Accident | ಅಂದಾಸುರ ರೈಲ್ವೆ ಗೇಟ್ ಬಳಿ ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ – ಓರ್ವ ಸಾವು
ಆನಂದಪುರ : ಇಲ್ಲಿನ ಅಂದಾಸುರ ರೈಲ್ವೆ ಗೇಟ್ ಬಳಿ ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶುಕ್ರವಾರ ರಾತ್ರಿ ಸಂಭವಿಸಿದೆ.
ಹೊಸನಗರ ಸಮೀಪದ ಮಾವಿನಕೊಪ್ಪದ ನಾಗರಾಜ್ (35) ಮೃತಪಟ್ಟ ವ್ಯಕ್ತಿಯಾಗಿದ್ದಾರೆ.
ನಡೆದಿದ್ದೇನು..???
ಆನಂದಪುರದಲ್ಲಿ ವೈರಿಂಗ್ ಕೆಲಸ ನೋಡಿಕೊಂಡು ಬರಲು ಮಾವಿನಕೊಪ್ಪದಿಂದ ಸಂಜೆ 7.00 ಸುಮಾರಿಗೆ ಆನಂದಪುರಕ್ಕೆ ಕೆಎ-14-ವೈ-4562 ಬಜಾಜ್ ಪಲ್ಸರ್ ಬೈಕಿನಲ್ಲಿ ಹೋಗಿ ಹಿಂದಿರುಗುವಾಗ ಅಂದಾಸುರದ ರೈಲ್ವೆ ಗೇಟ್ ಬಳಿಯಲ್ಲಿ ಕೆಎ- 14-ಇ-ಜೆಡ್-1926 ಟಿವಿಎಸ್ ರೈಡರ್ ಬೈಕ್ ಗೆ ಮುಖಾಮುಖಿ ಡಿಕ್ಕಿಯಾಗಿದೆ.
ಅಪಘಾತದಲ್ಲಿ ತಲೆಗೆ ತೀವ್ರ ಪೆಟ್ಟಾದ ಹಿನ್ನಲೆಯಲ್ಲಿ ನಾಗರಾಜ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಟಿವಿಎಸ್ ರೈಡರ್ ಬೈಕ್ ನಲ್ಲಿದ್ದ ತಿಮ್ಮಪ್ಪ ಪುರದಾಳು ಹಾಗೂ ಸೀತಮ್ಮ ಎಂಬವರಿಗೆ ತೀವ್ರ ಗಾಯವಾಗಿದ್ದು ತಕ್ಷಣ ಅವರನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆನಂದಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.