Ripponpete | ಅಡಿಕೆ ಮರದಿಂದ ಕೆಳಗೆ ಬಿದ್ದು ರೈತ ಸಾವು
ರಿಪ್ಪನ್‌ಪೇಟೆ : ಇಲ್ಲಿನ ಗರ್ತಿಕೆರೆ ಗ್ರಾಪಂ ವ್ಯಾಪ್ತಿಯ ಕಮ್ಮಚ್ಚಿ ಗ್ರಾಮದಲ್ಲಿ ಅಡಿಕೆ ಮರಕ್ಕೆ ಔಷದಿ ಸಿಂಪಡಿಸುವಾಗ ಮರದಿಂದ ಕೆಳಗೆ ಬಿದ್ದು ರೈತನೊಬ್ಬ ಸಾವನ್ನಪ್ಪಿರುವ ಘಟನೆ ನಡೆದಿದೆ.
ಕಮ್ಮಚ್ಚಿ ಗ್ರಾಮದ ಪ್ರದೀಪ್ ಟಿ ಕೆ (42) ಮೃತಪಟ್ಟ ದುರ್ಧೈವಿಯಾಗಿದ್ದಾರೆ.
ಕಮ್ಮಚ್ಚಿ ಗ್ರಾಮದಲ್ಲಿ ಇಂದು ಸಂಜೆ 4 ಗಂಟೆ ಸಮಯದಲ್ಲಿ ಅಡಿಕೆ ತೋಟಕ್ಕೆ ಔಷಧಿ ಸಿಂಪಡಿಸುತಿದ್ದ ರೈತ ಪ್ರದೀಪ್ ಆಯ ತಪ್ಪಿ ಕೆಳಗೆ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರಿಪ್ಪನ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇರಿಸಲಾಗಿದೆ.
ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.