ಅಡಿಕೆ ತೋಟಕ್ಕೆ ಎಲೆಚುಕ್ಕಿ ರೋಗ – ಸಾಲಭಾದೆಗೆ ತತ್ತರಿಸಿದ ರೈತ ಆತ್ಮಹತ್ಯೆ! | Crime News
ತೀರ್ಥಹಳ್ಳಿ : ಹೊಸಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಉಂಟುರು ಕಟ್ಟೆ ಕೈಮರ ಗ್ರಾಮದ ರೈತನೋರ್ವ ಮತ್ತಿಗ ವರಾಹಿ ಹಿನ್ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ನಡೆದಿದೆ.
ಅತ್ತಿಗಾರ ಬೈಲು ಗ್ರಾಮದ ಉಮೇಶ್ ( 55 ವರ್ಷ ) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.
ತಾವು ಬೆಳೆದ ಅಡಕೆ ತೋಟಕ್ಕೆ ಎಲೆಚುಕ್ಕಿ ರೋಗ ತೀವ್ರವಾಗಿ ಹರಡಿದ್ದರಿಂದ ಬೇಸತ್ತು ಹೋಗಿದ್ದರು.ಕೈಮರ ಸೊಸೈಟಿ ಹಾಗು ವಿವಿಧ ಕಡೆ ಸಾಲ ಕೂಡ ಮಾಡಿಕೊಂಡಿದ್ದ ಉಮೇಶ್ ಆತ್ಮ ಹತ್ಯೆ ಗೆ ಶರಣಾಗಿದ್ದಾರೆ.
ಕಳೆದ ಆರು ತಿಂಗಳ ಹಿಂದೆ ಕೂಡ ಇದೆ ಗ್ರಾಮದ ರೈತರೊಬ್ಬರು ಎಲೆ ಚುಕ್ಕಿ ರೋಗದ ಕಾರಣ ಆತ್ಮ ಹತ್ಯೆಗೆ ಶರಣಾಗಿದ್ದರು.