗಿದ್ದರು ನಂತರ ಸ್ವಲ್ಪ ಸಮಯದ ನಂತರ ಹಿಂದಿರುಗಿ ಬಂದಾಗ ಬೈಕ್ ಇರಲಿಲ್ಲ ನಂತರ ಎಲ್ಲ ಕಡೆ ಹುಡುಕಾಡಿ ಇಂದು ರಿಪ್ಪನ್‌ಪೇಟೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಪರಶುರಾಮ್ ಅರಳಿಕಟ್ಟೆ ಬಳಿಯಲ್ಲಿ ಬೈಕ್ ನಿಲ್ಲಿಸಿ ಲಾಕ್ ಮಾಡಿರಲಿಲ್ಲ. ಲಡ್ಡು ಬಂದ್ ಬಾಯಿಗೆ ಬಿದ್ದಂತೆ ಕಳ್ಳನಿಗೆ ಅದುವೇ ವರವಾಯಿತು.
ಕೆಲ ಹೊತ್ತು ಗಾಡಿ ಮೇಲೆ ಕುಳಿತುಕೊಳ್ಳುವ ಕಳ್ಳ ಯಾರಾದ್ರೂ ನೋಡ್ತಾರಾ ಅಂತ ನೋಡಿದ್ದಾನೆ. ಬಳಿಕ ಬೈಕ್ ನ್ನು ಚಲಾಯಿಸಿಕೊಂಡು ಪರಾರಿಯಾಗಿದ್ದಾನೆ. ಈಗ ಕಳೆದು ಹೋಗಿರೋ ಬೈಕ್ ಹುಡುಕಿಕೊಡಿ ಎಂದು ಮಾಲೀಕ ರಿಪ್ಪನ್‌ಪೇಟೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.
ಹಾಡುಹಗಲೇ ಜನನಿಬಿಡ ಪ್ರದೇಶದಲ್ಲಿ ಬೈಕ್ ಕಳ್ಳತನವಾಗಿರುವುದು ಜನರಲ್ಲಿ ಆತಂಕವನ್ನುಂಟು ಮಾಡಿದೆ.