Ripponpete | ಅನಧಿಕೃತ ಕಟ್ಟಡ ತೆರವಾಗಲಿಲ್ಲ.!ಕಾಮಗಾರಿ ಮುಗಿದಿಲ್ಲ..! ಧೂಳಿನ ಕಿರಿಕಿರಿ ತಪ್ಪಿಲ್ಲ..! ರಿಪ್ಪನ್‌ಪೇಟೆಯ ರಸ್ತೆ ಅಗಲೀಕರಣದ ಕಾಮಗಾರಿಯ ಕಥೆ..ವ್ಯಥೆ

Ripponpete | ಅನಧಿಕೃತ ಕಟ್ಟಡ ತೆರವಾಗಲಿಲ್ಲ.!ಕಾಮಗಾರಿ ಮುಗಿದಿಲ್ಲ..! ಧೂಳಿನ ಕಿರಿಕಿರಿ ತಪ್ಪಿಲ್ಲ..!  ರಿಪ್ಪನ್‌ಪೇಟೆಯ ರಸ್ತೆ ಅಗಲೀಕರಣದ ಕಾಮಗಾರಿಯ ಕಥೆ..ವ್ಯಥೆ

ರಿಪ್ಪನ್‌ಪೇಟೆ : ರಸ್ತೆ ಅಗಲೀಕರಣಕ್ಕೆ ನಿಗದಿ ಪಡಿಸಲಾದ ಜಾಗ ತೆರವು ಗೊಳಿಸದೇ ಪ್ರಭಾವಿ ವ್ಯಕ್ತಿಗಳು ಇರುವುದರಿಂದ ರಸ್ತೆ ಅಗಲೀಕರಣ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ.ಇದರಿಂದಾಗಿ ಸಾಗರ ರಸ್ತೆಯ ನಿವಾಸಿಗಳು ಮತ್ತು ಸಾರ್ವಜನಿಕರ ಓಡಾಡದಂತಾಗಿ ಎಲ್ಲೆಂದರಲ್ಲಿ  ಕುಡಿಯುವ ನೀರಿನ ಪೈಪ್‌ಗಳು ಒಡೆದು ನೀರು ರಸ್ತೆ ಚರಂಡಿ ಪಾಲಾಗುವಂತಾಗಿದೆ.

ಜನಪ್ರತಿನಿಧಿಗಳು ವಿಶೇಷ ಆಸಕ್ತಿ ವಹಿಸಿ ರಿಪ್ಪನ್‌ಪೇಟೆಯ ವಿನಾಯಕ ವೃತ್ತದಿಂದ ಸಾಗರ ರಸ್ತೆಯ ಎಪಿಎಂಸಿ ಯಾರ್ಡ್ ಒಂದು ಕೀ ಮೀ ದೂರದ ದ್ವಿ ಪಥ ರಸ್ತೆ ಆಭಿವೃದ್ದಿಗೆ 5.13 ಕೋಟಿ ರೂ ಅನುದಾನವನ್ನು ಬಿಡುಗಡೆಗೊಳಿಸಿ ಕಾಮಗಾರಿಗೆ ಚಾಲನೆ ನೀಡಲಾಗಿದ್ದರೂ ಕೂಡಾ ಕಾಮಗಾರಿ ಅಮೆಗತಿಯಲ್ಲಿ ಸಾಗುವಂತಾಗಿದೆ. ಒಂದು ಕಿಮೀ ರಸ್ತೆ ಮಾಡಲು ಒಂದು ವರ್ಷ ಬೇಕಾ.?? ಎಂದು ಸಾರ್ವಜನಿಕರು ಆಡಿಕೊಳ್ಳುತಿದ್ದಾರೆ.

ಇನ್ನೂ ಸಾಗರ ರಸ್ತೆಯ ಎಡ ಮತ್ತು ಬಲಭಾಗದಲ್ಲಿ ಸಾಕಷ್ಟು ಅಂಗಡಿ ವಾಸದ ಮನೆಗಳು ಇದ್ದು ಅವುಗಳನ್ನು ತೆರವುಗೊಳಿಸುತ್ತಾ ಬಾಕ್ಸ್ ಚರಂಡಿ ಮತ್ತು ಡಿವೈಡರ್ ಕಾಮಗಾರಿ ಜೊತೆ ಡಾಂಬರೀಕರಣವನ್ನು ಸಹ ಅಲ್ಪಸ್ವಲ್ಪ ಮಾಡುತ್ತಾ ಬರುತ್ತಿದ್ದು ವಿನಾಯಕ ವೃತ್ತದ ಹತ್ತಿರದ ಖಾಸಗಿ ಪ್ರಭಾವಿ ವ್ಯಕ್ತಿಯೊಬ್ಬರ ಅಂಗಡಿ ಬಳಿ ಲೋಕೋಪಯೋಗಿ ಇಲಾಖೆಯವರು ನಿಗದಿ ಪಡಿಸಲಾದ ಜಾಗವನ್ನು ತೆರವುಗೊಳಿಸದೇ ಕಾಮಗಾರಿಗೆ ಕಂಟಕವಾಗಿದ್ದಾರೆ.

ಈ ಹಿಂದೆ ಅಳವಡಿಸಲಾದ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ ಅಗಲೀಕರಣದ ರಸ್ತೆಯ ಬಾಕ್ಸ್ ಚರಂಡಿಯ ಹೊರಗೆ ಅಳವಡಿಸಲಾಗಿದ್ದು ವಿನಾಯಕ ವೃತ್ತದ ಹತ್ತಿರದ ಖಾಸಗಿ ಪ್ರಭಾವಿ ವ್ಯಕ್ತಿಯೊಬ್ಬರ ಅಂಗಡಿ ಬಳಿಯಲ್ಲಿರುವ ವಿದ್ಯುತ್ ಕಂಬ ಹಾಕಲು ಬಿಡದೇ ಪ್ರತಿಷ್ಟೆ ಮಾಡುತ್ತಿದ್ದು ಊರಿಗೆಲ್ಲಾ ಒಂದು ಕಾನೂನು ಆದರೆ ಈ ವ್ಯಕ್ತಿಗೆ ಒಂದು ಕಾನೂನು ಮೆಸ್ಕಾಂ ಇಲಾಖೆಯ 11 ಕೆ.ವಿ.ಲೈನ್‌ಯನ್ನು ಕಟ್ಟಡದ ಮೇಲ್ಬಾಗದಲ್ಲಿ ಎಳೆದುಕೊಂಡು ಹೋಗಿ ಎಂದು ಬೃಹತ್ ಗಾತ್ರದ ವಿದ್ಯುತ್‌ನ ನಾಲ್ಕು ಕಂಬಗಳನ್ನು ತಂದಿರಿಸಿದ್ದು ಸಾರ್ವಜನಿಕರನ್ನು ಇನ್ನಷ್ಟು ಕುಪಿತರನ್ನಾಗಿಸಲು ಕಾರಣವಾಗಿತ್ತು.

ರಸ್ತೆಯ ಮಧ್ಯದಲ್ಲಿ ಅಪಘಾತಕ್ಕೆ ಅಹ್ವಾನಿಸುತ್ತಿರುವ ವಿದ್ಯುತ್ ಕಂಬಗಳು :

ತೀರ್ಥಹಳ್ಳಿ ರಸ್ತೆಯಲ್ಲಿ ಅಗಲೀಕರಣ ಕಾಮಗಾರಿ ಭರದಿಂದ ಸಾಗುತ್ತಿದ್ದರೂ ಕೂಡಾ ರಸ್ತೆಯಂಚಿನಲ್ಲಿದ್ದ ವಿದ್ಯುತ್ ಕಂಬಗಳನ್ನು ತೆರವುಗೊಳಿಸದೇ ಜಲ್ಲಿಕಲ್ಲು ಬಿಚಾವಣೆ ಮಾಡುತ್ತಿದ್ದು ಅಪಘಾತಕ್ಕೆ ಆಹ್ವಾನಿಸುವಂತಿವೆ.

ಗುತ್ತಿಗೆದಾರನಿಗೆ ಬೇಗ ಕೆಲಸ ಮುಗಿದರೆ ಸಾಕು ಎಂಬ ಚಿಂತೆ.! ವಾಹನಸವಾರರಿಗೆ ಯಾವ ಸಂದರ್ಭದಲ್ಲಿ ಏನಾಗುತ್ತದೋ ಎಂಬ ಭಯ ಈ ಎರಡರ ಮಧ್ಯ ಸಾರ್ವಜನಿಕರು ಓಡಾಡದಂತಾಗಿರುವುದು ಮಾತ್ರ ಎಡಗೈಯಲ್ಲಿ ಜೀವ ಹಿಡಿದುಕೊಂಡು ಓಡಾಡಬೇಕಾದ ಆನಿವಾರ್ಯತೆ ಎದುರಾಗಿದೆ.ಸಂಜೆಯಾಯಿತ್ತೆಂದರೆ ತೀರ್ಥಹಳ್ಳಿ ರಸ್ತೆಯ ಬಸ್ ನಿಲ್ದಾಣಕ್ಕೆ ಹತ್ತಿರವಿರುವ  ಬಾರ್ ಅಂಡ್ ರೆಸ್ಟೋರೆಂಟ್‌ಗಳಿಂದಾಗಿ ರಸ್ತೆಯಂಚಿನಲ್ಲಿ ಬಾರಿ ವಾಹನಗಳ ದಟ್ಟಣೆಯಿಂದಾಗಿ ಪ್ರಯಾಣಿಕರು ವಾಹನಸವಾರರು ಟ್ರಾಫಿಕ್ ಕಿರಿಕಿರಿಯಿಂದ ಗಂಟೆಗಟ್ಟಲೇ ಕಾಯಬೇಕಾದ ಸ್ಥಿತಿ ಎದುರಾಗಿದೆ.ಒಟ್ಟಾರೆಯಾಗಿ ರಿಪ್ಪನ್‌ಪೇಟೆಯಲ್ಲಿ ಕಳೆದ ಐದಾರು ತಿಂಗಳಿಂದ ಧೂಳಿನ ಮಯದಿಂದ ಮುಕ್ತಿಯಿಲ್ಲದೆ ಪರಿತಪ್ಪಿಸುವಂತಾಗಿದೆ.
ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Recent Posts

ಕೋಡೂರಿನಲ್ಲಿ ಅಗ್ನಿ ಅವಘಡ: ಸರ್ವಸ್ವ ಕಳೆದುಕೊಂಡ ಕಾರ್ಮಿಕನಿಗೆ ಕಟ್ಟಡ ಕಾರ್ಮಿಕರ ಸಂಘದ ಆಸರೆ

ಕೋಡೂರಿನಲ್ಲಿ ಅಗ್ನಿ ಅವಘಡ: ಸರ್ವಸ್ವ ಕಳೆದುಕೊಂಡ ಕಾರ್ಮಿಕನಿಗೆ ಕಟ್ಟಡ ಕಾರ್ಮಿಕರ ಸಂಘದ ಆಸರೆ A fire caused by a…

5 hours ago

ಅರಸಾಳಿನಿಂದ ವಿಶ್ವ ವೇದಿಕೆಗೆ; ಕವನಶ್ರೀಗೆ ಸತತ ಮೂರನೇ ಗಿನ್ನಿಸ್ ಸಾಧನೆ

ಅರಸಾಳಿನಿಂದ ವಿಶ್ವ ವೇದಿಕೆಗೆ; ಕವನಶ್ರೀಗೆ ಸತತ ಮೂರನೇ ಗಿನ್ನಿಸ್ ಸಾಧನೆ Arasalu's Kavanasree H.M. earns two more Guinness…

5 hours ago

ಸರ್ಕಾರಿ ಜಾಗದಲ್ಲಿ ಖಾಸಗಿ ಬೇಲಿ; ಕಂದಾಯ ಅಧಿಕಾರಿಗಳಿಂದ ತೆರವು – ಹಕ್ಕುಪತ್ರ–9/11 ದಾಖಲೆ ಕುರಿತು ವಾಗ್ವಾದ

ರಿಪ್ಪನ್ ಪೇಟೆಯಲ್ಲಿ ಸರ್ಕಾರಿ ಜಾಗದ ಬೇಲಿ ತೆರವು; ಹಕ್ಕುಪತ್ರ–9/11 ದಾಖಲೆ ಕುರಿತು ವಾಗ್ವಾದ Revenue officials removed a fence…

7 hours ago

ರಿಪ್ಪನ್‌ಪೇಟೆಯಲ್ಲಿ ಮೋದಿ ಜನ್ಮದಿನಾಚರಣೆ : ವರಸಿದ್ದಿವಿನಾಯಕ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ

ರಿಪ್ಪನ್‌ಪೇಟೆಯಲ್ಲಿ ಮೋದಿ ಜನ್ಮದಿನಾಚರಣೆ : ವರಸಿದ್ದಿವಿನಾಯಕ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ Special pooja was offered at Varasiddhi…

1 day ago

ಪ್ರಧಾನಿ ಮೋದಿ ಜನ್ಮದಿನ: ಶಿವಮೊಗ್ಗದಲ್ಲಿ ‘ಸೇವಾ ಸಂಕಲ್ಪ ಅಭಿಯಾನ’ಕ್ಕೆ ಚಾಲನೆ

ಪ್ರಧಾನಿ ಮೋದಿ ಜನ್ಮದಿನ: ಶಿವಮೊಗ್ಗದಲ್ಲಿ ‘ಸೇವಾ ಸಂಕಲ್ಪ ಅಭಿಯಾನ’ಕ್ಕೆ ಚಾಲನೆ BJP launches a month-long Seva Sankalpa Abhiyan…

1 day ago

ಮೋದಿ ಹುಟ್ಟುಹಬ್ಬ ‘ನಿರುದ್ಯೋಗಿಗಳ ದಿನ’ವಾಗಿ ಆಚರಣೆ; ಯುವ ಕಾಂಗ್ರೆಸ್ ಪ್ರತಿಭಟನೆ

ಮೋದಿ ಹುಟ್ಟುಹಬ್ಬ ‘ನಿರುದ್ಯೋಗಿಗಳ ದಿನ’ವಾಗಿ ಆಚರಣೆ; ಯುವ ಕಾಂಗ್ರೆಸ್ ಪ್ರತಿಭಟನೆ Youth Congress and NSUI workers in Shivamogga…

1 day ago